BAN vs NEP: ಟಿ20 ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ವಿಶ್ವದ 2ನೇ ಬೌಲರ್ ಸಂದೀಪ್ ಲಾಮಿಚಾನೆ
ಸೋಮವಾರ, ಜೂನ್ 17ರಂದು ಸೇಂಟ್ ವಿನ್ಸೆಂಟ್‌ನ ಕಿಂಗ್‌ಸ್ಟೌನ್‌ನಲ್ಲಿರುವ ಅರ್ನೋಸ್ ವೇಲ್ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ಧದ 2024ರ ಟಿ20 ವಿಶ್ವಕಪ್ ಪಂದ್ಯದಲ್ಲಿ ನೇಪಾಳದ ಲೆಗ್-ಸ್ಪಿನ್ನರ್ ಬೃಹತ್ ಹೆಗ್ಗುರುತನ್ನು ತಲುಪಿದರು.
ಯುವ ಸ್ಪಿನ್ನರ್ ಸಂದೀಪ್ ಲಾಮಿಚಾನೆ ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 100 ವಿಕೆಟ್‌ಗಳ ಸಾಧನೆ ಮಾಡಿದ ಎರಡನೇ ಬೌಲರ್ ಎಂಬ ಹೆಗ್ಗಳಿಕಗೆ ಪಾತ್ರರಾದರು. ನೇಪಾಳ ಪರವಾಗಿ 100 ವಿಕೆಟ್‌ಗಳ ಹೆಗ್ಗುರುತು ತಲುಪಿದ ತಮ್ಮ ರಾಷ್ಟ್ರದ ಮೊದಲಿಗರಾಗಿ ಇತಿಹಾಸ ನಿರ್ಮಿಸಿದರು.

ಸಂದೀಪ್ ಲಾಮಿಚಾನೆ ತನ್ನ 54ನೇ ಟಿ20 ಪಂದ್ಯದಲ್ಲಿ ಈ ಸಾಧನೆ ಮಾಡಿದರೆ, ತನ್ನ 53ನೇ ಪಂದ್ಯದಲ್ಲಿ ಈ ಸಾಧನೆ ಮಾಡಿರುವ ಅಫ್ಘಾನಿಸ್ತಾನದ ರಶೀದ್ ಖಾನ್ ಮೊದಲ ಸ್ಥಾನದಲ್ಲಿದ್ದಾರೆ.
ಪ್ರಸಕ್ತ ಟಿ20 ವಿಶ್ವಕಪ್‌ಗಾಗಿ ಎರಡು ಬಾರಿ ವೀಸಾ ನಿರಾಕರಿಸಿದ ನಂತರ ಯುವ ಆಟಗಾರ ಸಂದೀಪ್ ಲಾಮಿಚಾನೆ ಯುಎಸ್ಎನಲ್ಲಿ ನಡೆದ ಪಂದ್ಯಗಳಲ್ಲಿ ಆಡಲು ಸಾಧ್ಯವಾಗಲಿಲ್ಲ.
ನಂತರ ವೆಸ್ಟ್ ಇಂಡೀಸ್‌ನಲ್ಲಿ ಆಡಲು ಸಂದೀಪ್ ಲಾಮಿಚಾನೆ ನೇಪಾಳ ತಂಡಕ್ಕೆ ಮರಳಿದರು ಮತ್ತು ಈವರೆಗೆ ಅದ್ಭುತವಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಒಂದು ವಿಕೆಟ್ ಪಡೆಯಲಿಲ್ಲ, ಆದರೆ ತಮ್ಮ ಬ್ಯಾಟಿಂಗ್ ಅನ್ನು ಹಿಡಿತದಲ್ಲಿಟ್ಟರು.
ವೇಗವಾಗಿ 100 ಟಿ20 ವಿಕೆಟ್ ಪಡೆದ ಬೌಲರ್‌ಗಳು
- ರಶೀದ್ ಖಾನ್ (ಅಫ್ಘಾನಿಸ್ತಾನ) - 53 ಪಂದ್ಯಗಳು
- ಸಂದೀಪ್ ಲಾಮಿಚಾನೆ (ನೇಪಾಳ) - 54 ಪಂದ್ಯಗಳು
- ಹ್ಯಾರಿಸ್ ರೌಫ್ (ಪಾಕಿಸ್ತಾನ) - 71 ಪಂದ್ಯಗಳು
- ಮಾರ್ಕ್ ಆಡೈರ್ (ಐರ್ಲೆಂಡ್) - 72 ಪಂದ್ಯಗಳು
- ಬಿಲಾಲ್ ಖಾನ್ (ಒಮನ್) - 72 ಪಂದ್ಯಗಳು
- ಲಸಿತ್ ಮಾಲಿಂಗ (ಶ್ರೀಲಂಕಾ) - 76 ಪಂದ್ಯಗಳು
2024ರ ಟಿ20 ವಿಶ್ವಕಪ್ ಆಘಾತದ ನಂತರ ದೇಶದ ಕ್ಷಮೆಯಾಚಿಸಿದ ಶ್ರೀಲಂಕಾ ಸ್ಟಾರ್ ಆಲ್‌ರೌಂಡರ್!
ಬಾಂಗ್ಲಾದೇಶ ವಿರುದ್ಧ ಮಿಂಚಿದ ಸಂದೀಪ್ ಲಾಮಿಚಾನೆ
ನೇಪಾಳ ತಂಡದ ಸಂದೀಪ್ ಲಾಮಿಚಾನೆ ತಮ್ಮ 4 ಓವರ್‌ಗಳ ಕೋಟಾದಲ್ಲಿ 1 ಮೇಡನ್ ಓವರ್ ಮಾಡಿ 17 ರನ್ ನೀಡಿ 2 ವಿಕೆಟ್ ಪಡೆಯುವ ಮೂಲಕ ಬಾಂಗ್ಲಾದೇಶ ವಿರುದ್ಧ ಉತ್ತಮ ಪ್ರದರ್ಶನ ನೀಡಿದರು.
ಸಂದೀಪ್ ಲಾಮಿಚಾನೆ ತಮ್ಮ ವಿಕೆಟ್ ಖಾತೆ ತೆರೆಯಲು ತಂಝೀಮ್ ಹಸನ್ ಸಕಿಬ್ ಅವರನ್ನು ಬಲೆಗೆ ಬೀಳಿಸಿದರು. ನಂತರ, ನೇಪಾಳ ಕ್ರಿಕೆಟ್ ಇತಿಹಾಸದ ಪುಸ್ತಕದಲ್ಲಿ ತಮ್ಮ ಹೆಸರನ್ನು ಬರೆಯಲು ಜೇಕರ್ ಅಲಿ ಅನಿಕ್ ಅವರನ್ನು ಔಟ್ ಮಾಡಿದರು.
ನೇಪಾಳದ ಲೆಗ್ ಸ್ಪಿನ್ನರ್ ಎದುರಿಸುವುದು ಬಾಂಗ್ಲಾದೇಶದ ಬ್ಯಾಟರ್‌ಗಳಿಗೆ ತುಂಬಾ ಕಠಿಣವಾಗಿತ್ತು. ಹೀಗಾಗಿ ನೇಪಾಳ ಎದುರು 19.3 ಓವರ್‌ಗಳಲ್ಲಿ ಕೇವಲ 106 ರನ್‌ಗಳಿಗೆ ಆಲೌಟ್ ಆದರು.
ಸಂದೀಪ್ ಲಾಮಿಚಾನೆ ಹೊರತುಪಡಿಸಿ, ಸೋಂಪಾಲ್ ಕಾಮಿ, ದೀಪೇಂದ್ರ ಸಿಂಗ್ ಐರಿ ಮತ್ತು ರೋಹಿತ್ ಪೌಡೆಲ್ ತಲಾ 2 ವಿಕೆಟ್ ಪಡೆದು ಮಿಂಚಿದರು.
ಬಾಂಗ್ಲಾದೇಶ ತಂಡದ ಪರ 7 ಬ್ಯಾಟರ್‌ಗಳು ಎರಡಂಕಿ ಮೊತ್ತವನ್ನು ದಾಟಿದರು. ಬಾಂಗ್ಲಾದೇಶ ಪರ ಶಕೀಬ್ ಅಲ್ ಹಸನ್ 22 ಎಸೆತಗಳಲ್ಲಿ 17 ರನ್ ಗಳಿಸಿ ಟಾಪ್ ಸ್ಕೋರರ್ ಎನಿಸಿಕೊಂಡರು.
ಆದರೆ, ಪ್ರತ್ಯುತ್ತರವಾಗಿ ನೇಪಾಳ ತಂಡ 19.2 ಓವರ್‌ಗಳಲ್ಲಿ ಕೇವಲ 85 ರನ್‌ಗಳಿಗೆ ಸರ್ವಪತನ ಕಂಡಿತು ಮತ್ತು 21 ರನ್‌ಗಳ ಹೀನಾಯ ಸೋಲು ಅನುಭವಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications