BAN vs AFG: ಬಾಂಗ್ಲಾ ವಿರುದ್ಧ ಟಿ20 ಸರಣಿಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ಅಫ್ಘಾನಿಸ್ತಾನ; ಅನುಭವಿ ಆಟಗಾರ ವಾಪಸ್
ಆತಿಥೇಯ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಗೆ ಪ್ರವಾಸಿ ಅಫ್ಘಾನಿಸ್ತಾನ 16 ಸದಸ್ಯರ ತಂಡವನ್ನು ಭಾನುವಾರ, ಜುಲೈ 2ರಂದು ಪ್ರಕಟಿಸಿದ್ದು, ಅನ್‌ಕ್ಯಾಪ್ಡ್ ವೇಗದ ಬೌಲರ್ ವಫಾದರ್ ಮೊಮಂಡ್ ಅವರಿಗೆ ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಮಾಡಲಾಗಿದೆ.
ಇನ್ನು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು ಅನುಭವಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಮೊಹಮ್ಮದ್ ಶಹಜಾದ್ ಮತ್ತು ಆರಂಭಿಕ ಬ್ಯಾಟರ್ ಹಜರತುಲ್ಲಾ ಝಜೈ ಅವರನ್ನು ತಂಡಕ್ಕೆ ಮರು ಸೇರ್ಪಡೆಗೊಳಿಸಲಾಗಿದೆ.

ಅಫ್ಘಾನಿಸ್ತಾನ ತಂಡವು ಜುಲೈ 05ರಂದು ಬಾಂಗ್ಲಾದೇಶ ಪ್ರವಾಸವನ್ನು ಆರಂಭಿಸಲಿದ್ದು, ಮೂರು ಪಂದ್ಯಗಳ ಏಕದಿನ ಸರಣಿಯು ಚಟ್ಟೋಗ್ರಾಮ್‌ನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಜುಲೈ 11ರಂದು ಏಕದಿನ ಸರಣಿಯ ಮುಗಿದ ಬಳಿಕ, ಸಿಲ್ಹೆಟ್‌ನ ಜಿಲ್ಲಾ ಕ್ರೀಡಾಂಗಣದಲ್ಲಿ ಜುಲೈ 14ರಂದು ಆರಂಭವಾಗುವ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಟಿ20 ಸರಣಿಯ ಎರಡನೇ ಪಂದ್ಯ ಜುಲೈ 16ರಂದು ಸಿಲ್ಹೆಟ್‌ನಲ್ಲೇ ನಡೆಯಲಿದೆ.
ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ಎಸಿಬಿ) ಮುಖ್ಯ ಆಯ್ಕೆಗಾರ ಅಸಾದುಲ್ಲಾ ಖಾನ್ ಈ ಕುರಿತು ಪ್ರತಿಕ್ರಿಯಿಸಿದ್ದು, 2021ರಲ್ಲಿ ನ್ಯೂಜಿಲೆಂಡ್ ವಿರುದ್ಧ ಕೊನೆಯ ಬಾರಿಗೆ ಟಿ20 ಪಂದ್ಯವಾಡಿದ್ದ ಮೊಹಮ್ಮದ್ ಶಹಜಾದ್ ಅವರನ್ನು ದೇಶೀಯ ಕ್ರಿಕೆಟ್‌ನಲ್ಲಿ ಅವರ ಇತ್ತೀಚಿನ ಉತ್ತಮ ಪ್ರದರ್ಶನಗಳಿಂದ ರಾಷ್ಟ್ರೀಯ ತಂಡಕ್ಕೆ ಮರಳಿ ಕರೆತರಲಾಗಿದೆ ಎಂದು ಹೇಳಿದ್ದಾರೆ.
2024ರಲ್ಲಿ ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ತಮ್ಮ ತಂಡವನ್ನು ಅಣಿಗೊಳಿಸುವ ಮೊದಲು ಆಯ್ಕೆ ಸಮಿತಿಯು ಎಲ್ಲಾ ಆಟಗಾರರಿಗೆ ನ್ಯಾಯಯುತ ಅವಕಾಶವನ್ನು ನೀಡಲು ಬಯಸುತ್ತದೆ ಎಂದು ಅಸಾದುಲ್ಲಾ ಖಾನ್ ತಿಳಿಸಿದರು.
ಅಫ್ಸರ್ ಝಜೈ, ಉಸ್ಮಾನ್ ಘನಿ, ಶರಫದುಲ್ಲಾ ಅಶ್ರಫ್, ಗುಬೈದಿನ್ ನೈಬ್‌ಗೆ ಕೊಕ್
ಇದೇ ವೇಳೆ ಅಫ್ಸರ್ ಝಜೈ, ಉಸ್ಮಾನ್ ಘನಿ, ಶರಫದುಲ್ಲಾ ಅಶ್ರಫ್ ಮತ್ತು ಅಫ್ಘಾನಿಸ್ತಾನ ತಂಡದ ಮಾಜಿ ನಾಯಕ ಗುಬೈದಿನ್ ನೈಬ್ ಅವರು ಮಾರ್ಚ್ 2023ರಲ್ಲಿ ಪಾಕಿಸ್ತಾನ ವಿರುದ್ಧ ಆಡಿದ ತಂಡದ ಭಾಗವಾಗಿದ್ದರು. ಇದೀಗ ಬಾಂಗ್ಲಾದೇಶ ಪ್ರವಾಸದ ತಂಡದಲ್ಲಿ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
"ವಯಸ್ಸಿನ ಕಾರಣ ಗುಬೈದಿನ್ ನೈಬ್ ಅವರ ಸಮಯ ಮುಗಿದಿದೆ. ನಾನು ಹೇಳಿದಂತೆ, ನಾವು ಈ ಪಂದ್ಯಗಳ ಮೂಲಕ ವಿಭಿನ್ನ ಆಟಗಾರರನ್ನು ನೋಡುವ ಪ್ರಕ್ರಿಯೆಯಲ್ಲಿದ್ದೇವೆ. ಹಾಗಾಗಿ ನಾವು ಭವಿಷ್ಯದಲ್ಲಿ ಉತ್ತಮ ತಂಡವನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ," ಎಂದು ಅಫ್ಘಾನಿಸ್ತಾನ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಅಸಾದುಲ್ಲಾ ಖಾನ್ ಹೇಳಿದರು.
ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಗಾಗಿ ಅಫ್ಘಾನಿಸ್ತಾನ ತಂಡ
ರಶೀದ್ ಖಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ಮೊಹಮ್ಮದ್ ಶೆಹಜಾದ್, ವಫಾದರ್ ಮೊಮಂಡ್, ಹಜರತುಲ್ಲಾ ಝಜೈ, ಸೇದಿಕುಲ್ಲಾ ಅಟಲ್, ನಜೀಬುಲ್ಲಾ ಝದ್ರಾನ್, ಕರೀಮ್ ಜನತ್, ಮೊಹಮ್ಮದ್ ನಬಿ, ಅಜ್ಮತುಲ್ಲಾ ಒಮರ್ಜಾಯ್, ನೂರ್ ಅಹ್ಮದ್, ಮುಜೀಬ್ ಉರ್ ರೆಹಮಾನ್, ಫರೀದ್ ಅಹ್ಮದ್, ಫಝಲ್ಹಕ್ ಫಾರೂಕಿ, ನವೀನ್-ಉಲ್-ಹಕ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications