'ಹಳದಿ ಕಪ್ಪು ಮಿಂಚಿನ ಹೊಡೆತಕ್ಕೆ ಭಾರತ ಬಲಿ'
ಮೀರ್ ಪುರ್ (ಬಾಂಗ್ಲಾದೇಶ), ಜೂ.22: ಟೀಂ ಇಂಡಿಯಾ ವಿರುದ್ಧ ಐತಿಹಾಸಿಕ ಏಕದಿನ ಸರಣಿ ಗೆದ್ದಿರುವ ಬಾಂಗ್ಲಾದೇಶ ತಂಡವನ್ನು ಸ್ಥಳೀಯ ಮಾಧ್ಯಮಗಳು ಹಾಡೀ ಹೊಗಳಿವೆ. ಹಳದಿ ಕಪ್ಪು ಮಿಂಚಿನ ಹೊಡೆತಕ್ಕೆ ಭಾರತ ತತ್ತರ' ಎಂಬ ಹೆಡ್ ಲೈನ್ ನೀಡಲಾಗಿದೆ.
ಢಾಕಾದ ಮೀರ್ ಪುರದಲ್ಲಿ ನಡೆದ ಎರಡನೇ ಏಕದಿನ ಪಂದ್ಯವನ್ನು ಭಾನುವಾರದಂದು ಟೀಂ ಇಂಡಿಯಾ 6 ವಿಕೆಟ್ ಗಳಿಂದ ಸೋತ ಬಳಿಕ ಬಾಂಗ್ಲಾದೇಶದಲ್ಲಿ ಕ್ರಿಕೆಟ್ ಅಭಿಮಾನಿಗಳ ಸಂಭ್ರಮಕ್ಕೆ ತಡೆ ಇಲ್ಲದ್ದಂತಾಗಿದೆ. [ಸರಣಿ ಸೋಲು, ಧೋನಿಯಿಂದ 'ಪದತ್ಯಾಗ'ದ ಬೆದರಿಕೆ]
ಈ ನಡುವೆ ಈ ಏಕದಿನ ಸರಣಿಯನ್ನು 3-0 ಅಂತರದಿಂದ ಸೋತರೂ ನನಗೇನು ಅನ್ನಿಸುವುದಿಲ್ಲ ಎಂದು ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಪ್ರತಿಕ್ರಿಯಿಸಿದ್ದಾರೆ. [ವಿಶ್ವದಾಖಲೆ ಬರೆದ ಮುಸ್ತಫಿಜುರ್]
ಮೊದಲ ಏಕದಿನ ಪಂದ್ಯವನ್ನು 79ರನ್ ಗಳಿಂದ ಸೋತಿದ್ದ ಭಾರತ, ಮಳೆಯಿಂದ ಹಾನಿಗೊಳಗಾದ ಎರಡನೇ ಪಂದ್ಯದಲ್ಲಿ ಡಕ್ ವರ್ತ್ ಲೂಯಿಸ್ ನಿಯಮದಂತೆ ಪರಿಷ್ಕೃತ ಟಾರ್ಗೆಟ್ ನೀಡಿದರೂ ಬಾಂಗ್ಲಾ ಕೈಲಿ ಸೋಲು ತಪ್ಪಿಸಿಕೊಳ್ಳಲಾಗಲಿಲ್ಲ. ನೆರೆ ರಾಷ್ಟ್ರದ ವಿರುದ್ಧ ಇದು ಪ್ರಪ್ರಥಮ ಸರಣಿ ಸೋಲಾಗಿದೆ. []
ಎಡಗೈ ವೇಗಿ ಮುಸ್ತಫಿಜುರ್ ರಹ್ಮಾನ್ ಮತ್ತೊಮ್ಮೆ ಅದ್ಭುತ ಬೌಲಿಂಗ್ ಮಾಡಿ 6/43 ಪಡೆದು ವಿಶ್ವದಾಖಲೆ ನಿರ್ಮಿಸಿ, ಬಾಂಗ್ಲಾ ಸರಣಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಬಾಂಗ್ಲಾದೇಶದ ಕ್ರಿಕೆಟ್ ಪುನರುತ್ಥಾನವಾಗಿದೆ ಎಂದು ಮಾಧ್ಯಮಗಳು ಹಾಡಿಹೊಗಳಿವೆ. ಬಾಂಗ್ಲಾದೇಶದ ಪ್ರಮುಖ ಪತ್ರಿಕೆಗಳ ಹೆಡ್ ಲೈನ್ಸ್ ಇಲ್ಲಿವೆ...

ಬಾಂಗ್ಲಾದೇಶದ ಪ್ರಮುಖ ದಿನಪತ್ರಿಕೆಗಳಲ್ಲಿ
ಎಡಗೈ ವೇಗಿ ಮುಸ್ತಫಿಜುರ್ ರಹ್ಮಾನ್ ಮತ್ತೊಮ್ಮೆ ಅದ್ಭುತ ಬೌಲಿಂಗ್ ಮಾಡಿ 6/43 ಪಡೆದು ವಿಶ್ವದಾಖಲೆ ನಿರ್ಮಿಸಿ, ಬಾಂಗ್ಲಾ ಸರಣಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ನಾಯಕ ಎಂಎಸ್ ಧೋನಿ ಸುದ್ದಿಗೋಷ್ಠಿ ವಿವರ, ಯುವ ವೇಗಿ ಮುಸ್ತಫಿಜುರ್ ರಹ್ಮಾನ್ ಅದ್ಭುತ ಬೌಲಿಂಗ್, ವಿರಾಟ್ ಕೊಹ್ಲಿ ವೈಫಲ್ಯದ ಬಗ್ಗೆ ಬಾಂಗ್ಲಾದೇಶದ ಪ್ರಮುಖ ದಿನಪತ್ರಿಕೆಗಳಲ್ಲಿ ಬರೆಯಲಾಗಿದೆ.

The Daily Star - "InCREDIBLE"
ದಿ ಡೈಲಿ ಸ್ಟಾರ್ -ಊಹೆಗೂ ನಿಲುಕದ ದೃಶ್ಯಗಳನ್ನು ನಾವೀಗ ಕಾಣುತ್ತಿದ್ದೇವೆ. ಒಂದು ವರ್ಷದಲ್ಲೇ ಬಾಂಗ್ಲಾ ಕ್ರಿಕೆಟ್ ಚಿತ್ರಣ ಬದಲಾಗಿದೆ. ಟೈಗರ್ಸ್ ಗಳು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಎರಡನೇ ಶ್ರೇಷ್ಠ ತಂಡವನ್ನು ಮಣಿಸಿ ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾಗಿದ್ದು ಸಂತಸದ ವಿಷಯ ಎಂದು ಬರೆಯಲಾಗಿದೆ. ಹೆಚ್ಚಿನ ಓದಿಗೆ

"Tigers win ODI series"
ಭಾರತಕ್ಕೆ ಇದು ಹೀನಾಯ ಸೋಲು, ಸತತ ಎರಡು ಸೋಲು ಹಾಗೂ ಸರಣಿ ಸೋಲು ಬಾಂಗ್ಲಾ ಕ್ರಿಕೆಟ್ ಬೆಳಗುತ್ತಿದೆ. ಟೈಗರ್ಸ್ ಪಾಲಿಗೆ ಏಕದಿನ ಸರಣಿ ಎಂದು ಬರೆಯಲಾಗಿಎ. ಹೆಚ್ಚಿನ ಓದಿಗೆ

"Mustafiz mauls India"
ಎರಡು ಪಂದ್ಯಗಳಿಂದ 11 ವಿಕೆಟ್ ಕಿತ್ತಿರುವ ಯುವ ವೇಗಿ ಮುಸ್ತಫಿಜುರ್ ರಹ್ಮಾನ್ ಅವರನ್ನು ಹಾಡಿಹೊಗಳಲಾಗಿದ್ದು, ಬಾಂಗ್ಲಾ ಟೀಂ ಸಂಘಟಿತ ಹೋರಾಟದ ಮುಂದೆ ಭಾರತ ಸಪ್ಪೆಯಾಟ ಪ್ರದರ್ಶಿಸಿದೆ. ಧೋನಿ ಏನೇ ತಂತ್ರಗಾರಿಕೆ ಮಾಡಿದರೂ ಫಲ ನೀಡಲಿಲ್ಲ ಎಂದು ಬರೆಯಲಿದೆ. ಇನ್ನಷ್ಟು ಓದಿ

ಡೈಲಿ ಸನ್ ವರದಿ ನೋಡಿ
'ಹಳದಿ ಕಪ್ಪು ಮಿಂಚಿನ ಹೊಡೆತಕ್ಕೆ ಭಾರತ ಬಲಿ', ಟೈಗರ್ಸ್ ಗೆ ಐತಿಹಾಸಿಕ ವಿಜಯ ಎಂದು ಬರೆಯಲಾಗಿದೆ. ಇನ್ನಷ್ಟು ಓದಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications