ಆಸ್ಟ್ರೇಲಿಯಾದ ಲೆಜೆಂಡರಿ ಕ್ರಿಕೆಟಿಗ ಮತ್ತು ಮಾಜಿ ನಾಯಕ ಸ್ಟೀವ್ ಸ್ಮಿತ್ ವಿಶ್ವದ ಅತ್ಯುತ್ತಮ ಬ್ಯಾಟರ್. ಕ್ರಿಕೆಟ್ ಅಂಗಳದಲ್ಲಿ ಇವರ ಪ್ರದರ್ಶನ ಕಮಾಲ್.. ಆದರೆ ಟೆನಿಸ್ ರಾಕೇಟ್ ನಿಂದಲೂ ಅಷ್ಟೇ ಚೆನ್ನಾಗಿ ಆಡಬಲ್ಲರು ಎಂಬುದನ್ನು ಈಗ ತೋರಿಸಿಕೊಟ್ಟಿದ್ದಾರೆ.
ಸ್ಮಿತ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಇದರಲ್ಲಿ ಅವರು ಕ್ರಿಕೆಟ್ ಅಲ್ಲ ಟೆನಿಸ್ ಆಡುತ್ತಿದ್ದಾರೆ. ಅದು ಸಹ ಅವರಿವರ ಜೊತೆಗಲ್ಲ ವಿಶ್ವದ ಮಾಜಿ ನಂಬರ್ ಒನ್ ಆಟಗಾರು ಹಾಗೂ ದಾಖಲೆಯ ಗ್ರ್ಯಾನ್ ಸ್ಲ್ಯಾಮ್ ವಿಜೆತ ನೋವಾಕ್ ಜೋಕೊವಿಚ್ ಜೊತೆಗೆ. ಸ್ಮಿತ್ ಅವರ ಹೊಡೆತಕ್ಕೆ ಜೊಕೊವಿಕ್ ಕೂಡ ಪ್ರತಿಕ್ರಿಯಿಸಿದರು.

ವರ್ಷದ ಮೊದಲ ಗ್ರ್ಯಾಂಡ್ ಸ್ಲಾಮ್, ಆಸ್ಟ್ರೇಲಿಯನ್ ಓಪನ್-2024, ಜನವರಿ 14 ರಿಂದ ಮೆಲ್ಬೋರ್ನ್‌ನಲ್ಲಿ ಪ್ರಾರಂಭವಾಗಲಿದೆ. ಇದಕ್ಕೂ ಮುನ್ನ ಸರ್ಬಿಯಾದ ಸೂಪರ್ ಸ್ಟಾರ್ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಅವರು ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟಿಗ ಸ್ಟೀವ್ ಸ್ಮಿತ್ ಅವರೊಂದಿಗೆ ಟೆನಿಸ್ ಆಡಿದರು. ಜೊಕೊವಿಕ್ ಅವರ ಸರ್ವ್‌ನಲ್ಲಿ ಸ್ಮಿತ್ ಶಾಟ್ ಹೊಡೆದಾಗ, ಸರ್ಬಿಯಾದ ಸ್ಟಾರ್ ಕೂಡ ಆಶ್ಚರ್ಯಚಕಿತರಾದರು. ಶಾಟ್ ಆಡುವ ಬದಲು ರಾಕೆಟ್ ಬೀಳಿಸಿ ನಮಸ್ಕರಿಸಿ ಸೆಲ್ಯೂಟ್ ಹೊಡೆದರು.
ಆಸ್ಟ್ರೇಲಿಯನ್ ಓಪನ್ ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ ಮೆಲ್ಬೋರ್ನ್‌ನಲ್ಲಿ ನಡೆದ ಪಂದ್ಯಾವಳಿಗೂ ಮುನ್ನ ಅಭ್ಯಾಸ ನಡೆಸಿದರು. ಈ ವೇಳೆ ಕ್ರಿಕೆಟಿಗ ಸ್ಟೀವ್ ಸ್ಮಿತ್ ಅವರ ಎದುರಿಗಿದ್ದರು. ಬಿಳಿ ಟೀ ಶರ್ಟ್ ತೊಟ್ಟಿದ್ದ ಸ್ಮಿತ್ ಜೊಕೊವಿಕ್ ಅವರ ಸರ್ವ್ ನಲ್ಲಿ ಶಾಟ್ ಬಾರಿಸಿದರು.
ಈ ಹೊಡೆತವು ಟೆನಿಸ್ ದೃಷ್ಟಿಕೋನದಿಂದ ಉತ್ತಮವಾಗಿಲ್ಲದಿದ್ದರೂ ಅವರು ಅದನ್ನು ಯಶಸ್ವಿಯಾಗಿ ಆಡಿದರು. ಇದನ್ನು ನೋಡಿದ ಜೊಕೊವಿಕ್ ಶಾಟ್ ಹೊಡೆಯುವ ಬದಲು ರಾಕೆಟ್ ಬಿಟ್ಟರು. ಟೆನಿಸ್ ಅಂಗಳದಲ್ಲಿ ಕುಳಿತಿದ್ದ ಪ್ರೇಕ್ಷಕರು ಇದನ್ನೆಲ್ಲ ನೋಡಿ ಚಪ್ಪಾಳೆ ತಟ್ಟಿದರು. ಸ್ಮಿತ್ ಕೂಡ ಆಶ್ಚರ್ಯಚಕಿತರಾದರು ಮತ್ತು ನಗಲು ಪ್ರಾರಂಭಿಸಿದರು. ಸ್ಮಿತ್ ಸಹ ಜೋಕೊಗೆ ವಂದಿಸಿದರು. ಇದರ ವೀಡಿಯೊವನ್ನು ಆಸ್ಟ್ರೇಲಿಯನ್ ಓಪನ್‌ನ ಅಧಿಕೃತ ಸಾಮಾಜಿಕ ತಾಣದಲ್ಲಿ ಹಂಚಿಕೊಳ್ಳಲಾಗಿದೆ.
36 ವರ್ಷದ ನೊವಾಕ್ ಜೊಕೊವಿಕ್ ಇದುವರೆಗೆ 24 ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಸೆರ್ಬಿಯಾದ ಜೊಕೊವಿಕ್ ಅತಿ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಗೆದ್ದ ಟೆನಿಸ್ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು 10 ಬಾರಿ ಆಸ್ಟ್ರೇಲಿಯನ್ ಓಪನ್ ಗೆದ್ದು ದಾಖಲೆ ಬರೆದಿದ್ದಾರೆ. ಸ್ಮಿತ್ ಬಗ್ಗೆ ಮಾತನಾಡಿರುವ ಜೋಕೊ ಅವರು ಸ್ಮಿತ್ ಒಬ್ಬ ಉತ್ತಮ ಕ್ರಿಕೆಟ್ ಆಟಗಾರ. ಅವರ ಆಟ ತನಗೆ ಇಷ್ಟ ಎಂದಿದ್ದಾರೆ. ಸ್ಮಿತ್ ಟೆಸ್ಟ್‌ನಲ್ಲಿ 9514 ರನ್, ಏಕದಿನದಲ್ಲಿ 5356 ರನ್ ಮತ್ತು ಟಿ20 ಅಂತರಾಷ್ಟ್ರೀಯ 1079 ರನ್ ಗಳಿಸಿದ್ದಾರೆ.