Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಗೆಲುವಿನ ದಾರಿಗಿಳಿದ ಆರ್‌ಸಿಬಿ, ಸಿಎಸ್‌ಕೆ ವಿರುದ್ಧ ರೋಚಕ ಜಯ!

Bangalore vs Chennai, 39th Match - Live Cricket Score

ಬೆಂಗಳೂರು, ಏಪ್ರಿಲ್ 21: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ (ಏಪ್ರಿಲ್ 21) ನಡೆದ ಐಪಿಎಲ್ 39ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 1 ರನ್ ರೋಚಕ ಜಯ ಗಳಿಸಿದೆ. ಇದು ಆರ್‌ಸಿಬಿಗೆ ಈ ಬಾರಿ ಲಭಿಸಿದ ಸತತ 2ನೇ ಗೆಲುವು ಮತ್ತು ಒಟ್ಟಾರೆ 3ನೇ ವಿಜಯ.

ಐಪಿಎಲ್ ಸ್ಟೋರಿಗಳು, ಪಾಯಿಂಟ್ ಟೇಬಲ್ ಇನ್ನಿತರ ಕುತೂಹಲಕಾರಿ ಅಂಕಿ-ಅಂಶಗಳು 'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'ದಲ್ಲಿದೆ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬೆಂಗಳೂರು ಆರಂಭದಲ್ಲೇ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಕೊಹ್ಲಿ 9 ರನ್‌ಗೆ ನಿರ್ಗಮಿಸಿದರು. ಇನ್ನು ಆರ್‌ಸಿಬಿ ರನ್ ಚೇತರಿಕೆಯಲ್ಲಿ ಪಾರ್ಥಿವ್ ಪಟೇಲ್ 53 (37), ಎಬಿ ಡಿ ವಿಲಿಯರ್ಸ್ 25, ಅಕ್ಷದೀಪ್ ನಾಥ್ 24, ಮಾರ್ಕಸ್ ಸ್ಟೊಯಿನಿಸ್ 14, ಮೋಯಿನ್ ಅಲಿ 26 ರನ್ ಕೊಡುಗೆ ಪ್ರಮುಖವೆನಿಸಿತು.

ಬೆಂಗಳೂರು vs ಚೆನ್ನೈ ಪಂದ್ಯದ ಸ್ಕೋರ್‌ಕಾರ್ಡ್ ಕೆಳಗಿದೆ

1
45915

ಆರ್‌ಸಿಬಿ 20 ಓವರ್‌ಗೆ 7 ವಿಕೆಟ್ ಕಳೆದು 161 ರನ್ ಗಳಿಸಿತು. ಬೆಂಗಳೂರು ಇನ್ನಿಂಗ್ಸ್‌ ವೇಳೆ ಚೆನ್ನೈ ತಂಡದ ದೀಪಕ್ ಚಾಹರ್, ರವೀಂದ್ರ ಜಡೇಜಾ ಮತ್ತು ಡ್ವೇನ್ ಬ್ರಾವೋ ತಲಾ 2 ವಿಕೆಟ್ ಉರುಳಿಸಿ ಕಾಡಿದರು. ಇಮ್ರಾನ್ ತಾಹಿರ್ 1 ವಿಕೆಟ್ ಪಡೆದರು.

ಚೇಸಿಂಗ್‌ಗೆ ಇಳಿದ ಚೆನ್ನೈ ಕೂಡ ಆರಂಭದಲ್ಲೇ ಆಘಾತಕ್ಕೊಳಗಾಯಿತು. ಮೊದಲ ಓವರ್‌ನಲ್ಲೇ ಶೇನ್ ವ್ಯಾಟ್ಸನ್ 5, ಸುರೇಶ್ ರೈನಾ 0 ರನ್‌ಗೆ ಔಟ್ ಆದರು. ಎರಡೂ ವಿಕೆಟ್‌ಗಳನ್ನು ಡೇಲ್ ಸ್ಟೇನ್ ಮುರಿದರು. ಇನ್ನು ಫಾ ಡು ಪ್ಲೆಸಿಸ್ 5, ಕೇದಾರ್ ಜಾಧವ್ 9, ಅಂಬಾಟಿ ರಾಯುಡು 29, ರವೀಂದ್ರ ಜಡೇಜಾ 11 ರನ್ ಸೇರಿಸಿದರು.

ಆದರೆ ಸಿಎಸ್‌ಕೆ ನಾಯಕ ಎಂಎಸ್ ಧೋನಿ ಪಂದ್ಯವನ್ನು ರೋಚಕ ಹಂತಕ್ಕೆ ಕೊಂಡೊಯ್ದರು. ಪಂದ್ಯದ ಕೊನೆಯವರೆಗೂ ನಿಂತ ಧೋನಿ 48 ಎಸೆತಗಳಿಗೆ ಅಜೇಯ 84 ರನ್ ಕಾಣಿಕೆಯಿತ್ತರು. ಅಂತಿಮವಾಗಿ ಚೆನ್ನೈ 20 ಓವರ್‌ಗೆ 8 ವಿಕೆಟ್ ನಷ್ಟದಲ್ಲಿ 160 ರನ್ ಬಾರಿಸಿ ಶರಣಾಯ್ತು.

ಒಂದು ವೇಳೆ ಅಂತಿಮ ಎಸೆತದಲ್ಲಿ ಶಾರ್ದೂಲ್ ಠಾಕೂರ್ ಅವರನ್ನು ಆರ್‌ಸಿಬಿ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ರನ್ ಔಟ್ ಮಾಡದಿದ್ದರೆ ಪಂದ್ಯ ಸೂಪರ್ ಓವರ್‌ಗೆ ತಿರುಗುತ್ತಿತ್ತು! ಚೆನ್ನೈ ಇನ್ನಿಂಗ್ಸ್‌ ವೇಳೆ ಆರ್‌ಸಿಬಿ ವೇಗಿ ಡೇಲ್ ಸ್ಟೇನ್ ಮತ್ತು ಉಮೇಶ್ ಯಾದವ್ ತಲಾ 2 ವಿಕೆಟ್‌ಗಳೊಂದಿಗೆ ಮಿಂಚಿದರು.

ಚೆನ್ನೈ ಸೂಪರ್ ಕಿಂಗ್ಸ್ ತಂಡ: ಶೇನ್ ವ್ಯಾಟ್ಸನ್, ಫಾ ಡು ಪ್ಲೆಸಿಸ್, ಸುರೇಶ್ ರೈನಾ, ಅಂಬಾಟಿ ರಾಯುಡು, ಎಂಎಸ್ ಧೋನಿ (ಸಿ / ಸಿ), ಕೇದಾರ್ ಜಾಧವ್, ಡ್ವೇನ್ ಬ್ರಾವೋ, ರವೀಂದ್ರ ಜಡೇಜಾ, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ಇಮ್ರಾನ್ ತಾಹಿರ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಪಾರ್ಥಿವ್ ಪಟೇಲ್ (ವಿ), ವಿರಾಟ್ ಕೊಹ್ಲಿ (ಸಿ), ಎಬಿ ಡಿ ವಿಲಿಯರ್ಸ್, ಅಕ್ಷದೀಪ್ ನಾಥ್, ಮೊಯೆನ್ ಅಲಿ, ಮಾರ್ಕಸ್ ಸ್ಟೊಯಿನಿಸ್, ಪವನ್ ನೇಗಿ, ಡೇಲ್ ಸ್ಟೇಯ್ನ್, ನವದೀಪ್ ಸೈನಿ, ಯುಜ್ವೆಂದ್ರ ಚಾಹಲ್, ಉಮೇಶ್ ಯಾದವ್.

Story first published: Monday, April 22, 2019, 0:47 [IST]
Other articles published on Apr 22, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+