Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಾಂಗ್ಲಾದೇಶ vs ಅಫ್ಘಾನಿಸ್ತಾನ: ಮೊದಲ ಟಿ20 ಪಂದ್ಯ, Live ಸ್ಕೋರ್ ಹಾಗೂ ಪ್ಲೇಯಿಂಗ್ XI

Bangladesh vs Afghanistan, T20 series 1st match, Live score and playing XI, Dhaka

ಬಾಂಗ್ಲಾದೇಶ ಪ್ರವಾಸ ಕೈಗೊಂಡಿರುವ ಅಫ್ಘಾನಿಸ್ತಾನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆಕೊಂಡಿದೆ. ಏಕದಿನ ಸರಣಿಯಲ್ಲಿ ಗೆದ್ದಿರುವ ಆತಿಥೇಯ ಬಾಂಗ್ಲಾದೇಶ ಟಿ20 ಸರಣಿಯನ್ನು ಕೂಡ ವಶಕ್ಕೆ ಪಡೆಯುವ ಉತ್ಸಾಹದಲ್ಲಿದೆ. ಏಕದಿನ ಸರನಿಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಗೆದ್ದಿದ್ದ ಬಾಂಗ್ಲಾದೇಶ ಮೂರನೇ ಪಂದ್ಯದಲ್ಲಿಪ್ರವಾಸಿ ಅಫ್ಘಾನಿಸ್ತಾನ ವಿರುದ್ಧ ಹೀನಾಯ ಸೋಲು ಅನುಭವಿಸಿತ್ತು. ಹೀಗಾಗಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಬಾಂಗ್ಲಾದೇಶ 2-1 ಅಂತರದಿಂದ ವಶಕ್ಕೆ ಪಡೆದುಕೊಂಡಿತ್ತು. ಇದೀಗ ಈ ಎರಡು ತಂಡಗಳ ಚಿತ್ತ ಟಿ20 ಪಂದ್ಯದ ಮೇಲಿದೆ.

ಇನ್ನು ಸರಣಿಯ ದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಗೆಲ್ಲುವ ಅದ್ಭುತ ಅವಕಾಶವನ್ನು ಹೊಂದಿತ್ತು. ಆದರೆ 6ನೇ ವಿಕೆಟ್‌ಗೆ ಬಾಂಗ್ಲಾದೇಶ ಪ್ರದರ್ಶಿಸಿದ ದಾಖಲೆಯ ಪ್ರದರ್ಶನ ಆತಿಥೇಯರ ಪರವಾಗಿ ಪಂದ್ಯದ ಫಲಿತಾಂಶ ಬರಲು ಕಾರಣವಾದರು. 45 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖಮಾಡಿದ್ದ ಬಾಂಗ್ಲಾ ತಂಡದ ಪರವಾಗಿ ಆಫಿಫ್ ಹುಸೈನ್ ಹಾಗೂ ಮೆಹದಿ ಹಸನ್ ದಾಖಲೆಯ ಜೊತೆಯಾಟ ಬಾಂಗ್ಲಾ ತಂಡವನ್ನು ಗೆಲ್ಲಿಸಿತ್ತು. ಇನ್ನು ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ 88 ರನ್‌ಗಳ ಅಂತರದ ಸುಲಭ ಜಯವನ್ನು ದಾಖಲಿಸಿತ್ತು. ಮೂರನೇ ಪಂದ್ಯದಲ್ಲಿ ಮತ್ತೆ ಆತಿಥೇಯರ ವಿರುದ್ಧ ತಿರುಗಿಬಿದ್ದ ಅಫ್ಘಾನಿಸ್ತಾನ ಸರ್ವಾಂಗೀಣ ಪ್ರದರ್ಶನ ನೀಡಿ ಭರ್ಜರಿ ಗೆಲುವು ಸಾಧಿಸಿತ್ತು.

LIVE ಸ್ಕೋರ್‌ಕಾರ್ಡ್ ಹೀಗಿದೆ

1
53518

ಮೂರನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ಸಾಧಿಸಿದ ಗೆಲುವಿನಿಂದಾಗಿ ಟಿ20 ಸರಣಿ ಕುತೂಹಲ ಹೆಚ್ಚಿಸಿದೆ. ಏಕದಿನ ಸರಣಿಯನ್ನು ಕಳೆದುಕೊಂಡಿರುವ ಅಫ್ಘನ್ ಪಡೆಯಲ್ಲಿ ಟಿ20 ಮಾದರಿಗೆ ಪೂರಕವಾಗಿರುವ ಸಾಕಷ್ಟು ಪ್ರತಿಭಾವಂತ ಆಟಗಾರರಿದ್ದು ಸರಣಿಯಲ್ಲಿ ಮೇಲುಗೈ ಸಾಧಿಸುವ ಹುಮ್ಮಸ್ಸಿನಲ್ಲಿದೆ.

ಬಾಂಗ್ಲಾದೇಶ ಆಡುವ ಬಳಗ: ಲಿಟನ್ ದಾಸ್ (ವಿಕೆಟ್ ಕೀಪರ್), ಮೊಹಮ್ಮದ್ ನಯಿಮ್, ಶಾಕಿಬ್ ಅಲ್ ಹಸನ್, ಮಹಮ್ಮದುಲ್ಲಾ (ನಾಯಕ), ಯಾಸಿರ್ ಅಲಿ, ಅಫೀಫ್ ಹೊಸೈನ್, ಮುನಿಮ್ ಶಹರಿಯಾರ್, ಮಹೇದಿ ಹಸನ್, ನಸುಮ್ ಅಹ್ಮದ್, ಶೋಹಿದುಲ್ ಇಸ್ಲಾಂ, ಮುಸ್ತಫಿಜುರ್ ರೆಹಮಾನ್
ಬೆಂಚ್: ಮುಶ್ಫಿಕರ್ ರಹೀಮ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ

ಅಫ್ಘಾನಿಸ್ತಾನ ಆಡುವ ಬಳಗ: ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ (ನಾಯಕ), ರಶೀದ್ ಖಾನ್, ಅಜ್ಮತುಲ್ಲಾ ಒಮರ್ಜಾಯ್, ದರ್ವಿಶ್ ರಸೂಲಿ, ಕರೀಂ ಜನತ್, ಫಝಲ್ಹಕ್ ಫಾರೂಕಿ, ಮುಜೀಬ್ ಉರ್ ರಹಮಾನ್, ಖೈಸ್ ಅಹ್ಮದ್
ಬೆಂಚ್: ಫರೀದ್ ಅಹ್ಮದ್ ಮಲಿಕ್, ಅಫ್ಸರ್ ಝಜೈ, ಶರಫುದ್ದೀನ್ ಅಶ್ರಫ್, ಉಸ್ಮಾನ್ ಘನಿ, ನಿಜತ್ ಮಸೂದ್

Story first published: Thursday, March 3, 2022, 14:55 [IST]
Other articles published on Mar 3, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+