BAN vs AFG: ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ ಅಫ್ಘಾನಿಸ್ತಾನ ತಂಡ ಪ್ರಕಟ; ಸ್ಟಾರ್ ಆಲ್‌ರೌಂಡರ್ ವಾಪಸ್
ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು ಭಾನುವಾರ, ಜೂನ್ 18ರಂದು ಹಶ್ಮತುಲ್ಲಾ ಶಾಹಿದಿ ನಾಯಕತ್ವದ ತಂಡವನ್ನು ಪ್ರಕಟಿಸಿದೆ.
ಸ್ಟಾರ್ ಸ್ಪಿನ್ ಆಲ್‌ರೌಂಡರ್ ರಶೀದ್ ಖಾನ್ ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಿಂದ ಹೊರಗುಳಿದ ಬಳಿಕ, ಅಫ್ಘಾನಿಸ್ತಾನ ತಂಡಕ್ಕೆ ಮರಳಿದ್ದಾರೆ. ಈ ಮಧ್ಯೆ, ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ಸ್ಪಿನ್ನರ್ ನೂರ್ ಅಹ್ಮದ್ ತಂಡದಲ್ಲಿ ಸ್ಥಾನ ತಪ್ಪಿಸಿಕೊಂಡಿದ್ದಾರೆ.

ಅಫ್ಘಾನಿಸ್ತಾನ ತಂಡವು ಬಾಂಗ್ಲಾದೇಶ ವಿರುದ್ಧ ಜುಲೈ 5ರಿಂದ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಎರಡು ಮತ್ತು ಮೂರನೇ ಏಕದಿನ ಪಂದ್ಯಗಳು ಕ್ರಮವಾಗಿ ಜುಲೈ 8 ಮತ್ತು ಜುಲೈ 11ರಂದು ನಡೆಯಲಿದೆ. ಇದೇ ವೇಳೆ ಕೆಲವು ಯುವ ಆಟಗಾರರಿಗೆ ರಾಷ್ಟ್ರೀಯ ತಂಡದಿಂದ ಇದೇ ಮೊದಲ ಬಾರಿಗೆ ಕರೆ ಬಂದಿದೆ.
ರಾಷ್ಟ್ರೀಯ ತಂಡದಿಂದ ಮೊದಲ ಕರೆ ಪಡೆದ ಇಝಾರುಲ್ಹಕ್ ನವೀದ್
ಹಿಂದಿನ ಬಿಗ್‌ಬಾಶ್ ಲೀಗ್‌ನಲ್ಲಿ ಉತ್ತಮವಾಗಿ ಆಡಿದ ಲೆಗ್ ಸ್ಪಿನ್ನರ್ ಇಜಾರುಲ್ಹಕ್ ನವೀದ್ ಅವರಿಗೆ ರಾಷ್ಟ್ರೀಯ ತಂಡದಿಂದ ಚೊಚ್ಚಲ ಕರೆ ನೀಡಲಾಗಿದೆ. ಅಷ್ಟೇ ಅಲ್ಲದೆ, ಆರು ಯುವ ಆಟಗಾರರಾದ ಶಾಹಿದುಲ್ಲಾ, ಜಿಯಾ-ಉರ್-ರೆಹಮಾನ್, ವಫಾದರ್ ಮೊಮಂಡ್, ಮೊಹಮ್ಮದ್ ಸಲೀಮ್ ಮತ್ತು ಸಯ್ಯದ್ ಶಿರ್ಜಾದ್ ಕೂಡ ತಂಡದಲ್ಲಿದ್ದಾರೆ.
ಮೀಸಲು ಆಟಗಾರರ ಪಟ್ಟಿಯಲ್ಲಿ ನವೀನ್-ಉಲ್-ಹಕ್, ಗುಲ್ಬದಿನ್
ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು ಮುಂಬರುವ ಏಕದಿನ ಪಂದ್ಯಗಳು ಮತ್ತು ಮುಂಬರುವ ಏಕದಿನ ವಿಶ್ವಕಪ್‌ಗೆ ಮೀಸಲು ಆಟಗಾರರನ್ನು ಹೆಸರಿಸಿದೆ. ಗಮನಾರ್ಹವಾಗಿ, ನವೀನ್-ಉಲ್-ಹಕ್ ಮತ್ತು ಗುಲ್ಬದಿನ್ ನೈಬ್ ಮೀಸಲು ಪಟ್ಟಿಗೆ ಹೆಸರಿಸಲಾದ ಹತ್ತು ಆಟಗಾರರಲ್ಲಿ ಸ್ಥಾನ ಪಡೆದಿದ್ದಾರೆ.

ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿಗೆ ಅಫ್ಘಾನಿಸ್ತಾನ ತಂಡ
ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ರಿಯಾಜ್ ಹಸನ್, ರಹಮತ್ ಶಾ, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್, ರಶೀದ್ ಖಾನ್, ಅಜ್ಮತುಲ್ಲಾ ಒಮರ್ಜಾಯ್, ಮುಜೀಬ್ ಉರ್ ರಹಮಾನ್, ಫಜಲ್ಹಕ್ ಫಾರೂಕಿ, ಅಬ್ದುಲ್ ರಹಮಾನ್, ಶಾಹಿದುಲ್ಲಾ, ಜಿಯಾ-ಉರ್-ರೆಹಮಾನ್, ವಫಾದರ್ ಮೊಮಂಡ್, ಮೊಹಮ್ಮದ್ ಸಲೀಮ್, ಸಯದ್ ಶಿರ್ಜಾದ್.
ಅಫ್ಘಾನಿಸ್ತಾನ ಮೀಸಲು ಆಟಗಾರರು: ಕರೀಮ್ ಜನತ್, ಜುಬೈದ್ ಅಕ್ಬರಿ, ಖೈಸ್ ಅಹ್ಮದ್, ಇಹ್ಸಾನುಲ್ಲಾ ಜನತ್, ಗುಲ್ಬದಿನ್ ನೈಬ್, ಶರಫುದ್ದೀನ್ ಅಶ್ರಫ್, ನವೀನ್-ಉಲ್-ಹಕ್, ಫರೀದ್ ಮಲಿಕ್, ದರ್ವಿಶ್ ರಸೂಲಿ, ಇಶಾಕ್ ರಹೀಮಿ.
ಅಫ್ಘಾನಿಸ್ತಾನ ವಿರುದ್ಧ ಬಾಂಗ್ಲಾದೇಶ ತಂಡ ಪ್ರಕಟ
ಇನ್ನು ಪ್ರವಾಸಿ ಅಫ್ಘಾನಿಸ್ತಾನ ವಿರುದ್ಧದ ಮುಂಬರುವ ಏಕದಿನ ಅಂತಾರಾಷ್ಟ್ರೀಯ ಸರಣಿಗೆ 15 ಸದಸ್ಯರ ಬಾಂಗ್ಲಾದೇಶ ತಂಡವನ್ನು ಶನಿವಾರ, ಜೂನ್ 17ರಂದೇ ಪ್ರಕಟಿಸಿದೆ.
ಮೂರು ಪಂದ್ಯಗಳ ಏಕದಿನ ಸರಣಿಯು ಜುಲೈ 5ರಂದು ಚಟ್ಟೋಗ್ರಾಮ್‌ನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಗಮನಾರ್ಹ ವಿಷಯವೆಂದರೆ, ಇದೇ ಮೈದಾನದಲ್ಲಿ ಏಕದಿನ ಸರಣಿಯ ಎಲ್ಲಾ ಮೂರು ಪಂದ್ಯಗಳನ್ನು ಆಯೋಜಿಸಲಾಗಿದೆ.
ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ಬಾಂಗ್ಲಾದೇಶ ತಂಡ
ತಮೀಮ್ ಇಕ್ಬಾಲ್ (ನಾಯಕ), ಲಿಟ್ಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ತೌಹಿದ್ ಹೃದಯೋಯ್, ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ತಸ್ಕಿನ್ ಅಹ್ಮದ್, ಎಬಾಡೋಟ್ ಹೊಸೈನ್, ಮುಸ್ತಾಫಿಜುರ್ ರೆಹಮಾನ್, ಹಸನ್ ಮಹಮೂದ್, ಶೋರಿಫುಲ್ ಇಸ್ಲಾಂ, ಅಫೀಫ್ ಹೊಸೈನ್, ಮೊಹಮ್ಮದ್ ನಯಿಮ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications