ಐಪಿಎಲ್ : ಅತಿ ಹೆಚ್ಚು ಬಾರಿ ಶೂನ್ಯ ಸುತ್ತಿದ ಟಾಪ್ 10 ಬ್ಯಾಟ್ಸ್ ಮನ್ಸ್

ತಂಡದ ಪರ ಯಾವುದೇ ರನ್ ಗಳಿಸದೆ ಪೆವಿಲಿಯನ್ ನತ್ತ ಪಯಣ ಬೆಳೆಸುವುದು ತೀರಾ ಹತಾಶೆ ಮತ್ತು ಮುಜುಗರಕ್ಕೀಡಾಗುವಂತಹ ಸಂಗತಿ. ಡಕ್ ಔಟ್ ಆಗುವುದು ಬೇಸರದ ಸಂಗತಿಯಾದರೆ ಅದಕ್ಕಿಂತ ಕೆಟ್ಟ ಬೇಸರವನ್ನುಂಟುಮಾಡುವುದು ಗೋಲ್ಡನ್ ಡಕ್. ಮೊದಲನೆಯ ಎಸೆತದಲ್ಲೇ ಬ್ಯಾಟ್ಸ್ ಮನ್ ಔಟ್ ಆದರೆ ಅದನ್ನು ಗೋಲ್ಡನ್ ಡಕ್ ಎಂದು ಕರೆಯುತ್ತಾರೆ.
ಟೆಸ್ಟ್ , ಏಕದಿನ ಮಾತ್ರವಲ್ಲದೆ ಹೊಡಿ ಬಡಿ ಆಟ ಆಗಿರುವ ಐಪಿಎಲ್‌ನಲ್ಲಿಯೂ ಸಹ ಬ್ಯಾಟ್ಸ್ ಮನ್ ಗಳು ಡಕ್ ಔಟ್ ಆಗಿ ನಿರಾಸೆ ಮೂಡಿಸಿದ ಸಾಕಷ್ಟು ಉದಾಹರಣೆಗಳು ಇವೆ. ಹೇಳಿಕೇಳಿ ಐಪಿಎಲ್‌ನಲ್ಲಿ ರನ್ ಹೊಡೆದಷ್ಟು ಬ್ಯಾಟ್ಸ್ ಮನ್ ಗಳಿಗೆ ಬೆಲೆ ಮತ್ತು ಕ್ರೇಜ್ ಹೆಚ್ಚು.
ಅಂಥದರಲ್ಲಿ ಅಭಿಮಾನಿಗಳು ಒಳ್ಳೆಯ ಇನಿಂಗ್ಸ್ ಮತ್ತು ಹೆಚ್ಚಿನ ರನ್ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದ ಸಂದರ್ಭದಲ್ಲಿ ಡಕ್ ಔಟ್ ಆದರೆ ಅದು ನಿಜಕ್ಕೂ ಆಟಗಾರನಿಗೆ ಅತೀ ಹೆಚ್ಚಿನ ಮುಜುಗರದ ಸಂಗತಿಯೇ ಸರಿ.
ಐಪಿಎಲ್ ನಲ್ಲಿ ಅತಿ ಹೆಚ್ಚು ಬಾರಿ ಡಕ್ ಔಟ್ ಆಗಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದ ಟಾಪ್ 10 ಆಟಗಾರರ ಪಟ್ಟಿ ಈ ಕೆಳಕಂಡಂತಿದೆ.
1. ಹರ್ಭಜನ್ ಸಿಂಗ್ - 13 ಡಕ್ ಔಟ್ಸ್
2. ಪಾರ್ಥಿವ್ ಪಟೇಲ್ - 13
3. ರೋಹಿತ್ ಶರ್ಮಾ - 13
4. ಅಜಿಂಕ್ಯಾ ರಹಾನೆ - 13
5. ಪಿಯೂಷ್ ಚಾವ್ಲಾ - 12
6. ಮನ್ ದೀಪ್ ಸಿಂಗ್ - 12
7. ಅಂಬಾಟಿ ರಾಯುಡು - 12
8. ಮನೀಷ್ ಪಾಂಡೆ - 12
9. ಗೌತಮ್ ಗಂಭೀರ್ - 12
10. ದಿನೇಶ್ ಕಾರ್ತಿಕ್ - 11
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications