WI vs BAN: ವೆಸ್ಟ್ ಇಂಡೀಸ್‌ನಲ್ಲಿ ಚೊಚ್ಚಲ ಟಿ20 ಸರಣಿ ಗೆದ್ದ ಬಾಂಗ್ಲಾದೇಶ
ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್ ನಡುವೆ ಎರಡನೇ ಟಿ20 ಪಂದ್ಯ ಬುಧವಾರ ಸೇಂಟ್ ವಿನ್ಸೆಂಟ್‌ನ ಕಿಂಗ್‌ಸ್ಟೌನ್‌ನ ಅರ್ನೋಸ್ ವೆಲ್ ಮೈದಾನದಲ್ಲಿ ನಡೆಯಿತು. ಈ ರೋಚಕ ಪಂದ್ಯದಲ್ಲಿ ಬಾಂಗ್ಲಾದೇಶ ಆತಿಥೇಯರನ್ನು 27 ರನ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಬಾಂಗ್ಲಾದೇಶ 3 ಪಂದ್ಯಗಳ ಟಿ20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ. ತವರಿನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಬಾಂಗ್ಲಾದೇಶ ಮೊದಲ ಬಾರಿಗೆ ಮಣಿಸಿ ದಾಖಲೆ ಬರೆದಿದೆ.
ವೆಸ್ಟ್ ಇಂಡೀಸ್ ವಿರುದ್ಧ ಬಾಂಗ್ಲಾದೇಶ ತಂಡವು 2018ರ ನಂತರ ಟಿ20 ಸರಣಿ ಗೆದ್ದಿರಲಿಲ್ಲ. ಇದೀಗ ಬಾಂಗ್ಲಾದೇಶ ತಂಡ 6 ವರ್ಷಗಳ ಸುದೀರ್ಘ ಅಂತರದ ನಂತರ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಬಾರಿಗೆ ಟಿ20 ಸರಣಿ ಗೆದ್ದಿದೆ. ವೆಸ್ಟ್ ಇಂಡೀಸ್ ತವರಿನಲ್ಲಿ ಟಿ20 ಸರಣಿ ಸೋತು ಮುಖಭಂಗ ಅನುಭವಿಸಿದೆ.
ಈ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ವೆಸ್ಟ್ ಇಂಡೀಸ್ ನಾಯಕ ರೋವ್ಮನ್ ಪೊವೆಲ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅಂದುಕೊಂಡಂತೆ ವೆಸ್ಟ್ ಇಂಡೀಸ್ ಬೌಲರ್‌ಗಳು ಬಾಂಗ್ಲಾದೇಶವನ್ನು ಕಡಿಮೆ ರನ್‌ಗಳಿಗೆ ಕಟ್ಟಿ ಹಾಕಿದರು. ಬಾಂಗ್ಲಾದೇಶ ಪರ ಶಮೀಮ್ ಹೊಸೈನ್ 35 ರನ್ ಗಳಿಸುವ ಮೂಲಕ ಗರಿಷ್ಠ ಸ್ಕೋರರ್ ಆದರು. ಶಮೀಮ್ ಹೊಸೈನ್ ಇನ್ನಿಂಗ್ಸ್‌ನಿಂದ ಬಾಂಗ್ಲಾದೇಶ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 129 ರನ್‌ಗಳ ಸುಲಭ ಗುರಿಯನ್ನು ವೆಸ್ಟ್ ಇಂಡೀಸ್ ತಂಡಕ್ಕೆ ನೀಡಿತು.

ವೆಸ್ಟ್ ಇಂಡೀಸ್ ಪೆವಿಲಿಯನ್ ಪರೇಡ್
ಬಾಂಗ್ಲಾದೇಶ ನೀಡಿದ ಸುಲಭ ಗುರಿಯನ್ನು ವೆಸ್ಟ್ ಇಂಡೀಸ್ ತಲುಪಲಿದೆ ಎಂದು ಎಲ್ಲರೂ ಭಾವಿಸಿದರು. ಆದರೆ ಎಲ್ಲರ ಲೆಕ್ಕಚಾರವನ್ನು ಬಾಂಗ್ಲಾದೇಶ ಬೌಲರ್‌ಗಳು ಉಲ್ಟಾ ಮಾಡಿದರು. ವೆಸ್ಟ್ ಇಂಡೀಸ್ ಪವರ್‌ಪ್ಲೇ ನಂತರ 32 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ವೆಸ್ಟ್ ಇಂಡೀಸ್‌ನ ಎಲ್ಲಾ ಅಗ್ರ 4 ಬ್ಯಾಟರ್‌ಗಳು ರನ್ ಗಳಿಸದೆ ಪೆವಿಲಿಯನ್‌ಗೆ ಮರಳಿದರು. ವಿಂಡೀಸ್ ತಂಡದ ವಿಕೆಟ್‌ಗಳ ಪತನ ಇಲ್ಲಿಗೆ ನಿಲ್ಲಲಿಲ್ಲ.
ಮೊದಲ ಟಿ20ಯಲ್ಲಿ ಅರ್ಧಶತಕ ಗಳಿಸಿದ ನಾಯಕ ರೋವ್ಮನ್ ಪೊವೆಲ್ ನಾಯಕನ ಇನ್ನಿಂಗ್ಸ್ ಆಡುವಲ್ಲಿ ವಿಫಲರಾದರು. ಒಟ್ಟು 7 ಎಸೆತಗಳಲ್ಲಿ 6 ರನ್ ಸೇರಿಸಲಷ್ಟೇ ಶಕ್ತರಾದರು. ನಂತರ ಬಂದ ಯಾವುದೇ ಬ್ಯಾಟರ್‌ಗಳು ವಿಕೆಟ್ ಉಳಿಸಿಕೊಳ್ಳದ ಕಾರಣ ವೆಸ್ಟ್ ಇಂಡೀಸ್ ಟಿ20 ಸರಣಿ ಕಳೆದುಕೊಂಡಿತ್ತು. ಅಂತಿಮವಾಗಿ ಬಾಂಗ್ಲಾದೇಶ 27 ರನ್‌ಗಳಿಂದ ಅದ್ಭುತ ಜಯ ದಾಖಲಿಸಿತು.
ಬಾಂಗ್ಲಾ ಬೌಲರ್‌ಗಳ ದಾಳಿ
ಬಾಂಗ್ಲಾದೇಶ ಪರ ಸಂಘಟಿತ ಬೌಲಿಂಗ್ ಪ್ರದರ್ಶನ ಕಂಡು ಬಂತು. ವೇಗ ಬೌಲರ್ ತಸ್ಕಿನ್ ಅಹ್ಮದ್ 3 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಮಹೇದಿ ಹಸನ್, ತಂಜಿಮ್ ಹಸನ್ ಸಾಕಿಬ್ ಮತ್ತು ರಿಶಾದ್ ಹೊಸೈನ್ ತಲಾ 2 ಕಬಳಿಸಿದರು. ಹಸನ್ ಮಹಮೂದ್ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications