ಐದು ದಿನ ಮುಂಚಿತವಾಗಿ ಪಾಕ್ ಪ್ರವಾಸ ಬೆಳೆಸಲಿರುವ ಬಾಂಗ್ಲಾದೇಶ
ಬಾಂಗ್ಲಾದೇಶದಲ್ಲಿ ಸ್ಥಿತಿ ಗಂಭೀರವಾಗಿದೆ. ಈ ದೇಶದಲ್ಲಿ ದಿನೇ ದಿನೇ ಹಿಂಸಾಚಾರಗಳು ಹೆಚ್ಚಾಗುತ್ತಿವೆ. ಈ ಬೆಳವಣಿಗೆಗಳ ಮಧ್ಯೆ ಐಸಿಸಿ ಬಾಂಗ್ಲಾದೇಶದಲ್ಲಿ ಆಯೋಜಿಸಬೇಕಿದ್ದ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಬಗ್ಗೆ ಚಿಂತನೆ ನಡೆಸುತ್ತಿದೆ. ಈ ದೇಶವನ್ನು ಬಿಟ್ಟು ಬೇರೆ ದೇಶಗಳಲ್ಲಿ ಮಹಿಳಾ ಟಿ20 ವಿಶ್ವಕಪ್ ಆಡಿಸುವ ಇನ್ನೊಂದು ಪ್ಲ್ಯಾನ್ ರೆಡಿ ಆಗುತ್ತಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯ ಬಾಂಗ್ಲಾದೇಶ ಕ್ರಿಕೆಟ್ ತಂಡ ಈಗ ಪಾಕಿಸ್ತಾನ ಪ್ರವಾಸವನ್ನು ಬೆಳಸಲಿದೆ.
ಬಾಂಗ್ಲಾದೇಶ ತನ್ನ ನಿಗದಿತ ಸರಣಿಯನ್ನು ಆಡಲು ಪಾಕಿಸ್ತಾನಕ್ಕೆ ತೆರಳುತ್ತಿದೆ. ಆದರೆ ನಿಗದಿ ಆಗಿದ್ದ ದಿನಾಂಕಕ್ಕಿಂತ ಮುಂಚಿತವಾಗಿ ಬಾಂಗ್ಲಾ ತಂಡ ಪಾಕ್ ಪ್ರವಾಸ ಕೈಗೊಳ್ಳಲಿದೆ. ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯು ರಾವಲ್ಪಿಂಡಿಯಲ್ಲಿ ಆಗಸ್ಟ್ 21 ರಿಂದ ಪ್ರಾರಂಭವಾಗಲಿದ್ದು, ಇದೀಗ ಪ್ರವಾಸಿ ತಂಡ ಬಾಂಗ್ಲಾದೇಶ 5 ದಿನಗಳ ಮುಂಚಿತವಾಗಿ ಆಗಸ್ಟ್ 12 ರಂದು ಪಾಕಿಸ್ತಾನಕ್ಕೆ ತೆರಳಲಿದೆ.

ದೇಶದಲ್ಲಿ ಹಿಂಸಾಚಾರಗಳು ಹೆಚ್ಚಾಗಿದ್ದರಿಂದ ಬಾಂಗ್ಲಾ ಕ್ರಿಕೆಟ್ ತಂಡ ಅಭ್ಯಾಸ ಮಾಡಲು ಆಗುತ್ತಿಲ್ಲ. ಹೀಗಾಗಿ ಬಾಂಗ್ಲಾ ಕ್ರಿಕೆಟ್ ತಂಡ ರಾವಲ್ಪಿಂಡಿಯಲ್ಲಿ ನಿಗದಿತ ದಿನಾಂಕಕ್ಕಿಂತ ಮುಂಚಿತವಾಗಿ ಬಂದು, ಅಭ್ಯಾಸ ನಡೆಸಲು ಪ್ಲ್ಯಾನ್ ಮಾಡಿಕೊಂಡಿದೆ.
ಐದು ದಿನ ಮುಂಚಿತವಾಗಿ ಪಾಕ್ ಪ್ರವಾಸ
ಈ ಮೊದಲಿನ ಯೋಜನೆಯಂತೆ ಬಾಂಗ್ಲಾದೇಶ ತಂಡವು ಆಗಸ್ಟ್ 17 ರಂದು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ತಲುಪಬೇಕಿತ್ತು. ಆದರೆ ಬಾಂಗ್ಲಾ ಐದು ದಿನ ಮುಂಚಿತವಾಗಿ ಪಾಕ್ ತಲುಪಲಿದೆ. ಬಾಂಗ್ಲಾದೇಶ ತಂಡವು ಆಗಸ್ಟ್ 14-16 ರವರೆಗೆ ಗಡಾಫಿ ಕ್ರೀಡಾಂಗಣದಲ್ಲಿ ತರಬೇತಿ ಶಿಭಿರ ನಡೆಸಲಿದೆ. ನಂತರ ಆಗಸ್ಟ್ 17 ರಂದು ಇಸ್ಲಾಮಾಬಾದ್‌ಗೆ ಪ್ರವಾಸ ಬೆಳೆಸಲಿದೆ. ಅಲ್ಲಿ ಆಗಸ್ಟ್ 18-20 ರವರೆಗೆ ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ತಂಡ ಅಭ್ಯಾಸವನ್ನು ನಡೆಸಲಿದೆ.

ಆಟವು ಕೇವಲ ಸೋಲು-ಗೆಲುವು ಮಾತ್ರವಲ್ಲ, ಸಹೋದರತ್ವವೂ ಆಗಿದೆ ಎಂದು ಪಿಸಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಲ್ಮಾನ್ ನಸೀರ್ ತಿಳಿಸಿದ್ದಾರೆ. ಬಾಂಗ್ಲಾ ಕ್ರಿಕೆಟ್ ಮಂಡಳಿ ತಮ್ಮ ಪ್ರಸ್ತಾಪವನ್ನು ಒಪ್ಪಿಕೊಂಡಿರುವುದಕ್ಕೆ ಧನ್ಯವಾದಗಳು. ಬಾಂಗ್ಲಾ ಆಟಗಾರರಿಗೆ ಸಾಂಪ್ರದಾಯಿಕ ಅತಿಥ್ಯ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಅಭ್ಯಾಸಕ್ಕೆ ಕೋಚಿಂಗ್ ಸಿಬ್ಬಂದಿ ಗೈರು?
ಪಾಕಿಸ್ತಾನದಲ್ಲಿ ನಡೆಯುವ ಅಭ್ಯಾಸದ ಸಮಯದಲ್ಲಿ ಬಾಂಗ್ಲಾ ತನ್ನ ಕೋಚಿಂಗ್ ಸಿಬ್ಬಂದಿಯ ಕರ್ತವ್ಯ ಮಿಸ್ ಮಾಡಿಕೊಳ್ಳಲಿದೆ. ಏಕೆಂದರೆ ಬಾಂಗ್ಲಾದಲ್ಲಿ ನಡೆಯುತ್ತಿರುವ ಉದ್ವಿಗ್ನತೆಯಿಂದಾಗಿ ಆಯಾ ದೇಶದ ರಾಯಭಾರ ಕಚೇರಿಗಳು ತಮ್ಮ ಪ್ರಜೆಗಳ ಪ್ರಯಾಣವನ್ನು ನಿಷೇಧಿಸಿವೆ.
ಬಾಂಗ್ಲಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಚಂಡಿಕಾ ಹತುರುಸಿಂಗ, ಬೌಲಿಂಗ್ ಕೋಚ್ ಆಂಡ್ರೆ ಆಡಮ್ಸ್, ಸಹಾಯಕ ಕೋಚ್ ನಿಕ್ ಪೋಥಾಸ್, ಸ್ಪಿನ್ ಸಲಹೆಗಾರ ಮುಷ್ತಾಕ್ ಅಹ್ಮದ್, ಬ್ಯಾಟಿಂಗ್ ಕೋಚ್ ಡೇವಿಡ್ ಹೆಂಪ್ ಮತ್ತು ನಾಥನ್ ಕೆಲ್ಲಿ ಇದ್ದಾರೆ. ಇವರ ಸೇವೆಯನ್ನು ತಂಡ ಅಭ್ಯಾಸ ಪಂದ್ಯದ ವೇಳೆ ಮಿಸ್ ಮಾಡಿಕೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications