ಬಾಂಗ್ಲಾದೇಶ ಮಹಿಳಾ ಕ್ರಿಕೆಟ್ ಆಟಗಾರ್ತಿ ಸಂಜಿದಾ ಇಸ್ಲಾಂ ಮದುವೆ ಫೋಟೋಶೂಟ್ ವೈರಲ್

ಇತ್ತೀಚಿನ ದಿನಗಳಲ್ಲಿ ಮದುವೆಗೂ ಮುನ್ನ ವಿವಾಹದ ಫೋಟೋಶೂಟ್ ತುಂಬಾನೆ ವಿಭಿನ್ನವಾಗಿರುತ್ತದೆ. ಮದುವೆಗೂ ಅಷ್ಟೊಂದು ಜನರು ತಲೆಕೆಡಿಸಿಕೊಳ್ಳುತ್ತಾರೋ ತಿಳಿಯದು, ಆದರೆ ವಿವಾಹ ಪೂರ್ವದ ಪೋಟೋಶೂಟ್ ತುಂಬಾನೆ ವಿಶೇಷವಾಗಿರುತ್ತದೆ.
ಇದೇ ರೀತಿಯಲ್ಲಿ ಬಾಂಗ್ಲಾದೇಶದ ರಾಷ್ಟ್ರೀಯ ಮಹಿಳಾ ತಂಡದ ಕ್ರಿಕೆಟ್ ಆಟಗಾರ್ತಿ ಸಂಜಿದಾ ಇಸ್ಲಾಂ ಅವರು ತಮ್ಮ ವಿವಾಹದ ಫೋಟೋಶೂಟ್‌ಗಾಗಿ ಅದ್ಭುತವಾದ ಆಲೋಚನೆಯೊಂದಿಗೆ ಗುರುತಿಸಿಕೊಂಡಿದ್ದಾರೆ. ರಂಗ್‌ಪುರದ ಪ್ರಥಮ ದರ್ಜೆ ಕ್ರಿಕೆಟಿಗ ಮಿಮ್ ಮೊಸದ್ದೀಕ್ ಅವರನ್ನು ಮದುವೆಯಾದ 24 ವರ್ಷದ ಈಕೆ, ಸೀರೆ ತೊಟ್ಟು, ಆಭರಣಗಳನ್ನು ಧರಿಸಿ ಕ್ರಿಕೆಟ್ ಬ್ಯಾಟ್ ಹಿಡಿದು ಫೋಟೋಶೂಟ್ ಮಾಡಿಸಿದ್ದಾಳೆ.
ತನ್ನ ಮೊದಲ ಪ್ರೇಮ ಕ್ರಿಕೆಟ್ ಆಗಿದೆ ಎಂದು ತೋರಿಸಿರುವ ಸಂಜಿದಾ ಇಸ್ಲಾಂ ಅವರು ಸಾಂಪ್ರದಾಯಿಕ ಉಡುಪನ್ನು ಧರಿಸಿ ಕ್ರಿಕೆಟ್ ಬ್ಯಾಟ್‌ನೊಂದಿಗೆ ಪೋಸ್ ನೀಡಿದರು. ಸಂಜಿದಾ ಅವರ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸ್ವತಃ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಬುಧವಾರ ಈಕೆಯ ಫೋಟೋಶೂಟ್‌ಗಳನ್ನು ಹಂಚಿಕೊಂಡಿದೆ.
ಬಾಂಗ್ಲಾದೇಶದ ಮಧ್ಯಮ ಕ್ರಮಾಂಕದ ಮುಖ್ಯ ಆಟಗಾರ್ತಿ ಸಂಜಿದಾ ಇಸ್ಲಾಂ ಅವರು ತಮ್ಮ 8 ವರ್ಷಗಳ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ 16 ಏಕದಿನ ಮತ್ತು 54 ಟಿ 20 ಪಂದ್ಯಗಳನ್ನು ಆಡಿದ್ದಾರೆ. ಈಕೆ ಏಕದಿನ ಪಂದ್ಯಗಳಲ್ಲಿ 174 ರನ್ ಮತ್ತು ಟಿ 20 ಯಲ್ಲಿ 520 ರನ್ ಗಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications