ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಮೇಯರ್ಸ್ ದಾಖಲೆಯ ದ್ವಿಶತಕ : ಬಾಂಗ್ಲಾ ವಿರುದ್ಧ ವಿಂಡೀಸ್‌ಗೆ ಗೆಲುವು

Bangladesh vs West Indies: Mayers owns record books after stellar unbeaten 210 in winning cause

ಬಾಂಗ್ಲಾದೇಶ ಹಾಗೂ ವೆಸ್ಟ್ ಇಮಡೀಸ್ ನಡುವಿನ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡಿಸ್ ಭರ್ಜರಿ ಗೆಲುವನ್ನು ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶದ ಭರ್ಜರಿ ಆಟದ ಹೊರತಾಗಿಯೂ ವೆಸ್ಟ್ ಇಂಡೀಸ್ ಗೆಲುವನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದರಲ್ಲಿ ಚೊಚ್ಚಲ ಪಂದ್ಯವನ್ನಾಡಿದ ಕೈಲ್ ಮೇಯರ್ಸ್ ದಾಖಲೆಯ ದ್ವಿಶತಕ ಸಿಡಿಸಿ ಗೆಲುವಿಗೆ ಕಾರಣರಾದರು.

ಕೈಲ್ ಮೇಯರ್ಸ್ ಸಿಡಿಸಿ ಈ ಶತಕ ಚೊಚ್ಚಲ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ದಾಖಲಿಸಿದ ಮೊದಲ ದ್ವಿಶತಕ ಎಂಬ ದಾಖಲೆಗೆ ಪಾತ್ರವಾಗಿದೆ. 310 ಎಸೆತಗಳನ್ನು ಎದುರಿಸಿದ ಮೇಯರ್ಸ್ ಅಜೇಯ 210 ರನ್ ಬಾರಿಸಿ ಗೆಲುವನ್ನು ಸಾರಿದರು.

ಭಾರತ vs ಇಂಗ್ಲೆಂಡ್: ರಿಷಭ್ ಪಂತ್ ತಮಾಷೆಯ ವಿಡಿಯೋ ನೋಡಿ!ಭಾರತ vs ಇಂಗ್ಲೆಂಡ್: ರಿಷಭ್ ಪಂತ್ ತಮಾಷೆಯ ವಿಡಿಯೋ ನೋಡಿ!

ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ನಲ್ಲಿ 430 ರನ್‌ಗಳನ್ನು ಗಳಿಸಿ ಆಲೌಟ್ ಆಗಿತ್ತು. ಮೆಹ್ದಿ ಹಸ್ಸನ್ ಭರ್ಜರಿ ಶತಕ ಹಾಗೂ ಶಕಿಬ್ ಅಲ್ ಹಸನ್ ಹಾಗೂ ಶದ್ಮನ್ ಇಸ್ಲಾನ್ ಅರ್ಧ ಶತಕ ಬಾಂಗ್ಲಾದೇಶದ ಬೃಹತ್ ಮೊತ್ತಕ್ಕೆ ಕಾರಣವಾಗಿತ್ತು. ಆದರೆ ಇದಕ್ಕೆ ಪ್ರತಿಯಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್ 259 ರನ್‌ಗಳಿಗೆ ಆಲೌಟ್ ಆಗಿ 181 ರನ್‌ಗಳ ದೊಡ್ಡ ಅಂತರದ ಮುನ್ನಡೆಯನ್ನು ಪಡೆದಿತ್ತು.

ಬಳಿಕ ಎರಡನೇ ಇನ್ನಿಂಗ್ಸ್‌ನಲ್ಲಿ 223 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡಿದ್ದಾಗ ಡಿಕ್ಲೇರ್ ಘೋಷಿಸಿತು. ಈ ಮೂಲಕ 395 ರನ್‌ಗಳ ಬೃಹತ್ ಗುರಿಯನ್ನು ವೆಸ್ಟ್ ಇಂಡೀಸ್ ತಂಡಕ್ಕೆ ಘೋಷಿಸಿತು. ಆದರೆ ಈ ಮೊತ್ತವನ್ನು ವೆಸ್ಟ್ ಇಂಡೀಸ್‌ನ ಯುವ ಪಡೆ ಅದ್ಭುತ ರೀತಿಯಲ್ಲಿ ಬೆನ್ನಟ್ಟಿ ಗೆಲುವು ಸಾಧಿಸಿದೆ.

ಪಾಕಿಸ್ತಾನ ಬ್ಯಾಟ್ಸ್‌ಮನ್ ಇನ್ಝಮಾಮ್ ದಾಖಲೆ ಮುರಿದ ಜೋ ರೂಟ್!ಪಾಕಿಸ್ತಾನ ಬ್ಯಾಟ್ಸ್‌ಮನ್ ಇನ್ಝಮಾಮ್ ದಾಖಲೆ ಮುರಿದ ಜೋ ರೂಟ್!

ವೆಸ್ಟ್ ಇಂಡೀಸ್ ತಂಡದ ಪರವಾಗಿ ಕೇಲ್ ಮೇಯರ್ 210 ರನ್ ಗಳಿಸಿದರೆ ಎನ್‌ಕ್ರಮಾ ಬೋನ್ನರ್ 86 ರನ್ ಸಿಡಿಸಿದರು. ಈ ಭರ್ಜರಿ ಆಟದಿಂದಾಗಿ ವೆಸ್ಟ್ ಇಂಡೀಸ್ 7 ವಿಕೆಟ್‌ಗಳ ಗೆಲುವು ಸಾಧಿಸಿದೆ.

Story first published: Sunday, February 7, 2021, 17:48 [IST]
Other articles published on Feb 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X