PAK vs BAN: ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಬಾಂಗ್ಲಾಗೆ ಪೆಟ್ಟು
ಈಗಾಗಲೇ ಬಾಂಗ್ಲಾದೇಶ ಪಾಕಿಸ್ತಾನ ಪ್ರವಾಸವನ್ನು ಬೆಳೆಸಿದೆ. ಈ ವೇಳೆ ಬಾಂಗ್ಲಾ ಪಾಕ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಬಾಂಗ್ಲಾಕ್ಕೆ ಪೆಟ್ಟು ಬಿದ್ದಿದೆ. ಬಾಂಗ್ಲಾದೇಶದ ಆರಂಭಿಕ ಆಟಗಾರ ಮಹಮ್ಮದುಲ್ ಹಸನ್ ತೊಡೆಸಂದು ಗಾಯದಿಂದಾಗಿ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ.
ತೊಡೆ ಸಂದು ಗಾಯಕ್ಕೆ ತುತ್ತಾಗಿರುವ ಆರಂಭಿಕ ಆಟಗಾರನ ಬದಲಿಗೆ ಬೇರೆ ಆಟಗಾರನನ್ನು ಇನ್ನು ಬಾಂಗ್ಲಾ ಕ್ರಿಕೆಟ್ ಸಂಸ್ಥೆ ಪ್ರಕಟಿಸಿಲ್ಲ. ರಾವಲ್ಪಿಂಡಿಯಲ್ಲಿ ಆಗಸ್ಟ್ 21 ರಿಂದ ಟೆಸ್ಟ್ ಸರಣಿ ಆರಂಭವಾಗಲಿದ್ದು, ಈ ಪಂದ್ಯಕ್ಕೂ ಮುನ್ನ ಬಾಂಗ್ಲಾ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಈ ಪ್ರವಾಸದಲ್ಲಿ ಬಾಂಗ್ಲಾದೇಶ ಪಾಕಿಸ್ತಾನದಲ್ಲಿ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.

ಈಗಾಗಲೇ ಬಿಸಿಬಿ ಮುಖ್ಯ ವೈದ್ಯ ದೇಬಶೀಧ್ ಚೌಧರಿ ಅವರಿಗೆ ಶನಿವಾರ ಇಮೇಲ್ ಮೂಲಕ ಮಹಮ್ಮದುಲ್ ಹಸನ್ ಅವರ ಗಾಯದ ಬಗ್ಗೆ ಅಪ್‌ಡೇಟ್ ನೀಡಲಾಗಿದೆ. ಅವರು ಸ್ನಾಯು ಸೆಳೆತಕ್ಕೆ ಬಳಗಾಗಿದ್ದು ಸುಮಾರು ಮೂರು ವಾರಗಳ ಕಾಲ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಗಾಯವಾಗಿದ್ದು ಹೇಗೆ?
ಬಾಂಗ್ಲಾ ತಂಡ ಇಸ್ಲಾಮಾಬಾದ್‌ನಲ್ಲಿ ಪಾಕಿಸ್ತಾನ ಎ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಿತು. ಈ ವೇಳೆ ಬಾಂಗ್ಲಾದೇಶ ಎ ತಂಡದ ಭಾಗವಾಗಿದ್ದ ಮಹಮ್ಮದುಲ್ ಫೀಲ್ಡಿಂಗ್ ಮಾಡುವಾಗ ಗಾಯಕ್ಕೆ ತುತ್ತಾಗಿದ್ದಾರೆ. ಈ ಗಾಯ ಅವರು ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಲು ಆಗಲಿಲ್ಲ. ಈ ಪಂದ್ಯದ ಮೊದಲ ಇನಿಂಗ್ಸ್‌ಲ್ಲಿ ಬ್ಯಾಟ್ ಮಾಡಿದ್ದ ಮಹಮ್ಮದುಲ್ 65 ರನ್ ಬಾರಿಸಿ ತಂಡಕ್ಕೆ ನೆರವಾಗಿದ್ದರು. ಆದರೆ ಗಾಯದ ಕಾರಣದಿಂದ ಮೈದಾನ ತೊರೆಯಬೇಕಾಯಿತು ಎಂದು ಕ್ರಿಕ್ ಬಝ್ ತನ್ನ ವರದಿಯಲ್ಲಿ ತಿಳಿಸಿದೆ.
ಬಾಂಗ್ಲಾಗೆ ಬೆಂಬಿಡದ ಗಾಯ
ಬಾಂಗ್ಲಾದೇಶದ ವಿಕೆಟ್ ಕೀಪರ್ ಬ್ಯಾಟರ್ ಮುಶ್ಫಿಕರ್ ರಹೀಮ್ ಪಾಕಿಸ್ತಾನ ವಿರುದ್ಧ ಸರಣಿಗೂ ಮುನ್ನ ಗಾಯಕ್ಕೆ ತುತ್ತಾಗಿದ್ದಾರೆ. ಇವರು ಅಭ್ಯಾಸದ ವೇಳೆ ಬೆರಳಿನ ಗಾಯಕ್ಕೆ ಗುರಿಯಾಗಿದ್ದು, ಮೊದಲ ಟೆಸ್ಟ್ ಆರಂಭಕ್ಕೂ ಮುನ್ನವೇ ಚೇತರಿಸಿಕೊಳ್ಳುವ ಸಾಧ್ಯತೆ ಇದೆ. ಈ ಗಾಯದಿಂದಾಗಿ ಮುಶ್ಫೀಕರ್ ರಹೀಮ್ ಅವರು ಬಾಂಗ್ಲಾದೇಶ ಪರ ಅಭ್ಯಾಸ ಪಂದ್ಯದಲ್ಲಿ ಭಾಗವಹಿಸಿದ್ದರು. ಅಭ್ಯಾಸದ ವೇಳೆ ಗಾಯಕ್ಕೆ ತುತ್ತಾಗಿದ್ದರಿಂದ ಇವರು ಮೈದಾನಕ್ಕೆ ಮರಳಲು ಸಾಧ್ಯವಾಗಿರಲಿಲ್ಲ. ಮೊದಲ ಟೆಸ್ಟ್‌ಗೂ ಮುನ್ನ ಇವರು ಫಿಟ್ ಆಗುವ ಸಾಧ್ಯತೆ ಹೆಚ್ಚಿದೆ.
ಬಾಂಗ್ಲಾದೇಶದಲ್ಲಿ ಹಿಂಸಾಚಾರಗಳು ಭುಗಿಲೆದ್ದ ಕಾರಣದಿಂದ ಬಾಂಗ್ಲಾ ಕ್ರಿಕೆಟ್ ತಂಡ, ತನ್ನ ಪ್ರವಾಸವನ್ನು ಬೇಗನೆ ಆರಂಭಿಸಿತ್ತು. ಬಾಂಗ್ಲಾ, ಪಾಕ್‌ಗೆ ನಿಗದಿತ ಪ್ರವಾಸಕ್ಕೆ ಐದು ದಿನ ಮುಂಚಿತವಾಗಿ ಪ್ರವಾಸವನ್ನು ಕೈಗೊಂಡಿದೆ. ಅಲ್ಲದೆ ಬಾಂಗ್ಲಾದೇಶದಲ್ಲಿ ಅಭ್ಯಾಸ ಮಾಡಲು ಸರಿಯಾದ ವಾತಾವರಣ ಇಲ್ಲದ ಕಾರಣ ಬಾಂಗ್ಲಾ ಪಾಕ್‌ನಲ್ಲಿಯೇ ಅಭ್ಯಾಸ ಆರಂಭಿಸಿದೆ. ಈ ಸರಣಿಯು ಮುಗಿದ ಬಳಿಕ ಬಾಂಗ್ಲಾದೇಶ ತಂಡ ಭಾರತ ಪ್ರವಾಸವನ್ನು ಬೆಳೆಸಲಿದೆ. ಈ ವೇಳೆ ಟೆಸ್ಟ್ ಹಾಗೂ ಟಿ20 ಸರಣಿಗಳನ್ನು ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications