For Quick Alerts
ALLOW NOTIFICATIONS  
For Daily Alerts
 

PAK vs BAN: ತವರಿನಲ್ಲಿ ಪಾಕ್‌ಗೆ ಭಾರೀ ಮುಖಭಂಗ: ಬಾಂಗ್ಲಾ ಐತಿಹಾಸಿಕ ಸಾಧನೆ

ರಾವಲ್ಪಿಂಡಿ: ಪಾಕಿಸ್ತಾನ ಪ್ರವಾಸದಲ್ಲಿ ಬಾಂಗ್ಲಾದೇಶ ಅಮೋಘ ಸಾಧನೆಯನ್ನು ಮಾಡಿದೆ. ಪಾಕ್‌ ವಿರುದ್ಧದ ಎರಡು ಟೆಸ್ಟ್‌ ಪಂದ್ಯಗಳ ಸರಣಿಯನ್ನು ವೈಟ್‌ ವಾಶ್‌ ಸಾಧನೆ ಮಾಡಿದೆ. ಈ ಮೂಲಕ ಪಾಕ್‌ಗೆ ತವರಿನಲ್ಲಿ ಭಾರೀ ಮುಖಭಂಗವಾಗಿದೆ. ಬಾಂಗ್ಲಾದೇಶ ಕ್ರಿಕೆಟ್‌ಗೆ ಇದು ಎಂದಿಗೂ ಮರೆಯಲಾಗದ ಕ್ಷಣವಾಗಿದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಪಾಕಿಗಿಂತಲೂ ಕಡಿಮೆ ಶ್ರೇಯಾಂಕಿತ ತಂಡ ಸಹ ಪಾಕ್‌ ತಂಡವನ್ನು ಮಣಿಸುವಂತೆ ಆಗಿದೆ.

ಮೊದಲ ಟೆಸ್ಟ್‌ ಪಂದ್ಯದಲ್ಲಿ ಗೆಲುವು ದಾಖಲಿಸಿದ್ದ ಬಾಂಗ್ಲಾ ಸಾಧನೆ ಮಾಡಿತ್ತು. ಎರಡನೇ ಟೆಸ್ಟ್‌ ಪಂದ್ಯವನ್ನು ಗೆದ್ದು ಸರಣಿಯನ್ನು ಸಮನಾಗಿಸುವ ಕನಸು ಪಾಕ್‌ ತಂಡದ್ದಾಗಿತ್ತು. ಆದರೆ ಬಾಂಗ್ಲಾ ಅಮೋಘ ಆಟದ ಪ್ರದರ್ಶನ ಪಾಕ್‌ ತಂಡವನ್ನು ಕಟ್ಟಿ ಹಾಕಿತು. ಪಂದ್ಯದ ಎಲ್ಲ ವಿಭಾಗಗಳಲ್ಲೂ ಬಾಂಗ್ಲಾ ಶ್ರೇಷ್ಠ ಪ್ರದರ್ಶನ ನೀಡಿತು.

Bangladesh Whitewashes Pakistan in Historic Test Series Embarrasses Hosts at Home

ಪಾಕ್‌ಗೆ ಬಾಂಗ್ಲಾ ಕಾಟ

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಪಾಕ್ ತಂಡಕ್ಕೆ ಅನುಭವಿಗಳು ಕೊಂಚ ಆಸರೆಯಾದರು. ಸಲ್ಮಾನ್ ಅಘಾ, ಸೈಮ್ ಅಯೂಬ್, ಶಾನ್ ಮಸೂದ್, ಅರ್ಧಶತಕ ಬಾರಿಸಿ ತಂಡಕ್ಕೆ ಆಧಾರವಾದರು. ಅಂತಿಮವಾಗಿ ಪಾಕ್ 274 ರನ್‌ಗಳಿಗೆ ಆಲೌಟ್ ಆಯಿತು. ಬಾಂಗ್ಲಾಪರ ಮೆಹದಿ ಹಸನ್‌ ಐದು ವಿಕೆಟ್‌ ಪಡೆದರು. ಮೊದಲ ಇನಿಂಗ್ಸ್‌ನಲ್ಲಿ ಬಾಂಗ್ಲಾ ತಂಡಕ್ಕೆ ವಿಕೆಟ್‌ ಕೀಪರ್ ಲಿಟನ್ ದಾಸ್‌ ಶತಕ ಬಾರಿಸಿ ನೆರವಾದರು. ಇವರನ್ನು ಬಿಟ್ಟರೆ, ಮೆಹದಿ ಹಸನ್‌ 78 ರನ್ ಕಾಣಿಕೆ ನೀಡಿದರು. ಮೊದಲ ಇನಿಂಗ್ಸ್‌ನಲ್ಲಿ ಬಾಂಗ್ಲಾ 262 ರನ್‌ಗಳಿಗೆ ಸರ್ವಪತನಹೊಂದಿತು. ಪಾಕ್‌ ಪರ ಖುರ್ರಂ ಶಹಜಾದ್ ಆರು ವಿಕೆಟ್‌ ಪಡೆದರು.

ಇನಿಂಗ್ಸ್‌ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಪಾಕ್‌ಗೆ ಮೊಹಮ್ಮದ್ ರಿಜ್ವಾನ್‌ 48 ರನ್‌ ಬಾರಿಸಿ ಆಸರೆಯಾದರು. ಉಳಿದ ಆಟಗಾರರು ರನ್‌ ಕಲೆ ಹಾಕುವಲ್ಲಿ ಎಡವಿದರು. ಬಾಂಗ್ಲಾ ಪರ ಹಸನ್ ಮಹಮೂದ್ 5, ನಶೀದ್ ರಾಣಾ 4 ವಿಕೆಟ್‌ ಉರುಳಿಸಿದರು. 185 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾ 4 ವಿಕೆಟ್‌ಗೆ ಅಗತ್ಯ ರನ್ ಕಲೆ ಹಾಕಿ ಜಯ ಸಾಧಿಸಿತು.

ತವರಿನಲ್ಲಿ ಭಾರೀ ಮುಖಭಂಗ

ದಕ್ಷಿಣ ಆಫ್ರಿಕಾ ವಿರುದ್ಧದ 2021ರಲ್ಲಿ ನಡೆದಿದ್ದ ಟೆಸ್ಟ್ ಸರಣಿಯನ್ನು ಪಾಕಿಸ್ತಾನ 2-0 ಅಂತರದಲ್ಲಿ ಗೆದ್ದುಕೊಂಡಿತ್ತು. ಇದೇ ಪಾಕ್‌ ತವರಿನಲ್ಲಿ ಗೆದ್ದ ಕೊನೆಯ ಟೆಸ್ಟ್‌ ಸರಣಿ ಆಗಿದೆ. ಇದಾದ ಬಳಿಕ ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡಗಳು ಪಾಕ್‌ ಪ್ರವಾಸದಲ್ಲಿ ಭರ್ಜರಿ ಜಯ ಸಾಧಿಸಿವೆ. ನ್ಯೂಜಿಲೆಂಡ್ ವಿರುದ್ಧ ಡ್ರಾ ಸಾಧಿಸಿದ್ದೇ ಪಾಕ್‌ ತಂಡ ದೊಡ್ಡ ಸಾಧನೆ ಆಗಿದೆ.

Bangladesh Whitewashes Pakistan in Historic Test Series Embarrasses Hosts at Home

ಆತ್ಮಾವಲೋಕನೆಯ ಸಮಯ

ಪಾಕಿಸ್ತಾನ ತಂಡದ ಈ ಸೋಲು ಪಾಕಿಸ್ತಾನ ಕ್ರಿಕೆಟ್‌, ಪಿಸಿಬಿಗೆ ಎಚ್ಚರಿಕೆಯ ಗಂಟೆಯಾಗಿದೆ. ಇದೇ ರೀತಿ ಪ್ರದರ್ಶನವನ್ನು ಪಾಕ್‌ ಮುಂದುವರೆಸಿದ್ದೇ ಆದಲ್ಲಿ, ಈಗಿನ ಹಾಕಿ ತಂಡದ ರೀತಿ ಪಾಕ್‌ ಕ್ರಿಕೆಟ್‌ ತಂಡದ ಸ್ಥಿತಿಯೂ ಆಗುತ್ತದೆ. ಈ ಸೋಲಿನ ಬಳಿಕ ತಂಡದೊಳಗೆ ಹಾಗೂ ಆಡಳಿತ ಮಂಡಳಿಯ ನಡುವೆ ವಾಕ್‌ಸಮರ ನಡೆಯಲಿದೆ. ಈಗಲಾದರೂ ಪಾಕ್‌ ಎಚ್ಚೆತ್ತುಕೊಳ್ಳುತ್ತದಾ ಕಾದು ನೋಡಬೇಕಿದೆ.

Story first published: Tuesday, September 3, 2024, 15:53 [IST]
Other articles published on Sep 3, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+