ನೋಬಾಲ್‌ಗೆ ರಿವ್ಯೂ ಉಂಟೇ? ಬಾಂಗ್ಲಾ ಪಂದ್ಯದಲ್ಲಿ ವಿವಾದ

ಢಾಕಾ, ಡಿಸೆಂಬರ್ 24: ವೆಸ್ಟ್ ಇಂಡೀಸ್-ಬಾಂಗ್ಲಾದೇಶ ನಡುವೆ ನಡೆದ ಮೂರನೇ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶದ ಅಂಪೈರ್ ತನ್ವೀರ್ ಅಹ್ಮದ್ ನೀಡಿದ ನೋಬಾಲ್ ತೀರ್ಪು ಭಾರಿ ವಿವಾದಕ್ಕೆ ಒಳಗಾಗಿದೆ.
ಒಶಾನೆ ಥಾಮಸ್ ಬೌಲಿಂಗ್‌ನಲ್ಲಿ ಬಾಂಗ್ಲಾದೇಶದ ಬ್ಯಾಟ್ಸ್‌ಮನ್ ಲಿಟನ್ ದಾಸ್ ಕ್ಯಾಚ್ ನೀಡಿದ್ದರು. ಆದರೆ, ಥಾಮಸ್, ಕ್ರೀಸ್‌ನಿಂದ ಹೊರಕ್ಕೆ ಕಾಲಿಟ್ಟಿದ್ದರು ಎಂದು ಅಂಪೈರ್ ತನ್ವೀರ್ ನೋಬಾಲ್ ಎಂಬುದಾಗಿ ತೀರ್ಪು ನೀಡಿದ್ದರು. ಜೊತೆಗೆ 'ಫ್ರೀ ಹಿಟ್' ಸಂಕೇತ ತೋರಿಸಿದ್ದರು.
ಕೂಡಲೇ ಮೈದಾನದ ಹೊರಗಿನ ದೊಡ್ಡ ಪರದೆಯಲ್ಲಿ ಆ ಎಸೆತದ ರಿಪ್ಲೈ ಮೂಡಿಬಂದಿತ್ತು. ಅದರಲ್ಲಿ ಥಾಮಸ್ ಅವರ ಪಾದದ ಹಿಂಬದಿ ಕ್ರೀಸ್‌ನ ಒಳಭಾಗದಲ್ಲಿ ಇತ್ತು. ಆಗ ವಿಂಡೀಸ್ ನಾಯಕ ಕಾರ್ಲೋಸ್ ಬ್ರಾಥ್‌ವೈಟ್ ಅಂಪೈರ್ ತೀರ್ಪು ಮರುಪರಿಶೀಲನೆಗೆ ಕೋರಿದರು. ಜೊತೆಗೆ ಅಂಪೈರ್‌ಗಳ ಜೊತೆ ವಾಗ್ವಾದ ನಡೆಸಿದರು
ಈ ನಡೆ ಮೈದಾನದಲ್ಲಿದ್ದ ಅಂಪೈರ್‌ಗಳನ್ನು ಕಕ್ಕಾಬಿಕ್ಕಿಯನ್ನಾಗಿಸಿತು. ಅಂಪೈರ್ ನೋಬಾಲ್ ಎಮದು ತೀರ್ಪು ನೀಡಿದಾಗ ಅದನ್ನು ರಿವ್ಯೂ ಕೇಳಬಹುದೇ ಎಂಬ ಪ್ರಶ್ನೆ ಉದ್ಭವಿಸಿತು. ಏಕೆಂದರೆ ಐಸಿಸಿ ನಿಯಮಾವಳಿ ರೂಪಿಸುವಾಗ ಈ ಪ್ರಶ್ನೆ ಎದುರಾಗಿರಲಿಲ್ಲ.
ಒಮ್ಮೆ ಮೂರನೇ ಅಂಪೈರ್‌ಗೆ ಪರಿಶೀಲನೆ ನಡೆಸುವಂತೆ ಕೋರಿದರೂ, ಮಾತುಕತೆ ನಡೆಸಿದ ಬಳಿಕ ಸ್ವತಃ ತನ್ವೀರ್, ಲಿಟನ್ ದಾಸ್ ಔಟ್ ಎಂದು ತೀರ್ಪು ನೀಡಿದರು. ಅಷ್ಟರಲ್ಲಿ ರೆಫರಿ ಜೆಫ್ ಕ್ರೋವ್ ಕೂಡ ಉಭಯ ತಂಡದ ಆಟಗಾರರು ಮತ್ತು ಅಂಪೈರ್‌ಗಳ ಜೊತೆ ಚರ್ಚೆ ನಡೆಸಿದ್ದರು. ಐಸಿಸಿ ನಿಯಮಾವಳಿ ಪ್ರಕಾರ ನೋಬಾಲ್‌ಗೆ ರಿವ್ಯೂ ಇಲ್ಲ ಎಂದು ಕೊನೆಗೆ ತೀರ್ಮಾನಿಸಲಾಯಿತು. ಹೀಗಾಗಿ ಲಿಟನ್ ದಾಸ್ ಜೀವದಾನ ಪಡೆದರೆ, ವಿಂಡೀಸ್ ನಿರಾಶೆ ಅನುಭವಿಸಿತ್ತು.
ತಮ್ಮ ಮೂರನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅಂಪೈರಿಂಗ್ ಮಾಡುತ್ತಿರುವ ತನ್ವೀರ್, ಅದಕ್ಕೂ ಮೊದಲು ಅದೇ ಓವರ್‌ನಲ್ಲಿ ಥಾಮಸ್ ಅವರ ಮತ್ತೊಂದು ಸರಿಯಾದ ಎಸೆತವನ್ನೂ ನೋಬಾಲ್ ಎಂದು ತೀರ್ಪು ನೀಡಿದ್ದರು. ಆ ಓವರ್‌ನಲ್ಲಿ ಥಾಮಸ್ 22 ರನ್‌ಗಳನ್ನು ಬಿಟ್ಟುಕೊಟ್ಟರು.
ಆದರೆ, ಮರುಹೋರಾಟ ನಡೆಸಿದ ವೆಸ್ಟ್ ಇಂಡೀಸ್ ಗೆಲುವನ್ನು ತನ್ನದಾಗಿಸಿಕೊಂಡು ಮೂರು ಪಂದ್ಯಗಳ ಸರಣಿಯನ್ನು 2-1ರಿಂದ ಗೆದ್ದುಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 19.2 ಓವರ್‌ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 190 ರನ್ ಗಳಿಸಿತ್ತು. ವಿಂಡೀಸ್ ಪರ ಎವಿನ್ ಲೆವಿಸ್ 89 (36) ರನ್ ಚಚ್ಚಿದ್ದರು.
ಗುರಿ ಬೆನ್ನತ್ತಿದ ಬಾಂಗ್ಲಾದೇಶ ಒಂದು ಹಂತದಲ್ಲಿ ಕೇವಲ 4 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 65 ರನ್ ಗಳಿಸಿತ್ತು. ಆದರೆ, ಅಲ್ಲಿಂದ ನಿರಂತರವಾಗಿ ವಿಕೆಟ್ ಕಳೆದುಕೊಂಡು 96 ರನ್‌ಗಳಿಗೆ ಎಂಟು ವಿಕೆಟ್ ಕಳೆದುಕೊಂಡಿತ್ತು. ಕೀಮೋ ಪೌಲ್ ದಾಳಿಗೆ (5/15) ನಲುಗಿದ ಬಾಂಗ್ಲಾ 17 ಓವರ್‌ಗಳಲ್ಲಿ 140 ರನ್‌ಗಳಿಗೆ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ಸೋಲೊಪ್ಪಿಕೊಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications