Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಡೆಲ್ಲಿ ಎದುರೂ ಸೋತ ಬೆಂಗಳೂರಿಗೆ ಕಪ್ಪಿನ್ನು ಬಲು ದುಬಾರಿ!

Bangalore vs Delhi, 20th Match - Live Cricket Score

ಬೆಂಗಳೂರು, ಏಪ್ರಿಲ್ 7: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 20ನೇ ಪಂದ್ಯದಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 4 ವಿಕಟ್ ಸೋಲಿನ ಕಹಿ ಅನುಭವಿಸಿದೆ. ಇದು ಈ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಬಳಗ ಕಂಡ ಸತತ 6ನೇ ಸೋಲು. ಹೀಗಾಗಿ ಆರ್‌ಸಿಬಿ ಪಾಲಿಗೆ 'ಕಪ್' ಇನ್ನು ದುಬಾರಿ ಮಾತಾಗಿದೆ.

ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
45896

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಾರ್ಥಿವ್ ಪಟೇಲ್ 9, ಎಬಿ ಡಿ ವಿಲಿಯರ್ಸ್ 17, ಮಾರ್ಕಸ್ ಸ್ಟೋಯ್ನಿಸ್ 15, ಮೊಯೀನ್ ಆಲಿ 32, ವಿರಾಟ್ ಕೊಹ್ಲಿ 41, ಅಕ್ಷದೀಪ್ ನಾಥ್ 19 ರನ್‌ನೊಂದಿಗೆ 20 ಓವರ್‌ಗೆ 8 ವಿಕೆಟ್ ನಷ್ಟದಲ್ಲಿ 149 ರನ್ ಬಾರಿಸಿತು.

ಗುರಿ ಬೆನ್ನಟ್ಟಿದ ಡೆಲ್ಲಿ ಆರಂಭಿಕ ಆಟಗಾರ ಶಿಖರ್ ಧವನ್ (0 ರನ್) ವಿಕೆಟನ್ನು ಬೇಗನೆ ಕಳೆದುಕೊಂಡಿತು. ಆದರೆ ಪೃಥ್ವಿ ಶಾ 28, ನಾಯಕ ಶ್ರೇಯಸ್ ಐಯ್ಯರ್ 67, ಕಾಲಿನ್ ಇನ್‌ಗ್ರಾಮ್ 22, ರಿಷಬ್ ಪಂತ್ 18 ರನ್ ಸೇರಿಸಿದ್ದರಿಂದ ಡೆಲ್ಲಿ 18.5 ಓವರ್‌ಗೆ 6 ವಿಕೆಟ್ ಕಳೆದು 152 ರನ್ ಗಳಿಸಿತು.

ಬೆಂಗಳೂರು ಇನ್ನಿಂಗ್ಸ್‌ ವೇಳೆ ಕಾಗಿಸೋ ರಬಾಡಾ 21 ರನ್ನಿಗೆ 4, ಕ್ರಿಸ್ ಮೋರೀಸ್ 28ಕ್ಕೆ 2 ವಿಕೆಟ್ ಪಡೆದರು. ಡೆಲ್ಲಿ ಇನ್ನಿಂಗ್ಸ್‌ನಲ್ಲಿ ಬೆಂಗಳೂರಿನ ನವದೀಪ್ ಸೈನಿ 24 ರನ್ನಿಂಗೆ 2 ವಿಕೆಟ್ ಪಡೆದು ಗಮನ ಸೆಳೆದರು.

ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ: ಪಾರ್ಥಿವ್ ಪಟೇಲ್ (ವಿ), ವಿರಾಟ್ ಕೊಹ್ಲಿ (ಸಿ), ಎಬಿ ಡಿ ವಿಲಿಯರ್ಸ್, ಮಾರ್ಕಸ್ ಸ್ಟೊಯಿನಿಸ್, ಮೊಯೆನ್ ಅಲಿ, ಅಕ್ಷದೀಪ್ ನಾಥ್, ಪವನ್ ನೇಗಿ, ಟಿಮ್ ಸೌಥಿ, ನವದೀಪ್ ಸೈನಿ, ಯುಜುವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್.

ಡೆಲ್ಲಿ ಕ್ಯಾಪಿಟಲ್ಸ್ ತಂಡ: ಪೃಥ್ವಿ ಶಾ, ಶಿಖರ್ ಧವನ್, ಶ್ರೀಯಸ್ ಐಯ್ಯರ್ (ಸಿ), ರಿಷಬ್ ಪಂತ್ (ವಿ.ಕೆ), ರಾಹುಲ್ ತೆವಾಟಿಯ, ಕಾಲಿನ್ ಇಂಗ್ರಾಮ್, ಕ್ರಿಸ್ ಮೊರಿಸ್, ಆಕ್ಸರ್ ಪಟೇಲ್, ಕಾಗಿಸೋ ರಬಾಡಾ, ಇಶಾಂತ್ ಶರ್ಮಾ, ಸಂದೀಪ್ ಲಮಿಖಾನೆ.

Story first published: Sunday, April 7, 2019, 19:32 [IST]
Other articles published on Apr 7, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+