Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ban W vs Ind W: ಬಾಂಗ್ಲಾದೇಶ ತಂಡಕ್ಕೆ ಭರ್ಜರಿಯಾಗಿ ಸೋಲುಣಿಸಿದ ಹರ್ಮನ್ ಪಡೆ

ಬಾಂಗ್ಲಾದೇಶ ಹಾಗೂ ಭಾರತ ಮಹಿಳಾ ತಂಡಗಳ ನಡುವಿನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಅಮೋಘ ಗೆಲುವು ಸಾಧಿಸಿದೆ. ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿದ ಭಾರತ ತಂಡ ಅದ್ಭುತ ಬೌಲಿಂಗ್ ನಡೆಸಿದ್ದು ಬಾಂಗ್ಲಾದೇಶವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ನಂತರ ಈ ಮೊತ್ತವನ್ನು ಕೇವಲ 3 ವಿಕೆಟ್ ಕಳೆದುಕೊಂಡು ಬೆನ್ನಟ್ಟುವಲ್ಲಿ ಯಶಸ್ವಿಯಾದ ಭಾರತ 7 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿದೆ. ನಾಯಕಿ ಹರ್ಮನ್‌ಪ್ರೀತ್ ಪಂದ್ಯಶ್ರೇಷ್ಠ ಪ್ರದರ್ಶಿ ಪಡೆದುಕೊಂಡಿದ್ದಾರೆ.

ಮೊದಲಿಗೆ ಬ್ಯಾಟಿಂಗ್ ನಡೆಸಿವ ಸವಾಲು ಪಡೆದ ಬಾಂಗ್ಲಾದೇಶ ತಂಡ ಆರಂಭದಿಂದಲೇ ಹಿನ್ನಡೆ ಕಾಣುತ್ತಾ ಸಾಗಿತ್ತು. ನಿಧಾನಗತಿಯ ಆರಂಭ ಪಡೆದ ಬಾಂಗ್ಲಾ 27 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಆದರೆ ತಂಡದ ರನ್‌ವೇಗವನ್ನು ಹೆಚ್ಚಿಸಲು ಯಾವ ಬ್ಯಾಟರ್‌ಗಳು ಪ್ರಯತ್ನವನ್ನೇ ಪಡಲಿಲ್ಲ. ಆ ಪ್ರಯತ್ನಕ್ಕೆ ಭಾರತದ ಬೌಲರ್‌ಗಳು ಅವಕಾಶವನ್ನೂ ನೀಡಿಲ್ಲ. ಶೋರ್ನ ಅಖ್ತರ್ 282 ಎಸೆತಗಳಲ್ಲಿ 28 ರನ್‌ಗಳಿಸಿದ್ದು ತಮಡದ ಪರ ದಾಖಲಾದ ಅತಿ ಹೆಚ್ಚಿನ ಸ್ಕೋರ್ ಎನಿಸಿತು.

Ban W vs Ind W 1st T20I: India womens won by 7 wickets against Bangladesh Womens

ನಿಗದಿತ 20 ಓವರ್‌ಗಳಲ್ಲಿ ಬಾಂಗ್ಲಾದೇಶ ತಂಡ 5 ವಿಕೆಟ್ ಕಳೆದುಕೊಂಡು 114 ರನ್‌ಗಳನ್ನು ಗಳಿಸಿ ಇನ್ನಿಂಗ್ಸ್ ಅಂತ್ಯಗೊಳಿಸಿದೆ. ಭಾರತದ ಪರ ಪೂಜಾ ವಸ್ತ್ರಾಕರ್, ಚೊಚ್ಚಲ ಪಂದ್ಯವನ್ನಾಡುತ್ತಿರುವ ಮಿನ್ನು ಮಣಿ ಹಾಗೂ ಶಫಾಲಿ ವರ್ಮಾ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.

ಇನ್ನು ಈ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡ ಇನ್ನಿಂಗ್ಸ್‌ನ ಮೂರನೇ ಎಸೆತದಲ್ಲಿಯೇ ಆರಂಬಿಕ ಆಟಗಾರ್ತಿ ಶಫಾಲಿ ವರ್ಮಾ ವಿಕೆಟ್ ಕಳೆದುಕೊಂಡಿತು. ಹೀಗಾಗಿ ಶೂನ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡಿತು. ನಂತರ ಜಮಿಮಾ ರೋಡ್ರಿಗಸ್ ಕೂಡ ತಂಡದ ಮೊತ್ತ 21 ರನ್‌ಗಳಿಸುವಷ್ಟರಲ್ಲಿ ವಿಕೆಟ್ ಕಳೆದುಕೊಂಡಾಗ ಆತಂಕ ಮೂಡಿಸಿತ್ತು. ಸ್ಮೃತಿ ಮಂಧಾನ ಹಾಘೂ ನಾಯಕಿ ಹರ್ಮನ್‌ಪ್ರೀತ್ ಕೌರ್ ಉತ್ತಮ ಜೊತೆಯಾಟ ನೀಡುವ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. 38 ರನ್‌ಗಳಿಸಿದ ಮಂಧಾನ ತಂಡದ ಮೊತ್ತ 91 ರನ್‌ ಆಗುವಷ್ಟರಲ್ಲಿ ವಿಕೆಟ್ ಕಳೆದುಕೊಂಡರು. ಆದರೆ ಅದಾಗಲೇ ಭಾರತ ಗೆಲುವಿನ ಸನಿಹಕ್ಕೆ ತಲುಪಿದ್ದ ಕಾರಣ ಯಾವುದೇ ಅಪಾಯವುಂಟಾಗಲಿಲ್ಲ.

ಇನ್ನು ಈ ಪಂದ್ಯದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಆಕ್ರಮಣಕಾರಿಯಾಗಿ ಆಡುವ ಮೂಲಕ ತಂಡವನ್ನು ಹಿನ್ನಡೆಯಿಂದ ಪಾರುಮಾಡಿದರು. ಯಸ್ತಿಕಾ ಭಾಟಿಯಾ ಜೊತೆಗೆ ಸೇರಿಕೊಂಡು ತಂಡವನ್ನು ಗೆಲುವಿನ ದಡ ಸೇರಿಸಿದ ಹರ್ಮನ್‌ಪ್ರೀತ್ ಇನ್ನೂ 22 ಎಸೆತಗಳು ಬಾಕಿಯಿರುವಂತೆಯೇ ಗೆಲುವಿಗೆ ಕಾರಣವಾದರು. 35 ಎಸೆತ ಎದುರಿಸಿದ ಹರ್ಮನ್ 6 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದ್ದು ಅಜೇಯ 54 ರನ್‌ಗಳನ್ನು ಗಳಿಸಿದರು. ಈ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಗೌರವ ಕೂಡ ತಮ್ಮದಾಗಿಸಿಕೊಂಡರು.

ಬಾಂಗ್ಲಾದೇಶ ಆಡುವ ಬಳಗ: ನಿಗರ್ ಸುಲ್ತಾನ (ನಾಯಕಿ & ವಿಕೆಟ್ ಕೀಪರ್), ಸಲ್ಮಾ ಖಾತುನ್, ಶಮೀಮಾ ಸುಲ್ತಾನಾ, ನಹಿದಾ ಅಕ್ಟರ್, ರಿತು ಮೋನಿ, ಶೋರ್ನಾ ಅಕ್ತರ್, ಮಾರುಫಾ ಅಕ್ಟರ್, ಸೋಭಾನಾ ಮೊಸ್ಟಾರಿ, ಶಥಿ ರಾಣಿ, ಸುಲ್ತಾನಾ ಖಾತುನ್, ರಬೇಯಾ ಖಾನ್
ಬೆಂಚ್: ಮುರ್ಷಿದಾ ಖಾತುನ್, ಫಾಹಿಮಾ ಖಾತುನ್, ಶಂಜಿದಾ ಅಕ್ಟರ್, ದಿಲಾರಾ ಅಕ್ಟರ್, ದಿಶಾ ಬಿಸ್ವಾಸ್

ಭಾರತ ಆಡುವ ಬಳಗ: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಜೆಮಿಮಾ ರೋಡ್ರಿಗಸ್, ಹರ್ಲೀನ್ ಡಿಯೋಲ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಅಮಂಜೋತ್ ಕೌರ್, ಬಾರೆಡ್ಡಿ ಅನುಷಾ, ಮಿನ್ನು ಮಣಿ
ಬೆಂಚ್: ಸಬ್ಬಿನೇನಿ ಮೇಘನಾ, ಮೋನಿಕಾ ಪಟೇಲ್, ಅಂಜಲಿ ಸರ್ವಾಣಿ, ಮೇಘನಾ ಸಿಂಗ್, ದೇವಿಕಾ ವೈದ್ಯ, ರಾಶಿ ಕನೋಜಿಯಾ, ಉಮಾ ಚೆಟ್ರಿ

Story first published: Sunday, July 9, 2023, 18:43 [IST]
Other articles published on Jul 9, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+