For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾದೇಶ vs ಅಫ್ಘಾನಿಸ್ತಾನ ಏಕೈಕ ಟೆಸ್ಟ್: 21ನೇ ಶತಮಾನದ ಅತಿದೊಡ್ಡ ಗೆಲುವು ದಾಖಲಿಸಿದ ಬಾಂಗ್ಲಾ

ಶನಿವಾರ, ಜೂನ್ 17ರಂದು ಮಿರ್‌ಪುರದಲ್ಲಿ ಮುಕ್ತಾಯಗೊಂಡ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯದ ನಾಲ್ಕನೇ ದಿನದಂದು ಬಾಂಗ್ಲಾದೇಶ ತಂಡವು ಭರ್ಜರಿ ಗೆಲುವು ಸಾಧಿಸಿತು.

ಏಷ್ಯಾದ ತಮ್ಮ ಎದುರಾಳಿ ಅಫ್ಘಾನಿಸ್ತಾನ ವಿರುದ್ಧ 546 ರನ್‌ಗಳ ದಾಖಲೆಯ ಜಯ ಗಳಿಸಿದ ಬಾಂಗ್ಲಾದೇಶ, ಈ ಹಾದಿಯಲ್ಲಿ 21ನೇ ಶತಮಾನದ ಅತಿದೊಡ್ಡ ಗೆಲುವು ದಾಖಲಿಸಿತು. ಇದು ಹಲವು ವರ್ಷಗಳವರೆಗೆ ಈ ದಾಖಲೆ ಉಳಿಯಲಿದೆ.

Bangladesh vs Afghanistan One-off Test

ಈ 546 ರನ್‌ಗಳ ಗೆಲುವು ಒಂದು ಟೆಸ್ಟ್ ಆಡುವ ರಾಷ್ಟ್ರಕ್ಕೆ ರನ್‌ಗಳ ಅಂತರದಿಂದ ಮೂರನೇ ಅತಿ ದೊಡ್ಡ ಗೆಲುವಾಗಿದೆ. ಈ ಶತಮಾನದ ರನ್‌ಗಳ ಅಂತರದಿಂದ ಅತ್ಯಂತ ದೊಡ್ಡ ಗೆಲುವಾಗಿದ್ದು, ಅದರಲ್ಲಿಯೂ ಏಷ್ಯಾದ ತಂಡಕ್ಕೆ ಬೃಹತ್ ಅಂತರದ ಜಯವಾಗಿದೆ.

ಹೆಚ್ಚು ಅಂತರದ ರನ್‌ಗಳ ಗೆಲುವಿನಲ್ಲಿ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದೆ. ಆಂಗ್ಲ ಪಡೆ 1928ರಲ್ಲಿ ಆಸ್ಟ್ರೇಲಿಯಾ ವಿರುದ್ಧ 675 ರನ್‌ಗಳಿಂದ ಗೆಲುವು ಸಾಧಿಸಿತ್ತು. ನಂತರ 1934ರಲ್ಲಿ ಇಂಗ್ಲೆಂಡ್ ವಿರುದ್ಧ 562 ರನ್‌ಗಳ ಜಯ ದಾಖಲಿಸಿದ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ.

Bangladesh vs Afghanistan One-off Test

ಅಫ್ಘಾನಿಸ್ತಾನದ ನಾಯಕ ಹಶ್ಮತುಲ್ಲಾ ಶಾಹಿದಿ ಅವರು ಏಕೈಕ ಟೆಸ್ಟ್‌ ಪಂದ್ಯದ ಮೊದಲ ದಿನದಂದು ಮಿರ್‌ಪುರದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಬಾಂಗ್ಲಾದೇಶಕ್ಕೆ ಅವಕಾಶ ನೀಡಿದರು. ನಜ್ಮುಲ್ ಹೊಸೈನ್ ಶಾಂಟೊ 146 ರನ್‌ಗಳ ಅದ್ಭುತ ಶತಕ ಮತ್ತು ಮಹ್ಮುದುಲ್ ಹಸನ್ ಜಾಯ್ ಅವರ 76 ರನ್‌ಗಳ ಅರ್ಧಶತಕದ ಸಹಾಯದಿಂದ ಮೊದಲ ಇನ್ನಿಂಗ್ಸ್‌ನಲ್ಲಿ 382 ರನ್ ಕಲೆಹಾಕಿತು.

ಇದಕ್ಕೆ ಪ್ರತ್ಯುತ್ತರವಾಗಿ, ಅಫ್ಘಾನಿಸ್ತಾನ ತಂಡವು ಕೇವಲ 146 ರನ್‌ಗಳಿಗೆ ಸರ್ವಪತನ ಕಂಡಿತು. ಅಫ್ಸರ್ ಝಜೈ ಅವರ 36 ರನ್ ಅಫ್ಘಾನಿಸ್ತಾನ ತಂಡದ ಪರ ಅತ್ಯಧಿಕ ಸ್ಕೋರ್ ಆಗಿತ್ತು.

ಬೌಲಿಂಗ್‌ನಲ್ಲಿ ಬಾಂಗ್ಲಾದೇಶ ಪರ ವೇಗಿಗಳಾದ ಎಬಾಡೋಟ್ ಹೊಸೈನ್ 47 ರನ್‌ಗೆ 4 ವಿಕೆಟ್ ಮತ್ತು ಶೋರಿಫುಲ್ ಇಸ್ಲಾಂ 28 ರನ್‌ಗೆ 2 ವಿಕೆಟ್ ಪಡೆದು ಮಿಂಚಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶ 236 ರನ್‌ಗಳ ಮುನ್ನಡೆ ಸಾಧಿಸಿದರು.

Bangladesh vs Afghanistan One-off Test

ಇನ್ನು ತಮ್ಮ ಎರಡನೇ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶದ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿತು. ಮತ್ತೆ ನಜ್ಮುಲ್ ಹೊಸೈನ್ ಶಾಂಟೊ 124 ರನ್, ಮೊಮಿನುಲ್ ಹಕ್ ಅಜೇಯ 121 ರನ್, ಜಾಕಿರ್ ಹಸನ್ 71 ರನ್ ಮತ್ತು ಲಿಟ್ಟನ್ ದಾಸ್ ಅಜೇಯ 66 ರನ್‌ಗಳ ನೆರವಿನಿಂದ ಕೇವಲ 80 ಓವರ್‌ಗಳಲ್ಲಿ 4 ವಿಕೆಟ್‌ಗೆ 425 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಅಫ್ಘಾನಿಸ್ತಾನ ತಂಡಕ್ಕೆ ಬರೋಬ್ಬರಿ 662 ರನ್‌ಗಳ ಬೃಹತ್ ಗುರಿ ನೀಡಿತು.

ಅಫ್ಘಾನಿಸ್ತಾನ ತಂಡ ತನ್ನ ಎರಡನೇ ಇನ್ನಿಂಗ್ಸ್‌ನ ಬ್ಯಾಟಿಂಗ್‌ನಲ್ಲಿ ಇನ್ನೂ ಕಳಪೆ ಪ್ರದರ್ಶನ ನೀಡಿ ಕೇವಲ 115 ರನ್‌ಗಳಿಗೆ ಆಲೌಟ್ ಆಯಿತು. ಈ ವೇಳೆ ಬಾಂಗ್ಲಾದೇಶ ಪರ ಬೌಲಿಂಗ್‌ನಲ್ಲಿ ವೇಗಿಗಳಾದ ತಸ್ಕಿನ್ ಅಹ್ಮದ್ 37 ರನ್‌ಗೆ 4 ವಿಕೆಟ್ ಮತ್ತು ಶೋರಿಫುಲ್ ಇಸ್ಲಾಂ 28 ರನ್‌ಗೆ 3 ವಿಕೆಟ್ ಪಡೆದು ಮತ್ತೊಮ್ಮೆ ಮಿಂಚು ಹರಿಸಿದರು.

ಅಫ್ಘಾನಿಸ್ತಾನ ತಂಡದ ಪರ ರಹಮತ್ ಶಾ (30 ರನ್) ಮಾತ್ರ 20 ರನ್‌ಗಳ ಗಡಿ ದಾಟಲು ಸಾಧ್ಯವಾಯಿತು. ಕರೀಂ ಜನತ್ 18 ರನ್ ಮತ್ತು ನಾಯಕ ಹಶ್ಮತುಲ್ಲಾ ಶಾಹಿದಿ 13 ರನ್ ಎರಡಂಕಿ ದಾಟಿದ ಇನ್ನಿಬ್ಬರು ಬ್ಯಾಟ್ಸ್‌ಮನ್‌ಗಳು.

ಬಾಂಗ್ಲಾದೇಶದ ನಜ್ಮುಲ್ ಹೊಸೈನ್ ಶಾಂಟೊ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಗಳಿಸಿದ್ದರ ಫಲವಾಗಿ 'ಪ್ಲೇಯರ್ ಆಫ್ ದಿ ಮ್ಯಾಚ್' ಪ್ರಶಸ್ತಿಗೆ ಭಾಜನರಾದರು.

Story first published: Saturday, June 17, 2023, 17:37 [IST]
Other articles published on Jun 17, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+