For Quick Alerts
ALLOW NOTIFICATIONS  
For Daily Alerts
 

18 ತಿಂಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ ಶಹದತ್ ಹೊಸೈನ್

Bangladesh fast bowler Shahadat Hossain returns to cricket after 18 months

ಧಾಕಾ: ಬಾಂಗ್ಲಾದೇಶದ ವೇಗಿ ಶಹದತ್ ಹೊಸೈನ್ ಬರೋಬ್ಬರಿ 18 ತಿಂಗಳ ಬಳಿಕ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದಾರೆ. 2019ರಲ್ಲಿ ಪ್ರಥಮದರ್ಜೆ ಕ್ರಿಕೆಟ್ ವೇಳೆ ತಂಡದ ಸಹ ಆಟಗಾರನಿಗೆ ಕೆನ್ನೆಗೆ ಬಾರಿಸಿದ್ದಕ್ಕಾಗಿ ಹೊಸೈನ್ ನಿಷೇಧಕ್ಕೀಡಾಗಿದ್ದರು. ಜೂನ್ 5ರ ಶನಿವಾರ ಹೊಸೈನ್ ಧಾಕಾ ಪ್ರೀಮಿಯರ್ ಡಿವಿಶನ್ ಪಂದ್ಯಕ್ಕಾಗಿ ಕಣಕ್ಕಿಳಿದಿದ್ದಾರೆ.

ಖುಲ್ನಾದಲ್ಲಿ ನಡೆದಿದ್ದ ನ್ಯಾಷನಲ್ ಪ್ರೀಮಿಯರ್ ಲೀಗ್‌ ಪಂದ್ಯದ ವೇಳೆ ಶಹದತ್ ಹೊಸೈನ್ ತಾಳ್ಮೆ ಕಳೆದುಕೊಂಡಿದ್ದರು. ಆ ವೇಳೆ ತನ್ನ ತಂಡದ ಸಹ ಆಟಗಾರ ಅರಾಫತ್ ಸುನ್ನಿ ಜೂನಿಯರ್‌ ಕೆನ್ನೆಗೆ ಬಾರಿಸಿದ್ದರು. ಸುನ್ನಿ ಬಾಲ್ ಶೈನ್ ಮಾಡೋದಕ್ಕೆ ನಿರಾಕರಿಸಿದರು. ಇದು ಹಿರಿಯ ಬೌಲರ್ ಶಹದತ್‌ಗೆ ಸಿಟ್ಟು ತರಿಸಿತ್ತು. ಹೀಗಾಗಿ ಭಾವನೆ ನಿಯಂತ್ರಿಸಿಕೊಳ್ಳಲಾಗದ ಹೊಸೈನ್ ಆತನ ಕೆನ್ನೆಗೆ ಬಾರಿಸಿದ್ದರು.

ಶಹದತ್ ವರ್ತನೆ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್‌ (ಬಿಸಿಬಿ)ಗೆ ಸರಿ ಕಾಣಲಿಲ್ಲ. ಹೀಗಾಗಿ ಆತನಿಗೆ ಪಾಠ ಕಲಿಸಬೇಕನ್ನಿಸಿ ಹೊಸೈನ್ ಮೇಲೆ 5 ವರ್ಷಗಳ ನಿಷೇಧ ಹೇರಿತ್ತು. ಆದರೆ ಹೊಸೈನ್ ಮೇಲಿನ ನಿಷೇಧವನ್ನು ಕಡಿತಗೊಳಿಸುವ ಬಗ್ಗೆ ಅಧಿಕೃತವಾಗಿ ಇನ್ನೂ ಘೋಷಣೆ ಮಾಡಿಲ್ಲ. ಆದರೂ 18 ತಿಂಗಳ ಬಳಿಕ ಹೊಸೈನ್‌ಗೆ ಸ್ಪರ್ಧಾತ್ಮಕ ಕ್ರಿಕೆಟ್‌ ಪಂದ್ಯಗಳಲ್ಲಿ ಆಡಲು ಬಿಸಿಬಿ ಅವಕಾಶ ನೀಡಿದೆ.

34ರ ಹರೆಯದ ಶಹದತ್ ಹೊಸೈನ್ ಬಾಂಗ್ಲಾದೇಶದ ಪರ 38 ಟೆಸ್ಟ್ ಪಂದ್ಯಗಳಲ್ಲಿ 72 ವಿಕೆಟ್‌, 51 ಏಕದಿನ ಪಂದ್ಯಗಳಲ್ಲಿ 47 ವಿಕೆಟ್, 6 ಟಿ20ಐ ಪಂದ್ಯಗಳಲ್ಲಿ 4 ವಿಕೆಟ್ ದಾಖಲೆ ಹೊಂದಿದ್ದಾರೆ.

Story first published: Saturday, June 5, 2021, 22:58 [IST]
Other articles published on Jun 5, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+