
ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಮುಖಾಮುಖಿಯಾಗಿದೆ. ಜನವರಿ 20ರಂದು ಮೊದಲ ಪಂದ್ಯ ಬಾಂಗ್ಲಾದೇಶದ ಮೀರ್ಪುರ್‌ನ ಶೇರ್ ಇ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರಂಭವಾಗಿದೆ. ಈ ಪಂದ್ಯದಲ್ಲಿ ಆರು ಪಂದ್ಯ ಯುವ ಆಟಗಾರರು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಕ್ಕೆ ಪದಾರ್ಪಣೆಯನ್ನು ಮಾಡಿದ್ದಾರೆ.
ಜೇಸನ್ ಮೊಹಮ್ಮದ್ ನೇತೃತ್ವದ ಪ್ರವಾಸಿ ವೆಸ್ಟ್ ಇಂಡೀಸ್ ತಂಡ ಸಂಪೂರ್ಣ ಯುವ ಬಳಗದೊಂದಿಗೆ ಬಾಂಗ್ಲಾದೇಶಕ್ಕೆ ಬಂದಿಳಿದಿದೆ. ಆದರೆ ಕಳೆದ ವಾರ ಪ್ರತಿಭಾನ್ವಿತ ಆಟಗಾರ ಹೇಡೆನ್ ವಾಲ್ಶ್ ಜೂನಿಯರ್‌ಗೆ ಕೊರೊನಾ ವೈರಸ್ ದೃಢಪಟ್ಟಿರುವುದು ತಂಡಕ್ಕೆ ಹಿನ್ನಡೆಯಾಯಿತು.
ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅಕೀಲ್ ಹೊಸೈನ್, ಆಂಡ್ರೆ ಮೆಕಾರ್ಥಿ, ಚೆಮರ್ ಹೋಲ್ಡರ್, ಜೋಶುವಾ ಡಾ ಸಿಲ್ವಾ, ಕೈಲ್ ಮೇಯರ್ಸ್ ಮತ್ತು ಎನ್‌ಕ್ರುಮಾ ಬೊನ್ನರ್ ಈ ಆರು ಆಟಗಾರರು ಏಕದಿನ ಕ್ರಿಕೆಟ್‌ಗೆ ಬುಧವಾರ ಪದಾರ್ಪಣೆಯನ್ನು ಮಾಡಿದ್ದಾರೆ.
ಬಾಂಗ್ಲಾದೇಶ ತಂಡ ಕಳೆದ 9 ತಿಂಗಳ ಹಿಂದೆ ನಾಯಕನಾಗಿ ಆಯ್ಕೆಯಾದ ತಮೀಮ್ ಇಕ್ಬಾಲ್ ನೇತೃತ್ವದಲ್ಲಿ ಮೊದಲ ಬಾರಿಗೆ ಕಣಕ್ಕಿಳಿದಿದೆ. ಆದರೆ ಈ ಪಂದ್ಯದಲ್ಲಿ ನಿಷೇಧಕ್ಕೆ ಒಳಗಾಗಿ ತಂಡಕ್ಕೆ ವಾಪಾಸಾಗಿರುವ ಮಾಜಿ ನಾಯಕ ಶಕೀಬ್ ಅಲ್ ಹಸ್ಸನ್ ಮರಳಿರುವುದು ಬಾಂಗ್ಲಾದೇಶ ತಂಡದ ಪಾಲಿಗೆ ಪ್ರಮುಖವಾಗಿದೆ.
ಈ ಎರಡು ತಂಡಗಳು ಕೂಡ 2023ರ ವಿಶ್ವಕಪ್‌ನಲ್ಲಿ ಪಾಳ್ಗೊಳ್ಳಲು ಅರ್ಹತೆಯನ್ನು ನೀಡುವ ವಿಶ್ವಕಪ್ ಸೂಪರ್ ಲೀಗ್‌ನ ಮೊದಲ ಪಂದ್ಯದಲ್ಲಿ ಪಾಲ್ಗೊಂಡಿದೆ. ಬಾಂ್ಗಲಾ ಹಾಗೂ ವೆಸ್ಟ್ ಇಂಡೀಸ್ ನಡುವಿನ ಈ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳು ಮೀರ್‌ಪುರದಲ್ಲೇ ನಡೆಯಲಿದ್ದು ಅಂತಿಮ ಪಂದ್ಯ ಜನವರಿ 25ರಂದು ಚಟ್ಟೋಗ್ರಾಮ್‌ನಲ್ಲಿ ನಡೆಯಲಿದೆ. ಈ ಸರಣಿಯ ಬಳಿಕ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲೂ ಎರಡು ತಂಡಗಳು ಪಾಲ್ಗೊಳ್ಳಲಿದೆ.