ತವರಿನಲ್ಲಿ ಪಾಕಿಸ್ತಾನ ತೀವ್ರ ಮುಖಭಂಗ ಅನುಭವಿಸಿದೆ. ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಸೋತಿದೆ. ಟೆಸ್ಟ್ ಇತಿಹಾಸಲ್ಲಿ ಮೊದಲ ಬಾರಿಗೆ ಪಾಕಿಸ್ತಾನ ವಿರುದ್ಧ ಸರಣಿ ಗೆದ್ದ ಐತಿಹಾಸಿಕ ದಾಖಲೆಯನ್ನು ಬಾಂಗ್ಲಾದೇಶ ಬರದಿದೆ.
ಮೊದಲ ಟೆಸ್ಟ್‌ನಲ್ಲಿ 10 ವಿಕೆಟ್‌ಗಳ ಜಯ ಸಾಧಿಸಿದ್ದ ಬಾಂಗ್ಲಾದೇಶ ಎರಡನೇ ಪಂದ್ಯದಲ್ಲೂ ಪಾಕಿಸ್ತಾನವನ್ನು ಮಣಿಸಿದೆ. ಬಾಂಗ್ಲಾದೇಶ ಎರಡನೇ ಪಂದ್ಯವನ್ನು 6 ವಿಕೆಟ್‌ಗಳಿಂದ ಗೆಲುವು ಸಾಧಿಸುವ ಮೂಲಕ ಪಾಕಿಸ್ತಾನ ವಿರುದ್ಧ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.

ಬಾಂಗ್ಲಾದೇಶ 2024-25ನೇ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್ ಪಾಯಿಂಟ್ ಟೇಬಲ್‌ನಲ್ಲಿ ಮೇಲೇರಿದೆ. ಇದುವರೆಗೆ ಬಾಂಗ್ಲಾ ಆಡಿದ 6 ಪಂದ್ಯಗಳಲ್ಲಿ 3 ರಲ್ಲಿ ಗೆಲುವು ಸಾಧಿಸಿದರೆ, 3 ರಲ್ಲಿ ಸೋಲ ಕಂಡಿದೆ. ಬಾಂಗ್ಲಾ 33 ಅಂಕಗಳೊಂದಿಗೆ ಪಾಯಿಂಟ್‌ನಲ್ಲಿ ಆರನೇ ಸ್ಥಾನದಲ್ಲಿದೆ.
ಪ್ರಸ್ತುತ ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ಟೀಮ್ ಇಂಡಿಯಾ 74 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಆಸ್ಟ್ರೇಲಿಯಾ 90 ಅಂಕಗಳೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಟೀಮ್ ಇಂಡಿಯಾಕ್ಕಿಂತ ಹೆಚ್ಚಿನ ಪಂದ್ಯಗಳನ್ನು ಸೋತಿರುವ ಕಾರಣ ಕಾಂಗೂರು ಪಡೆ ಎರಡನೇ ಸ್ಥಾನದಲ್ಲಿದೆ.
ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶದ ಬೌಲರ್‌ಗಳು ಅಮೋಘ ಪ್ರದರ್ಶನ ನೀಡಿದರು. ಮೊದಲ ಇನಿಂಗ್ಸ್‌ನಲ್ಲಿ ಮೆಹದಿ ಹಸನ್ ಮಿರಾಜ್ (5 ವಿಕೆಟ್) ಮತ್ತು ತಸ್ಕಿನ್ ಅಹ್ಮದ್ (3 ವಿಕೆಟ್) ಬೌಲಂಗ್ ದಾಳಿಗೆ ಪತರುಗುಟ್ಟಿದ ಪಾಕಿಸ್ತಾನ ತಂಡ 274 ರನ್‌ಗಳಿಗೆ ಕುಸಿದಿತ್ತು.
ಪಾಕಿಸ್ತಾನ ಪರ ಸ್ಯಾಮ್ ಅಯೂಬ್ (58), ಶಾನ್ ಮಸೂದ್ (57) ಮತ್ತು ಅಘಾ ಸಲ್ಮಾನ್ (54 ರನ್) ಅರ್ಧಶತಕ ಗಳಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾ ಪರ ಹಸನ್ ಮಹಮೂದ್ (5 ವಿಕೆಟ್) ಮತ್ತು ನಹಿದ್ ರಾಣಾ (4 ವಿಕೆಟ್) ಬೆಂಕಿ ಬೌಲಿಂಗ್ ದಾಳಿ ಮುಂದುವರಿಸಿದು. ಪರಿಣಾಮ ಒಬ್ಬ ಪಾಕಿಸ್ತಾನಿ ಬ್ಯಾಟರ ಅರ್ಧ ಶತಕವನ್ನೂ ಗಳಿಸಲು ಸಾಧ್ಯವಾಗಲಿಲ್ಲ.
ಮೊದಲ ಇನಿಂಗ್ಸ್‌ನಲ್ಲಿ ಪಾಕಿಸ್ತಾನದ ವೇಗದ ಬೌಲರ್ ಖುರ್ರಂ ಶಹಜಾದ್ (6 ವಿಕೆಟ್) ಅವರು ಬಾಂಗ್ಲಾದೇಶವನ್ನು ಆರಂಭದಲ್ಲಿ ಕಟ್ಟಿ ಹಾಕಿದರು. ಬಾಂಗ್ಲಾ ಕೇವಲ 26 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.
ಇದಾದ ನಂತರ ಲಿಟನ್ ದಾಸ್ ಮತ್ತು ಮೆಹದಿ ಹಸನ್ ಮಿರಾಜ್ ಬಾಂಗ್ಲಾದೇಶಕ್ಕೆ ಆಸರೆಯಾದರು. ಈ ಜೋಡಿ ಉತ್ತಮ ಜೊತೆಯಾಟವಾಡುವ ಮೂಲಕ ತಂಡದ ಸ್ಕೋರ್ ಅನ್ನು 262 ರನ್‌ಗಳಿಗೆ ಕೊಂಡೊಯ್ದರು. ಇದರಿಂದಾಗಿ ಪಾಕಿಸ್ತಾನ ಕೇವಲ 12 ರನ್‌ಗಳ ಮುನ್ನಡೆ ಸಾಧಿಸಿತು. ಇದಾದ ಬಳಿಕ ಪಾಕಿಸ್ತಾನ ನೀಡಿದ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ 56 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 185 ರನ್ ಗಳಿಸಿ ಗೆಲುವು ಸಾಧಿಸಿತು.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮೂರನೇ ಆವೃತ್ತಿಯ ಫೈನಲ್‌ನ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಂಗಳವಾರ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಮುಂದಿನ ವರ್ಷ 2025ರ ಜೂನ್ 11 ಮತ್ತು 15 ರ ನಡುವೆ ಲಾರ್ಡ್ಸ್ ಮೈದಾನದಲ್ಲಿ ಡಬ್ಲ್ಯೂಟಿಸಿ ಫೈನಲ್ ಆಡಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೆ, ಈ ಫೈನಲ್ ಪಂದ್ಯಕ್ಕೆ ಜೂನ್ 16 ಅನ್ನು ಮೀಸಲು ದಿನವನ್ನಾಗಿ ಇರಿಸಲಾಗಿದೆ.