
ಧಾಕಾ: ಧಾಕಾದ ಶೇರ್ ಈ ಬಾಂಗ್ಲಾ ಸ್ಟೇಡಿಯಂನಲ್ಲಿ ಶುಕ್ರವಾರ (ಮೇ 28) ನಡೆದ ಬಾಂಗ್ಲಾದೇಶ ಮತ್ತು ಪ್ರವಾಸಿ ಶ್ರೀಲಂಕಾ ನಡುವಿನ ಮೂರನೇ ಮತ್ತು ಕೊನೇಯ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಭರ್ಜರಿ 97 ರನ್‌ಗಳ ಜಯ ಗಳಿಸಿದೆ. ನಾಯಕ ಕುಸಾಲ್ ಪೆರೆರಾ ಶತಕ ಮತ್ತು ವೇಗಿ ದುಶ್ಮಂತ ಚಮೀರ ಮಾರಕ ಬೌಲಿಂಗ್‌ನಿಂದ ಶ್ರೀಲಂಕಾ ಕ್ಲೀನ್ ಸ್ವೀಪ್‌ನಿಂದ ತಪ್ಪಿಸಿಕೊಂಡಿದೆ.
ಮೂರು ಪಂದ್ಯಗಳ ಏಕದಿನ ಸರಣಿ ಈಗ 2-1ರಿಂದ ಬಾಂಗ್ಲಾದೇಶದ ಪಾಲಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ, ದನುಷ್ಕಾ ಗುಣತಿಲಕ 39, ಕುಸಾಲ್ ಪೆರೆರಾ 120, ಕುಸಾಲ್ ಮೆಂಡಿಸ್ 22, ದನಂಜಯ ಡಿ ಸಿಲ್ವಾ 55, ವನಿಂದು ಹಸರಂಗ 18 ರನ್‌ನೊಂದಿಗೆ 50 ಓವರ್‌ಗೆ 6 ವಿಕೆಟ್ ಕಳೆದು 286 ರನ್ ಗಳಿಸಿತ್ತು.
ಗುರಿ ಬೆನ್ನಟ್ಟಿದ ಬಾಂಗ್ಲಾದೇಶ, ತಮೀಮ್ ಇಕ್ಬಾಲ್ 17, ಮುಷ್ಫಿಕುರ್ ರಹೀಮ್ 28, ಮೊಸಾದ್ದೆಕ್ ಹೊಸೈನ್ 51, ಮುಹಮ್ಮದುಲ್ಲ 53, ಹಫೀಫ್ ಹೊಸೈನ್ 16 ರನ್‌ನೊಂದಿಗೆ 42.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 189 ರನ್ ಗಳಿಸಿ ಶರಣಾಯಿತು.
ಶ್ರೀಲಂಕಾ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದ ತಸ್ಕಿನ್ ಅಹ್ಮದ್ 4, ಶರೀಫುಲ್ ಇಸ್ಲಾಮ್ 1 ವಿಕೆಟ್ ಪಡೆದರೆ, ಬಾಂಗ್ಲಾ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾದ ದುಶ್ಮಂತ ಚಮೀರ 16 ರನ್‌ಗೆ 5, ಬಿನುರ ಫೆರ್ನಾಂಡೊ 1, ವನಿಂದು ಹಸರಂಗ 2, ರಮೇಶ್ ಮೆಂಡಿಸ್ 2 ವಿಕೆಟ್‌ನೊಂದಿಗೆ ಗಮನ ಸೆಳೆದರು.