Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಕದಿನ ಪಂದ್ಯ: ಮೆಹಿದಿ ಹಸನ್ ಸ್ಪಿನ್ ದಾಳಿಗೆ ನಲುಗಿದ ವೆಸ್ಟ್ ಇಂಡೀಸ್

Bangladesh vs West Indies, 2nd ODI: Bangladesh won by 7 wickets

ಧಾಕಾ: ಬಾಂಗ್ಲಾದೇಶ ಪ್ರವಾಸದಲ್ಲಿರುವ ವೆಸ್ಟ್ ಇಂಡೀಸ್ ತಂಡ ಆತಿಥೇಯ ಬಾಂಗ್ಲಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಆಡುತ್ತಿದೆ. ಧಾಕಾದ ಶೇರ್ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ 7 ವಿಕೆಟ್ ಸುಲಭ ಗೆಲುವು ದಾಖಲಿಸಿದೆ.

ಬಲಗೈ ಆಫ್‌ಬ್ರೇಕ್‌ ಬೌಲರ್ ಮೆಹಿದಿ ಹಸನ್ ಮಾರಕ ಬೌಲಿಂಗ್‌ನಿಂದಾಗಿ ಬಾಂಗ್ಲಾ ಏಕದಿನ ಸರಣಿಯನ್ನು 2-0ಯಿಂದ ವಶಪಡಿಸಿಕೊಂಡಿದೆ. ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ವೆಸ್ಟ್ ಇಂಡೀಸ್, ಕ್ಜಾರ್ನ್ ಒಟ್ಲೆ 24, ಎನ್ಕ್ರುಮಾ ಬೊನ್ನರ್ 20, ರೋಮನ್ ಪೋವೆಲ್ 41 ರನ್‌ನೊಂದಿಗೆ 43.4 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 148 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಬಾಂಗ್ಲಾದೇಶದಿಂದ ಲಿಟನ್ ದಾಸ್ 22, ನಾಯಕ ತಮೀಮ್ ಇಕ್ಬಾಲ್ 50, ಶಕೀಬ್ ಅಲ್ ಹಸನ್ ಅಜೇಯ 43, ಮುಷ್ಫಿಕರ್ ರಹೀಮ್ ಅಜೇಯ 9 ರನ್ ಸೇರ್ಪಡೆಯೊಂದಿಗೆ ಬಾಂಗ್ಲಾ 33.2 ಓವರ್‌ಗೆ 3 ವಿಕೆಟ್ ಕಳೆದು 149 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ವೆಸ್ಟ್ ಇಂಡೀಸ್ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದ ಮುಸ್ತಫಿಝುರ್ ರಹ್ಮಾನ್ 2, ಹಸನ್ ಮಹಮ್ಮದ್ 1, ಮೆಹಿದಿ ಹಸನ್ 4 (25 ರನ್), ಶಕೀಬ್ ಅಲ್ ಹಸನ್ 2 ವಿಕೆಟ್ ಪಡೆದರೆ, ಬಾಂಗ್ಲಾ ಇನ್ನಿಂಗ್ಸ್‌ನಲ್ಲಿ ವಿಂಡೀಸ್‌ನ ಅಕೀಲ್ ಹೊಸೈನ್, ಜೇಸನ್ ಮೊಹಮ್ಮದ್ ಮತ್ತು ರೇಮನ್ ರೀಫರ್ 1 ವಿಕೆಟ್‌ನಿಂದ ಗಮನ ಸೆಳೆದರು. ಮೆಹಿದಿ ಹಸನ್ ಪಂದ್ಯಶ್ರೇಷ್ಠರೆನಿಸಿದರು.

Story first published: Saturday, January 23, 2021, 13:53 [IST]
Other articles published on Jan 23, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+