PAK vs BAN: ಪಾಕ್ ಹೀನಾಯ ಸೋಲಿಗೆ ಶಾಹೀದ್ ಆಫ್ರಿದಿ ಕಿಡಿ
ಕುಣಿಯಲು ಬರದೆ ಇದ್ದವರು ನೆಲ ಡೊಂಕು ಅಂತಾರಲ್ಲಾ ಹಾಗೆ ಆಗಿದೆ ಪಾಕಿಸ್ತಾನ ಕ್ರಿಕೆಟ್ ತಂಡದ ಪರಿಸ್ಥಿತಿ. ಬಾಂಗ್ಲಾದೇಶದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಪಾಕ್ 10 ವಿಕೆಟ್ ಸೋಲು ಕಂಡಿದೆ. ಈ ಸೋಲು ಪಾಕ್ ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ. ಈಗ ಪಾಕ್ ಸೋಲಿಗೆ ಕಾರಣವೇನು ಎಂದು ತಿಳಿದುಕೊಳ್ಳಲು ಆತ್ಮಾವಲೋಕನೆ ನಡೆದಿದೆ.
ಪಾಕಿಸ್ತಾನ ತವರಿನಲ್ಲಿ ಹೀನಾಯ ಪ್ರದರ್ಶನ ನೀಡುತ್ತಿದೆ. ತಂಡದ ಪ್ರದರ್ಶನವನ್ನು ಕಂಡು ಸ್ಟಾರ್ ಆಟಗಾರ ಶಾಹೀದ್ ಆಫ್ರಿದಿ ಕೆಂಡ ಕಾರಿದ್ದಾರೆ. ಬಾಂಗ್ಲಾ ವಿರುದ್ಧದ ಪಾಕ್ ತಂಡ ಆಯ್ಕೆ ಮಾಡಿರುವ ಪ್ಲೇಯಿಂಗ್ ಇಲೆವೆನ್ ಬಗ್ಗೆ ಶಾಹೀದ್ ಆಫ್ರಿದಿ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಪಿಚ್ ಆಯ್ಕೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.

ಆಫ್ರಿದಿ ಹೇಳಿದ್ದೇನು?
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಅಸಮಾಧಾನ ಹಂಚಿಕೊಂಡಿರುವ ಶಾಹೀದ್ ಅಫ್ರಿದಿ, ಪಿಚ್ ಆಯ್ಕೆ ಮತ್ತು 4 ವೇಗದ ಬೌಲರ್‌ಗಳನ್ನು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸೇರಿಸಿದ ಬಗ್ಗೆ ಅಫ್ರಿದಿ ಎಕ್ಸ್‌ನಲ್ಲಿ ಅಸಮಾಧಾನ ಹೋರಹಾಕಿದ್ದಾರೆ. ತಂಡ ಪ್ರಮುಖ ಸ್ಪಿನ್ ಬೌಲರ್ ಇಲ್ಲದೆ ಹೇಗೆ ಅಂಗಳಕ್ಕೆ ಇಳಿಯಿತು ಎಂಬ ಪ್ರಶ್ನೆ ಸಹ ಮಾಡಿದ್ದಾರೆ.
ಸಾಲು ಸಾಲು ಸೋಲು
ಕಳೆದ ಎರಡು ವರ್ಷಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಹಲವು ಹೀನಾಯ ಸೋಲುಗಳನ್ನು ಕಡಿದೆ. 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಫೈನಲ್‌ಗೆ ಅರ್ಹತೆ ಪಡೆದಿತ್ತು. ಆದರೆ ಲೀಗ್ ಹಂತದಲ್ಲಿ ಜಿಂಬಾಬ್ವೆ ವಿರುದ್ಧ ಸೋಲು ಕಂಡಿತ್ತು.

ಆ ಬಳಿಕ ನಡೆದ ಎಲ್ಲ ದೊಡ್ಡ ಟೂರ್ನಿಗಳಲ್ಲಿ ಪಾಕ್ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದೆ. ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ನಲ್ಲಿ ಪಾಕಿಸ್ತಾನ ತಂಡಕ್ಕೆ ಅಫ್ಘಾನಿಸ್ತಾನ ಕಟ್ಟಿ ಹಾಕಿತು. ಈ ಪಂದ್ಯದಲ್ಲಿ ಆಫ್ಘಾನ್ 8 ವಿಕೆಟ್ ಜಯ ಸಾಧಿಸಿತು.
ಯುಎಸ್‌ಎ ವಿರುದ್ಧವೂ ನಿರಾಸೆ
ಐಸಿಸಿ ಟೂರ್ನಿಯಲ್ಲಿ ಪಾಕಿಸ್ತಾನ ಅಫ್ಘಾನಿಸ್ತಾನ ವಿರುದ್ಧ ಸೋತಿದ್ದು ಇದೇ ಮೊದಲು. ಇತ್ತೀಚಿಗೆ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆದ 2024 ರ ಟಿ 20 ವಿಶ್ವಕಪ್‌ನಲ್ಲಿ ಪಾಕಿಸ್ತಾನವು ಯುಎಸ್ ತಂಡದ ವಿರುದ್ಧ ಆಘಾತ ಕಂಡಿತು. ಈ ಮೂಲಕ ಸೂಪರ್ ಎಂಟರ ಘಟ್ಟಕ್ಕೆ ತಂಡ ಅರ್ಹತೆ ಪಡೆಯಲು ವಿಫಲವಾಯಿತು.
ಆಸ್ಟ್ರೇಲಿಯಾ ಪ್ರವಾಸದ ವೇಳೆ ಕಾಂಗರೂ ತಂಡ ಕ್ಲೀನ್ ಸ್ವೀಪ್ ಮಾಡಿತ್ತು. ಇದೀಗ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ, ಪಾಕಿಸ್ತಾನವನ್ನು 10 ವಿಕೆಟ್‌ಗಳಿಂದ ಸೋಲಿಸಿದೆ. ಪಾಕಿಸ್ತಾನ ಕ್ರಿಕೆಟ್ ಇತಿಹಾಸದಲ್ಲಿ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಸೋಲನುಭವಿಸಿರುವುದು ಇದೇ ಮೊದಲು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications