ವಿಂಡೀಸ್, ಕಿವೀಸ್ ಸರಣಿಗೆ ಬಾಂಗ್ಲಾಕ್ಕೆ ಜಾನ್ ಲೆವಿಸ್ ಬ್ಯಾಟಿಂಗ್ ಕೋಚ್

ಧಾಕಾ: ಮುಂಬರಲಿರುವ ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್ ವಿರುದ್ಧದ ಸರಣಿಗಳಿಗಾಗಿ ಬಾಂಗ್ಲಾದೇಶ ಕ್ರಿಕೆಟ್ ತಂಡ ಇಂಗ್ಲೆಂಡ್‌ನ ಮಾಜಿ ಕ್ರಿಕೆಟರ್ ಜಾನ್ ಲೆವಿಸ್ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಿಸಿಕೊಂಡಿದೆ. ಈ ವಿಚಾರವನ್ನು ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಬುಧವಾರ (ಜನವರಿ 7) ತಿಳಿಸಿದೆ.
50ರ ಹರೆಯದ ಜಾನ್ ಲೆವಿಸ್ ಅವರು ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಬ್ಯಾಟಿಂಗ್ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಬಾಂಗ್ಲಾ ಕೋಚಿಂಗ್ ವಿಭಾಗ ಸೇರಿಕೊಂಡಿರುವ ಲೆವಿಸ್ ಅವರು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟರ್ ನೀಲ್ ಮೆಕೆಂಜಿ ಅವರನ್ನು ಕೆಳಗಿಳಿಸಿದ್ದಾರೆ.
ನೀಲ್ ಮೆಕೆಂಜಿ ಅವರು ಕಳೆದ ಆಗಸ್ಟ್‌ನಲ್ಲಿ ಬ್ಯಾಟಿಂಗ್ ಕೋಚ್ ಸ್ಥಾನದಿಂದ ಕೆಳಗಿಳಿದಿದ್ದರು. ವೈಯಕ್ತಿಕ ಕಾರಣದಿಂದಾಗಿ ತಾನು ಈ ಸಂಕಷ್ಟದ ಹೊತ್ತಿನಲ್ಲಿ ನನ್ನ ಕುಟುಂಬದ ಜೊತೆಗಿರಲು ಬಯಸಿದ್ದೇನೆ ಎಂದು ರಾಜೀನಾಮೆ ನೀಡುವಾಗ ಮೆಕೆಂಜಿ ಹೇಳಿದ್ದರು.
ಅಂದ್ಹಾಗೆ, ಕೊರೊನಾ ಪಿಡುಗಿನ ಕಾರಣದಿಂದಾಗಿ ಎಲ್ಲರೂ ಹೆಚ್ಚು ಕಾಲ ಕೋಚಿಂಗ್ ಒಪ್ಪಂದ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಒಂದೆರಡು ಸರಣಿಗಳಿಗಾಗಿ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎಂದು ಬಾಂಗ್ಲಾ ಕ್ರಿಕೆಟ್ ಆಪರೇಶನ್‌ನ ಅಧ್ಯಕ್ಷ ಅಕ್ರಮ್ ಖಾನ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications