ಏಷ್ಯಾಕಪ್: ರಶೀದ್-ಗುಲ್ಬಾದಿನ್ ಆಲ್ ರೌಂಡರ್ ಆಟ, ಅಫ್ಘಾನ್ ಗೆ ಜಯ

ದುಬೈ, ಸೆಪ್ಟೆಂಬರ್ 20: ದುಬೈಯಲ್ಲಿ ನಡೆಯುತ್ತಿರುವ ಏಷ್ಯಾಕಪ್ 2018ರ 6ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಬಾಂಗ್ಲಾದೇಶದೆದುರು 136ರನ್ ಭರ್ಜರಿ ಗೆಲುವು ದಾಖಲಿಸಿದೆ. ಗುಲ್ಬಾದಿನ್ ನೈಬ್ ಮತ್ತು ರಶೀದ್ ಖಾನ್ ಅವರ ಆಲ್ ರೌಂಡರ್ ಆಟಕ್ಕೆ ಕಂಗೆಟ್ಟ ಬಾಂಗ್ಲಾ ಭಾರೀ ಅಂತರದಿಂದ ಸೋಲನುಭವಿಸಿದೆ.
ಸ್ಕೋರ್ ಕಾರ್ಡ್ ಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಅಫ್ಘಾನಿಸ್ತಾನ ತಂಡ 50 ಓವರ್ ಮುಕ್ತಾಯಕ್ಕೆ 7 ವಿಕೆಟ್ ಕಳೆದು 255 ರನ್ ಪೇರಿಸಿ ಎದುರಾಳಿಗೆ 256 ರನ್ ಗುರಿ ನೀಡಿತ್ತು. ಹಶ್ಮಾತುಲ್ಲಾ ಶಾಹಿದಿ 58 ರನ್, ಮೊಹಮ್ಮದ್ ಶಾಹಝಾದ್ 37, ಗುಲ್ಬಾದಿನ್ ನೈಬ್ ಅಜೇಯ 42, ರಶೀದ್ ಖಾನ್ ಅಜೇಯ 57 ರನ್ ಪೇರಸಿ ಅಫ್ಘಾನ್ ತಂಡದ ಮೊತ್ತ ಏರಿಸುವಲ್ಲಿ ನೆರವಾದರು. ಚೇಸಿಂಗ್ ವೇಳೆ ಕಳಪೆ ಬ್ಯಾಟಿಂಗ್ ಗೆ ಸಾಕ್ಷಿಯಾದ ಬಾಂಗ್ಲ 42.1 ಓವರ್ ನಲ್ಲಿ ಎಲ್ಲಾ ವಿಕೆಟ್ ಕಳೆದು 119 ರನ್ ಪೇರಿಸಿ ಸೋಲೊಪ್ಪಿಕೊಂಡಿತು.
ಈ ಪಂದ್ಯದಲ್ಲಿ ಅಫ್ಘಾನ್ ಸ್ಥಾನ್ ತಂಡದ ರಶೀದ್ ಖಾನ್ ಮತ್ತು ಗುಲ್ಬಾದಿನ್ ಆಲ್ ರೌಂಡರ್ ಆಟ ಪ್ರದರ್ಶಿಸಿದರು. ಬಾಂಗ್ಲಾ ಇನ್ನಿಂಗ್ಸ್ ವೇಳೆ ರಶೀದ್ 13ಕ್ಕೆ ಎರಡು, ಮುಜೀಬ್ ರಹ್ಮಾನ್ 22ಕ್ಕೆ ಎರಡು, ಗುಲ್ಬಾದಿನ್ 30ಕ್ಕೆ ಎರಡು ವಿಕೆಟ್ ಉರುಳಿಸಿ ಎದುರಾಳಿಯನ್ನು ಕಾಡಿದರು.
ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ತಂಡಗಳು ತಮ್ಮ ಮೊದಲ ಪಂದ್ಯವನ್ನು ಶ್ರೀಲಂಕಾ ವಿರುದ್ಧವೇ ಆಡಿದ್ದು ಎರಡೂ ತಂಡಗಳು ಶ್ರೀಲಂಕಾಕ್ಕೆ ಮಣ್ಣು ಮುಕ್ಕಿಸಿದ್ದವು. ಶ್ರೀಲಂಕಾ ಮತ್ತು ಹಾಂಕಾಂಗ್ ತಂಡಗಳು ಟೂರ್ನಿಯಿಂದ ಹೊರ ಬಿದ್ದಿದ್ದು, ಬಾಂಗ್ಲ, ಭಾರತ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಂಡಗಳು ಸೂಪರ್ ಫೋರ್ ಸುತ್ತಿಗೆ ಪ್ರವೇಶಿಸಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications