

ಬೆಂಗಳೂರು, ಏಪ್ರಿಲ್ 7: ಟೀಮ್ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಮತ್ತೆ ವಿರಾಟ್ ಕೊಹ್ಲಿಯ ನಾಯಕತ್ವವನ್ನು ಅಣಕಿಸಿದ್ದಾರೆ. ಕೊಹ್ಲಿ ಬ್ಯಾಟಿಂಗ್‌ನಲ್ಲಿ ಮಾಸ್ಟರ್, ಆದರೆ ನಾಯಕತ್ವದ ವಿಚಾರದಲ್ಲಿ ಅವರು ಕಲಿಯೋಕೆ ಇನ್ನೂ ಸಾಕಷ್ಟಿದೆ ಎಂದು ಅವರು ಹೇಳಿದ್ದಾರೆ.
ಮೈಖೇಲ್ ಕನ್ನಡ - ಐಪಿಎಲ್ 2019 'ವಿಶೇಷ ಮುಖಪುಟ' (ಫಲಿತಾಂಶಗಳು, ಪಾಯಿಂಟ್ ಟೇಬಲ್, ಕುತೂಹಲಕಾರಿ ಅಂಶಗಳು ಇಲ್ಲಿವೆ!)
'ವಿರಾಟ್ ಕೊಹ್ಲಿಯನ್ನು ಬ್ಯಾಟಿಂಗ್ ವಿಚಾರದಲ್ಲಿ ತೆಗೆದುಕೊಂಡರೆ ಆತ ನಿಜಕ್ಕೂ ಮಾಸ್ಟರ್. ಆದರೆ ನಾಯಕತ್ವದಲ್ಲಿ ಕೊಹ್ಲಿ ಇನ್ನೂ ಕಲಿಕಾ ಹಂತದಲ್ಲಿದ್ದಾರೆ. ನಾಯಕತ್ವ ವಿಚಾರದಲ್ಲಿ ಕೊಹ್ಲಿ ಕಲಿಯೋಕೆ ಇನ್ನೂ ಸಾಕಷ್ಟಿದೆ. ಪಂದ್ಯದ ಸೋಲಿಗೆ ಬೌಲರ್‌ಗಳನ್ನು ದೂರುವ ಬದಲು ಕೊಹ್ಲಿ ತನ್ನನ್ನೇ ದೂರಿಕೊಳ್ಳಬೇಕು' ಎಂದು ಗಂಭೀರ್ ಟೈಮ್ಸ್ ಆಫ್ ಇಂಡಿಯಾ ಕಾಲಂನಲ್ಲಿ ಬರೆದುಕೊಂಡಿದ್ದಾರೆ.
ಐಪಿಎಲ್ 2019: ಬೆಂಗಳೂರು vs ಡೆಲ್ಲಿ ಪಂದ್ಯ, Live ಸ್ಕೋರ್‌ಕಾರ್ಡ್ ಕೆಳಗಿದೆ
'ಕೊಹ್ಲಿ ನನಗೆ ಬಲಿಷ್ಟ ನಾಯಕನಾಗಿ ಕಾಣಿಸುತ್ತಿಲ್ಲ. ಆತ ಚತುರ ಕ್ಯಾಪ್ಟನ್‌ನಂತೆಯೂ ತೋರುತ್ತಿಲ್ಲ. ಇದಕ್ಕೆಲ್ಲ ಸಾಕ್ಷಿಯೆಂಬಂತೆ ಕೊಹ್ಲಿ ಪಡೆ ಒಂದುಸಾರಿಯೂ ಐಪಿಎಲ್ ಗೆದ್ದಿಲ್ಲ. ತನ್ನ ದಾಖಲೆಗಳಂತೆ ನಾಯಕನಾಗಿಯೂ ಕೊಹ್ಲಿ ಉತ್ತಮ ಸ್ಥಾನದಲ್ಲಿ ಇರಬೇಕಿದೆ' ಎಂದು ಗಂಭೀರ್ ಹೇಳಿದ್ದಾರೆ.
'ಆತ (ಕೊಹ್ಲಿ) ಕಳೆದ ಏಳು-ಎಂಟು ವರ್ಷಗಳಿಂದ ಆರ್‌ಸಿಬಿ ತಂಡದ ನಾಯಕತ್ವ ಮಾಡುತ್ತಿದ್ದಾರೆ. ಅವರು ಅವರ ಫ್ರಾಂಚೈಸಿಗೆ ನಿಜಕ್ಕೂ ಅಭಾರಿಯಾಗಿರಬೇಕು. ಯಾಕೆಂದರೆ ಯಾವುದೇ ಆಟಗಾರನಿಗೆ ಇಂಥ ಅವಕಾಶ ಸಿಗೋದಿಲ್ಲ' ಎಂದು ಕೊಹ್ಲಿ ನಾಯಕತ್ವವನ್ನು ಗೌತಮ್ ಟೀಕಿಸಿದ್ದಾರೆ.