For Quick Alerts
ALLOW NOTIFICATIONS  
For Daily Alerts
 

ಅತ್ಯಾಚಾರ ಆರೋಪದಿಂದ ಮುಕ್ತನಾದ ಬಾಂಗ್ಲಾ ಕ್ರಿಕೆಟರ್

By Mahesh

ಢಾಕಾ, ಮೇ.21: ಐಸಿಸಿ ವಿಶ್ವಕಪ್ 2015ಕ್ಕೂ ಮುನ್ನ ಅತ್ಯಾಚಾರ ಆರೋಪ ಹೊತ್ತು ಜೈಲಿನ ದರ್ಶನ ಮಾಡಿ ಬಂದಿದ್ದ ಬಾಂಗ್ಲಾದೇಶ ಪ್ರತಿಭಾವಂತ ಕ್ರಿಕೆಟರ್ ರುಬೆಲ್ ಹುಸೇನ್ ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ. ನಟಿ ನಜ್ನೀನ್ ಅಖ್ತರ್ ಮಾಡಿದ್ದ ಆರೋಪದಲ್ಲಿ ಹುರುಳಿಲ್ಲ ಎಂದು ಸ್ಥಳೀಯ ನ್ಯಾಯಾಲಯ ಬುಧವಾರ ರುಬೆಲ್ ರನ್ನು ಆರೋಪ ಮುಕ್ತಗೊಳಿಸಿದೆ.

ಪೊಲೀಸರು ಹಾಕಿದ್ದ ಚಾರ್ಜ್ ಶೀಟ್ ನಲ್ಲಿ ಹೇಳಿದಂತೆ ರುಬೆಲ್ ಮೇಲಿರುವ ಆರೋಪ ಸಾಬೀತಾಗಲು ಯಾವುದೇ ಪುರಾವೆ ಸಿಕ್ಕಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ನಿಯಂತ್ರಣ ಮಂಡಳಿ ಅಭಿಪ್ರಾಯಪಟ್ಟಿದೆ.

ನಟಿ ನಜ್ನೀನ್ ಅಖ್ತರ್ ಹ್ಯಾಪಿ ಪರ ವಕೀಲ ಈ ತೀರ್ಪಿಗೆ ಪ್ರತಿಕ್ರಿಯಿಸಿ ಈ ಬಗ್ಗೆ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ. [ವಿಶ್ವಕಪ್ ಟೀಂ ಆಟಗಾರ ರೇಪ್ ಕೇಸಲ್ಲಿ ಅಂದರ್]

Bangladeshi cricketer Rubel Hossain acquitted of all charges

19 ವರ್ಷ ವಯಸ್ಸಿನ ನಾಜ್ನಿನ್ ಅಖ್ತರ್ ಎಂಬ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ದ್ರೋಹ ಬಗೆದು ಆಕೆಯನ್ನು ದೈಹಿಕವಾಗಿ ಬಳಸಿಕೊಂಡ ಆರೋಪ ರುಬೆಲ್ ಮೇಲಿತ್ತು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೈಲು ಸೇರಬೇಕಾಗಿತ್ತು.

ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಲ್ಲಿ ನಡೆಯುವ ಐಸಿಸಿ ವಿಶ್ವಕಪ್ 2015ರಲ್ಲಿ 24 ವರ್ಷದ ರುಬೆಲ್ ಪಾಲ್ಗೊಳ್ಳುವುದು ಅನುಮಾನ ಎನಿಸಿತ್ತು. ಅದರೆ, ರುಬೆಲ್ ಕ್ರಿಕೆಟ್ ಆಡಲು ನನ್ನ ವಿರೋಧ ಏನು ಇಲ್ಲ ಎಂದು ನಟಿ ಒಪ್ಪಿಗೆ ಸೂಚಿಸಿದ್ದರಿಂದ ರುಬೆಲ್ ವಿಶ್ವಕಪ್ ನಲ್ಲಿ ಆಡಿದ್ದರು. bdnews24.com ವರದಿ ಪ್ರಕಾರ ನಟಿ ಹ್ಯಾಪಿಯನ್ನು ರುಬೆಲ್ ಮದುವೆಯಾಗಬೇಕಂತೆ. ಆತ ಕ್ರಿಕೆಟರ್ ಎಂಬ ಕಾರಣಕ್ಕೆ ಕೇಸಿನಿಂದ ಖುಲಾಸೆಗೊಳಿಸಲಾಗಿದೆಯಂತೆ.

2013ರಲ್ಲಿ ತೆರೆ ಕಂಡ ಕಿಚು ಆಶಾ ಭಾಲೊಬಾಶಾ ಎಂಬ ಹೆಸರಿನ ಚಿತ್ರದ ಮೂಲಕ ಬಾಂಗ್ಲಾದೇಶದಲ್ಲಿ ಹ್ಯಾಪಿ ಅಲಿಯಾಸ್ ನಜ್ನಿನ್ ಅಖ್ತರ್ ಮನೆ ಮಾತಾದರು. ರುಬೆಲ್ 22 ಟೆಸ್ಟ್ ಪಂದ್ಯವಾಡಿದ್ದು 32 ವಿಕೆಟ್ ಕಬಳಿಸಿದ್ದಾರೆ. 53 ಏಕದಿನ ಪಂದ್ಯಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಹ್ಯಾಟ್ರಿಕ್ ಸೇರಿ 69 ವಿಕೆಟ್ ಗಳಿಸಿದ್ದಾರೆ. ಒಟ್ಟಾರೆ ಪ್ರಕರಣ ಇನ್ನೂ ಮುಂದುವರೆಯುವ ಲಕ್ಷಣಗಳು ಕಂಡು ಬಂದಿದೆ. (ಐಎಎನ್ಎಸ್)

Story first published: Wednesday, January 3, 2018, 10:03 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+