ವೆಸ್ಟ್ ಇಂಡೀಸ್ vs ಬಾಂಗ್ಲಾದೇಶ: ಏಕದಿನ, ಟೆಸ್ಟ್‌ಗೆ ಬಾಂಗ್ಲಾ ತಂಡ ಪ್ರಕಟ

ಧಾಕಾ: ಮುಂಬರಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟೆಸ್ಟ್ ಸರಣಿಗಾಗಿ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ (ಬಿಸಿಬಿ) ಸಂಭಾವ್ಯ ತಂಡಗಳನ್ನು ಪ್ರಕಟಿಸಿದೆ. ಈ ತಂಡದಲ್ಲಿ ಬಾಂಗ್ಲಾದ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಕಾಣಿಸಿಕೊಂಡಿದ್ದಾರೆ. ರಾಷ್ಟ್ರೀಯ ತಂಡದಿಂದ ಬ್ಯಾನ್ ಆಗಿದ್ದ ಶಕೀಬ್ ಮತ್ತೆ ತಂಡ ಸೇರಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಮತ್ತು ಟೆಸ್ಟ್ ಸರಣಿ ಎರಡಕ್ಕೂ ಶಕೀಬ್ ಹೆಸರಿಸಲ್ಪಟ್ಟಿದ್ದಾರೆ.
ಕಳೆದ ವರ್ಷ ಶಕೀಬ್ ಅಲ್ ಹಸನ್‌ಗೆ 12 ತಿಂಗಳ ನಿಷೇಧ ಶಿಕ್ಷೆ ವಿಧಿಸಲಾಗಿತ್ತು. ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ನ ಭ್ರಷ್ಟಾಚಾರ ವಿರೋಧಿ ನಿಯಮ ಉಲ್ಲಂಘಿಸಿದ ಕಾರಣಕ್ಕಾಗಿ ಶಕೀಬ್ ವಿರುದ್ಧ ನಿಷೇಧ ಹೇರಲಾಗಿತ್ತು. ಬುಕ್ಕಿಗಳು ಸಂಪರ್ಕಿಸಿದ್ದಾಗ ಅದನ್ನು ಐಸಿಸಿ ಗಮನಕ್ಕೆ ತಾರದಿದ್ದ ಕಾರಣಕ್ಕೆ ಹಸನ್‌ಗೆ ನಿಷೇಧ ಹೇರಲಾಗಿತ್ತು.
33ರ ಹರೆಯದ ಶಕೀಬ್ 56 ಟೆಸ್ಟ್ ಪಂದ್ಯಗಳಲ್ಲಿ 3862 ರನ್, 210 ವಿಕೆಟ್‌ಗಳು, 206 ಏಕದಿನ ಪಂದ್ಯಗಳಲ್ಲಿ 6323 ರನ್, 260 ವಿಕೆಟ್‌ಗಳನ್ನು ಪಡೆದಿದ್ದಾರೆ.

ಏಕದಿನ, ಟೆಸ್ಟ್ ಸರಣಿಗಳು ಆರಂಭ
ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಮತ್ತು ಮೂರು ಪಂದ್ಯಗಳ ಏಕದಿನ ಸರಣಿ ಫೆಬ್ರವರಿ 15ರಂದು ಆರಂಭಗೊಳ್ಳಲಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿ ಸದ್ಯ ನಡೆಯುತ್ತಿರುವ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿರಲಿದೆ.

ಏಕದಿನಕ್ಕೆ ಬಾಂಗ್ಲಾ ಸಂಭಾವ್ಯ ತಂಡ
ತಮೀಮ್ ಇಕ್ಬಾಲ್ ಖಾನ್, ಶಕೀಬ್ ಅಲ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಮುಶ್ಫಿಕುರ್ ರಹೀಮ್, ಎಂಡಿ ಮಿಥುನ್, ಲಿಟ್ಟನ್ ದಾಸ್, ಎಂಡಿ ಮಹಮ್ಮದ್ ಉಲ್ಲಾ, ಅಫಿಫ್ ಹೊಸೈನ್ ಧ್ರೂಬೊ, ಮುಸದ್ದೇಕ್ ಹೊಸೈನ್ ಸೈಕತ್, ಸೌಮ್ಯಾ ಸರ್ಕಾರ್, ಯಾಸಿರ್ ಅಲಿ ಚೌಧರಿ, ನೈಮ್ ಶೇಖ್, ತಸ್ಕಿನ್ ಅಹ್ಮದ್, ಮೊಹಮ್ಮದ್ ಅಲ್ ಅಮೀನ್ ಹೊಸೈನ್, ಎಂಡಿ. ಶೋರಿಫುಲ್ ಇಸ್ಲಾಂ, ಹಸನ್ ಮಹಮ್ಮದ್, ಸೈಫ್ ಉದ್ದೀನ್, ಮುಸ್ತಾಫಿಜುರ್ ರಹಮಾನ್, ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ನಾಸುಮ್ ಅಹ್ಮದ್, ಮೊಹಮ್ಮದ್ ಪರ್ವೇಜ್ ಹೊಸೈನ್ ಎಮನ್, ಮಹಾದಿ ಹಸನ್, ರುಬೆಲ್ ಹೊಸೈನ್.

ಟೆಸ್ಟ್ ಸರಣಿಗೆ ಬಾಂಗ್ಲಾ ತಂಡ
ಮೊಮಿಮುಲ್ ಹಕ್ ಶೋರಾಬ್, ತಮೀಮ್ ಇಕ್ಬಾಲ್ ಖಾನ್, ಶಕೀಬ್ ಅಲ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಮುಶ್ಫಿಕೂರ್ ರಹೀಮ್, ಎಂಡಿ ಮಿಥುನ್, ಲಿಟಾನ್ ಕುಮಾರ್ ದಾಸ್, ಯಾಸಿರ್ ಅಲಿ ಚೌಧರಿ, ಮೊಹಮ್ಮದ್ ಸೈಫ್ ಹಸನ್, ಅಬು ಜಯೀದ್ ಚೌಧರಿ ರಾಹಿ, ತಸ್ಕಿನ್ ಅಹ್ಮದ್, ತಾಸ್ಕಿನ್ ಅಹ್ಮದ್ ರಹಮಾನ್, ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಕ್ವಾಜಿ ನೂರುಲ್ ಹಸನ್ ಸೊಹನ್, ಶಾಡ್ಮನ್ ಇಸ್ಲಾಂ, ನಯೀಮ್ ಹಸನ್, ಎಬಾಡೋಟ್ ಹೊಸೈನ್ ಚೌಧರಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications