ಏಷ್ಯಾಕಪ್‌ಗಾಗಿ ಬೆಚ್ಚಿ ಬೀಳುವಂತಾ ಸಿದ್ಧತೆ!: ಕೆಂಡದ ಮೇಲೆ ನಡೆದ ಬಾಂಗ್ಲಾದೇಶದ ಕ್ರಿಕೆಟಿಗ: ವಿಡಿಯೋ
16ನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯ ಆರಂಭಕ್ಕೆ ಇನ್ನು ಎರಡು ವಾರಗಳ ಕಾಲಾವಕಾಶ ಮಾತ್ರವೇ ಇದೆ. ಪಾಕಿಸ್ತಾನ ಹಾಗೂ ಶ್ರೀಲಂಕಾದಲ್ಲಿ ಈ ಬಾರಿಯ ಏಷ್ಯಾಕಪ್ ಟೂರ್ನಿ ಆಯೋಜನೆಯಾಗಲಿದ್ದು ನಾಲ್ಕು ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದರೆ ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. ಈ ಟೂರ್ನಿ ಮುಂಬರುವ ವಿಶ್ವಕಪ್ ಟೂರ್ನಿಗೆ ಸಿದ್ಧತೆ ನಡೆಸಲು ಏಷ್ಯಾದ ರಾಷ್ಟ್ರಗಳಿಗೆ ಈ ಟೂರ್ನಿ ಅದ್ಭುತ ವೇದಿಕೆ ಎಂದು ಪರಿಗಣಿಸಲಾಗಿದೆ.
ಈ ಏಷ್ಯಾ ಕಪ್ ಟೂರ್ನಿಗಾಗಿ ಎಲ್ಲಾ ತಂಡಗಳು ಈಗ ಕೊನೆಯ ಹಂತದ ಸಿದ್ಧತೆಯನ್ನು ನಡೆಸುತ್ತಿದೆ. ಆಟಗಾರರು ಕೂಡ ಮೈದಾನದಲ್ಲಿ ಬೆವರು ಹರಿಸುತ್ತಿದ್ದಾರೆ. ಈ ಮಧ್ಯೆ ಬಾಂಗ್ಲಾದೇಶದ ಕ್ರಿಕೆಟಿಗನೋರ್ವ ಈ ಏಷ್ಯಾಕಪ್ ಟೂರ್ನಿಗಾಗಿ ಮಾಡಿದ ವಿಚಿತ್ರವಾದ ಸಿದ್ಧತೆ ನೀಡು ಅಭಿಮಾನಿಗಳು ಅಕ್ಷರಶಃ ಬೆಚ್ಚಿಬೀಳುವಂತಾಗಿದೆ. ಬಾಂಗ್ಲಾದೇಶದ ಆರಂಭಿಕ ಆಟಗಾರ ಮೊಹಮ್ಮದ್ ನಯೀಮ್ ಶೇಕ್ ಹೀಗೆ ಹಿಂದೆಂದೂ ಕಂಡರಿಯದಂತೆ ಕ್ರಿಕೆಟ್ ಟೂರ್ನಿಯೊಂದಕ್ಕೆ ಸಿದ್ಧತೆಯನ್ನು ನಡೆಸಿದ ಆಟಗಾರ.

ಬಾಂಗ್ಲಾದೇಶದ ಕ್ರಿಕೆಟ್‌ನ ಮಾಹಿತಿಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವ ಸೈಫ್ ಅಹ್ಮದ್ ಎಂಬವರು ಟ್ವಿಟ್ಟರ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮೈದಾನದ ಮಧ್ಯ ಭಾಗದಲ್ಲಿ ಉರಿಯುತ್ತಿರುವ ಕೆಂಡದ ರಾಶಿಯಿದ್ದು ಅದರಲ್ಲಿ ಮೊಹಮ್ಮದ್ ನಯೀಮ್ ಕೆಂಡದ ಮೇಲೆ ನಡೆಯುತ್ತಿರುವ ದೃಶ್ಯಗಳಿದೆ. "ಏಷ್ಯಾ ಕಪ್ ಹಿನ್ನಡೆಯಲ್ಲಿ ನಯೀಮ್ ಶೇಕ್ ಮೈಂಡ್ ಟ್ರೈನರ್ ಜೊತೆಗೆ ಅಭ್ಯಾಸ ಕರ್ತವ್ಯ ನಿರ್ವಹಿಸುತ್ತಿದ್ದಾರೆ" ಎಂದು ಬರೆದುಕೊಂಡಿದ್ದಾರೆ.
Naim Sheikh working with a mind trainer ahead of Asia Cup. pic.twitter.com/mkykegJ06p
— Saif Ahmed 🇧🇩 (@saifahmed75) August 18, 2023
ಕೆಲ ಕ್ರಿಕೆಟಿಗರ ಚಿತ್ರ ವಿಚಿತ್ರ ಅಭ್ಯಾಸಗಳನ್ನು ಕರಿಕೆಟ್ ಅಭಿಮಾನಿಗಳು ಕೂಡ ನೋಡಿಕೊಂಡೇ ಬಂದಿದ್ದಾರೆ. ಆದರೆ ಅದೆಲ್ಲದಕ್ಕಿಂತ ಇದು ಅತ್ಯಂತ ವಿಚಿತ್ರವಾಗಿದೆ. ಹೀಗಾಗಿ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಇನ್ನು ಏಷ್ಯಾಕಪ್ ಟೂರ್ನಿ ಆಗಸ್ಟ್ 30ರಿಂದ ಆರಂಭವಾಗಲಿದೆ. ಪಾಕಿಸ್ತಾನ ಹಾಗೂ ನೇಪಾಳ ತಂಡಗಳು ಮುಲ್ತಾನ್‌ನಲ್ಲಿ ಮುಖಾಮುಖಿಯಾಗುವ ಮೂಲಕ ಈ ಟೂರ್ನಿಗೆ ಚಾಲನೆ ದೊರೆಯಲಿದೆ. ಬಾಂಗ್ಲಾದೇಶ ತಂಡ ಆಗಸ್ಟ್ 31ರಂದು ಶ್ರೀಲಂಕಾ ವಿರುದ್ಧ ಸೆಣೆಸಾಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಟೀಮ್ ಇಂಡಿಯಾ ಈ ಟೂರ್ನಿಯಲ್ಲಿ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡಲಿದ್ದು ಸೆಪ್ಟೆಂಬರ್ 2ರಂದು ಪಲ್ಲೆಕೆಲೆಯಲ್ಲಿ ಈ ಪಂದ್ಯ ನಡೆಯಲಿದೆ. ಇನ್ನು ಈ ಟೂರ್ನಿಯ ಫೈನಲ್ ಪಂದ್ಯ ಸೆಪ್ಟೆಂಬರ್ 17ರಂದು ಕೊಲಂಬೋದಲ್ಲಿ ಆಯೋಜನೆಯಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications