WI vs BAN: ಬಾಂಗ್ಲಾದೇಶ ತಂಡಕ್ಕೆ 15 ವರ್ಷಗಳ ನಂತರ ವೆಸ್ಟ್ ಇಂಡೀಸ್‌ನಲ್ಲಿ ಮೊದಲ ಟೆಸ್ಟ್ ಗೆಲುವು
ಸಬೀನಾ ಪಾರ್ಕ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ತಂಡವನ್ನು 101 ರನ್‌ಗಳಿಂದ ಬಾಂಗ್ಲಾದೇಶ ಸೋಲಸಿದೆ. ಈ ಗೆಲುವಿನೊಂದಿಗೆ ಬಾಂಗ್ಲಾದೇಶ 15 ವರ್ಷಗಳ ನಂತರ ವೆಸ್ಟ್ ಇಂಡೀಸ್‌ನಲ್ಲಿ ಮೊದಲ ಟೆಸ್ಟ್ ಗೆಲುವು ದಾಖಲಿಸಿದೆ. ಇದು ಬಾಂಗ್ಲಾದೇಶಕ್ಕೆ ಈ ವರ್ಷದ ಮೂರನೇ ಟೆಸ್ಟ್ ಗೆಲುವಾಗಿದೆ.
ಎರಡನೇ ಇನ್ನಿಂಗ್ಸ್‌ನಲ್ಲಿ ಜಾಕರ್ ಅಲಿ ಅವರ 91 ರನ್‌ಗಳ ಅದ್ಭುತ ಇನ್ನಿಂಗ್ಸ್‌ನಿಂದ ಬಾಂಗ್ಲಾದೇಶ ತಂಡ 287 ರನ್‌ಗಳ ಗುರಿಯನ್ನು ವೆಸ್ಟ್ ಇಂಡೀಸ್‌ಗೆ ನೀಡಿತು. ಈ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡದ ಬ್ಯಾಟರ್‌ಗಳನ್ನು ಬಾಂಗ್ಲಾ ಸ್ಪಿನ್ನರ್ ತೈಜುಲ್ ಇಸ್ಲಾಂ ಕಾಡಿದರು. ತೈಜುಲ್ ಇಸ್ಲಾಂ ಐದು ವಿಕೆಟ್‌ಗಳನ್ನು ಪಡೆಯುವ ಮೂಲಕ ವೆಸ್ಟ್ ಇಂಡೀಸ್ ತಂಡವನ್ನು 185 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ವೆಸ್ಟ್ ಇಂಡೀಸ್ ಪರ ಕವೀಮ್ ಹಾಡ್ಜ್ (55) ಮತ್ತು ನಾಯಕ ಕ್ರೇಗ್ ಬ್ರಾಥ್‌ವೈಟ್ (43) ಹೋರಾಟದ ಇನ್ನಿಂಗ್ಸ್ ಆಡಿದರು. ಆದರೆ ತೈಜುಲ್ ವಿಕೆಟ್ ಕಬಳಿಸುವ ಮೂಲಕ ಬಾಂಗ್ಲಾದೇಶವು ನಾಲ್ಕನೇ ದಿನದಲ್ಲಿ ಸ್ಮರಣೀಯ ಗೆಲುವು ಕಾಣಲು ಕಾರಣವಾದರು.
ಹೀರೋ ಆದ ತೈಜುಲ್
ಸಬೀನಾ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಬಾಂಗ್ಲಾದೇಶ ಪರ ತೈಜುಲ್ ಇಸ್ಲಾಂ ಮಿಂಚಿದರು. ಗೆಲುವಿನ ನಿರೀಕ್ಷೆಯಲ್ಲಿದ ವೆಸ್ಟ್ ಇಂಡೀಸ್ ತಂಡಕ್ಕೆ ತೈಜುಲ್ ಇಸ್ಲಾಂ ವಿಲನ್ ಆದರು. ತೈಜುಲ್ 50 ರನ್‌ಗಳನ್ನು ಬಿಟ್ಟು ಕೊಟ್ಟು 5 ವಿಕೆಟ್ ಪಡೆದು ಬಾಂಗ್ಲಾದೇಶ ತಂಡದ ಹೀರೋ ಎನಿಸಿಕೊಂಡರು. ಈ ಮೂಲಕ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 15ನೇ ಬಾರಿಕೆ ಐದು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ವೆಸ್ಟ್ ಇಂಡೀಸ್ ನೆಲದಲ್ಲಿ ಬಾಂಗ್ಲಾದೇಶ ಕೊನೆಯ ಬಾರಿಗೆ 2009 ರಲ್ಲಿ ತಮ್ಮ ಮೊದಲ ಟೆಸ್ಟ್ ಜಯವನ್ನು ದಾಖಲಿಸಿತು.
ಸಬೀನಾ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶದ ವೇಗದ ಬೌಲರ್ ತಸ್ಕಿನ್ ಅಹ್ಮದ್ ಮತ್ತು ವೆಸ್ಟ್ ಇಂಡೀಸ್ ವೇಗದ ಬೌಲರ್ ಜೇಡನ್ ಸೀಲ್ಸ್ ಅವರು ಉತ್ತಮ ಬೌಲಿಂಗ್ ಮಾಡಿದರು. ಹೀಗಾಗಿ ಇಬ್ಬರಿಗೂ ಜಂಟಿಯಾಗಿ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ನೀಡಲಾಯಿತು. ಇದೀಗ ಬಾಂಗ್ಲಾದೇಶ ಎರಡು ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸುವಲ್ಲಿ ಯಶಸ್ವಿಯಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ಅಂಕಪಟ್ಟಿಯಲ್ಲಿ ಬಾಂಗ್ಲಾದೇಶ ಎಂಟನೇ ಸ್ಥಾನಕ್ಕೆ ಏರಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications