PAK vs BAN: ಯುದ್ಧದ ಭೀತಿಯ ನಡುವೆಯೂ ಪಾಕಿಸ್ತಾನಕ್ಕೆ ಬಾಂಗ್ಲಾದೇಶ ತಂಡ ಪ್ರವಾಸ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಎರಡೂ ದೇಶಗಳು ಪರಸ್ಪರ ವಿರುದ್ಧವಾಗಿ ಅನೇಕ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ರಾಜಕೀಯ ಒತ್ತಡ ಹೇರಲು ಮುಂದಾಗಿವೆ. ಭಾರತವು 24 ರಿಂದ 36 ಗಂಟೆಗಳಲ್ಲಿ ದಾಳಿ ಮಾಡಬಹುದು ಎಂದು ಪಾಕಿಸ್ತಾನದಿಂದ ಘೋಷಿಸಲಾಗಿದೆ. ಇತ್ತ ಪಾಕಿಸ್ತಾನ ಸಾಕಿ ಸಲಹುತ್ತಿರುವ ಭಯೋತ್ಪಾದಕರನ್ನು ಮಟ್ಟ ಹಾಕಲು ಭಾರತ ತನ್ನ ಸೇನೆಗೆ ಮುಕ್ತ ಸ್ವಾತಂತ್ರ್ಯ ನೀಡಿದೆ.
ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳ ಪ್ರಸ್ತುತ ಹೇಳಿಕೆಗಳನ್ನು ನೋಡಿದರೆ, ಯುದ್ಧ ಯಾವಾಗ ಬೇಕಾದರೂ ಪ್ರಾರಂಭವಾಗಬಹುದು. ಇಂತಹ ಸಂದರ್ಭದಲ್ಲಿಯೂ ಬಾಂಗ್ಲಾದೇಶ ತಂಡ 5 ಪಂದ್ಯಗಳ ಟಿ20 ಸರಣಿಯನ್ನು ಆಡಲು ಪಾಕಿಸ್ತಾನ ಪ್ರವಾಸ ಮಾಡಲು ರೆಡಿಯಾಗಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮೇ ತಿಂಗಳಲ್ಲಿ ಬಾಂಗ್ಲಾದೇಶ ತಂಡ ಐದು ಪಂದ್ಯಗಳ ಟಿ20 ಸರಣಿಗಾಗಿ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದೆ ಎಂದು ತಿಳಿಸಿದೆ. ಬಾಂಗ್ಲಾದೇಶ ತಂಡವು ಮೇ 21 ರಂದು ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಲಿದ್ದು, ಮೇ 22 ರಿಂದ 24 ರವರೆಗೆ ಇಕ್ಬಾಲ್ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಲಿದೆ. ಇದಕ್ಕೂ ಮುನ್ನ ಈ ಪ್ರವಾಸವನ್ನು ಮೂರು ಏಕದಿನ ಮತ್ತು ಮೂರು ಟಿ 20 ಸರಣಿಗಳಾಗಿ ನಿಗದಿಪಡಿಸಲಾಗಿತ್ತು. ಆದರೆ ಈಗ ಈ ಪ್ರವಾಸವನ್ನು ಐದು ಟಿ20 ಪಂದ್ಯಗಳ ಸರಣಿಯಾಗಿ ಮಾಡಲಾಗಿದೆ.
ಈ ಸರಣಿಯಲ್ಲಿ ಮೊದಲು ಮೂರು ಏಕದಿನ ಪಂದ್ಯಗಳು ಮತ್ತು ಮೂರು ಟಿ20 ಪಂದ್ಯಗಳು ನಡೆಯಬೇಕಿತ್ತು. ಆದರೆ ಮುಂದಿನ ವರ್ಷದ ಐಸಿಸಿ ಪುರುಷರ ಟಿ20 ವಿಶ್ವಕಪ್ ದೃಷ್ಟಿಯಿಂದ, ಎರಡೂ ದೇಶಗಳ ಕ್ರಿಕೆಟ್ ಬೋರ್ಡ್‌ಗಳು ಏಕದಿನ ಪಂದ್ಯಗಳ ಬದಲಿಗೆ ಎರಡು ಹೆಚ್ಚುವರಿ ಟಿ20 ಪಂದ್ಯಗಳನ್ನು ನಡೆಸಲು ಒಪ್ಪಿಕೊಂಡಿವೆ ಎಂದು ಪಿಸಿಬಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಐದು ಪಂದ್ಯಗಳ ಟಿ20 ಸರಣಿಯು ಮೇ 25 ರಿಂದ ಜೂನ್ 3 ರವರೆಗೆ ಫೈಸಲಾಬಾದ್‌ನ ಇಕ್ಬಾಲ್ ಮತ್ತು ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯಲಿದೆ. 1978 ಮತ್ತು 2008 ರ ನಡುವೆ 24 ಟೆಸ್ಟ್ ಮತ್ತು 16 ಏಕದಿನ ಪಂದ್ಯಗಳನ್ನು ಆಯೋಜಿಸಿದ್ದ ಇಕ್ಬಾಲ್ ಕ್ರೀಡಾಂಗಣವು 17 ವರ್ಷಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುತ್ತಿದೆ. ಈ ಐತಿಹಾಸಿಕ ಮೈದಾನದಲ್ಲಿ ಏಪ್ರಿಲ್ 2008 ರಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವೆ ನಡೆದ ಏಕದಿನ ಪಂದ್ಯ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು.
ಪಾಕಿಸ್ತಾನ vs ಬಾಂಗ್ಲಾದೇಶ ಟಿ20 ಸರಣಿ ವೇಳಾಪಟ್ಟಿ
ಮೇ 25 - ಮೊದಲ ಟಿ20: ಪಾಕಿಸ್ತಾನ vs ಬಾಂಗ್ಲಾದೇಶ, ಇಕ್ಬಾಲ್ ಕ್ರೀಡಾಂಗಣ, ಫೈಸಲಾಬಾದ್
ಮೇ 27 - ಎರಡನೇ ಟಿ20: ಪಾಕಿಸ್ತಾನ vs ಬಾಂಗ್ಲಾದೇಶ, ಇಕ್ಬಾಲ್ ಕ್ರೀಡಾಂಗಣ, ಫೈಸಲಾಬಾದ್
ಮೇ 30 - ಮೂರನೇ ಟಿ20: ಪಾಕಿಸ್ತಾನ vs ಬಾಂಗ್ಲಾದೇಶ, ಇಕ್ಬಾಲ್ ಕ್ರೀಡಾಂಗಣ, ಫೈಸಲಾಬಾದ್
ಜೂನ್ 1 - ನಾಲ್ಕನೇ ಟಿ20: ಪಾಕಿಸ್ತಾನ v ಬಾಂಗ್ಲಾದೇಶ, ಗಡಾಫಿ ಸ್ಟೇಡಿಯಂ, ಲಾಹೋರ್
ಜೂನ್ 3 - ಐದನೇ ಟಿ20: ಪಾಕಿಸ್ತಾನ vs ಬಾಂಗ್ಲಾದೇಶ, ಗಡಾಫಿ ಕ್ರೀಡಾಂಗಣ, ಲಾಹೋರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications