ಮಧ್ಯಮ ಕ್ರಮಾಂಕ ನನಗೆ ಹೊಸತಲ್ಲ, ಒತ್ತಡದ ಮಾತೇನಿಲ್ಲ: ರಾಯುಡು

ವಿಶಾಖಪಟ್ನಂ, ಅಕ್ಟೋಬರ್ 23: ವೆಸ್ಟ್ ಇಂಡೀಸ್ ಎದುರಿನ ಏಕದಿನ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಪಡೆದಿರುವ ಅಂಬಾಟಿ ರಾಯುಡು, ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿರುವುದು ಹೊಸತೇನಲ್ಲ. ಹಾಗಾಗಿ ಒತ್ತಡವೇನೂ ಇಲ್ಲ ಎಂದಿದ್ದಾರೆ.
ಗುವಾಹಟಿಯಲ್ಲಿ ನಡೆದಿದ್ದ ಪ್ರವಾಸಿ ವಿಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲೂ ರಾಯುಡು ಮಧ್ಯಮ ಕ್ರಮಾಂಕ 4ರಲ್ಲಿ ಸ್ಥಾನ ಪಡೆದಿದ್ದರು. ಈ ಪಂದ್ಯದಲ್ಲಿ ರಾಯುಡು ಅಜೇಯ 22 ರನ್ ತಂಡಕ್ಕೆ ಸೇರಿಸಿದ್ದರು. ಇದರಲ್ಲಿ ಭಾರತ ತಂಡ, ನಾಯಕ ಕೊಹ್ಲಿ ಮತ್ತು ರೋಹಿತ್ ಶರ್ಮಾ ಶತಕದ ನೆರವಿನಿಂದ 8 ವಿಕೆಟ್ ಸುಲಭ ಜಯ ಸಾಧಿಸಿತ್ತು.
ಗಾಯ ಮತ್ತು ಫಿಟ್ನೆಸ್ ಕೊರತೆಯಿಂದ ಕೊಂಚ ಕಾಲ ಟೀಮ್ ಇಂಡಿಯಾದಿಂದ ಹೊರಗಿದ್ದ ರಾಯುಡುಗೆ ವೆಸ್ಟ್ ಇಂಡೀಸ್ ವಿರುದ್ಧ ಏಕದಿನದ ಸರಣಿಯಲ್ಲಿ ಅವಕಾಶ ದೊರೆತಿದೆ. ಹೀಗಾಗಿ ಇನ್ನಾದರೂ ಉತ್ತಮ ಪ್ರದರ್ಶನ ನೀಡಿ ಅವಕಾಶವನ್ನು ಬಳಸಿಕೊಳ್ಳುವ ಯೋಜನೆಯಲ್ಲಿ ರಾಯುಡು ಇದ್ದಾರೆ.

ಖಂಡಿತಾ ಇಲ್ಲ
ಮಧ್ಯಮ ಕ್ರಮಾಂಕದಲ್ಲಿ ಅವಕಾಶ ಸಿಕ್ಕಿದೆ. ಜವಾಬ್ದಾರಿ ನಿರ್ವಹಿಸುವ ಬಗ್ಗೆ ಒತ್ತಡವೆನಿಸುವುದಿಲ್ಲವೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರಾಯುಡು, 'ಖಂಡಿತಾ ಇಲ್ಲ' ಎಂದರು. ದೀರ್ಘ ದಿನಗಳಿಂದಲೂ ಭಾರತ ತಂಡದಲ್ಲಿ ಮಧ್ಯಮ ಕ್ರಮಾಂಕಕ್ಕೆ ಸೂಕ್ತ ಆಟಗಾರರನ್ನು ಆರಿಸುವ ಬಗ್ಗೆ ತಂಡ ನಿರ್ವಹಣಾ ಸಮಿತಿಯಲ್ಲೂ ಗೊಂದಲವಿದ್ದುದ್ದು ಕಂಡು ಬಂದಿತ್ತು. ಸದ್ಯ ರಾಯುಡು ಅದೃಷ್ಟ ಪರೀಕ್ಷಿಸುವುದರಲ್ಲಿದ್ದಾರೆ.

28 ಹರೆಯದಲ್ಲಿ ಪಾದಾರ್ಪಣೆ
ಈಗ 33ರ ಹರೆಯದವರಾದ ಹೈದರಾಬಾದ್ ಆಟಗಾರ ಅಂಬಾಟಿ ರಾಯುಡು 2001-02ರಲ್ಲಿ ಪ್ರಥಮದರ್ಜೆ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರಾದರೂ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡ ಸೇರಲು 2013ರವರೆಗೂ ಕಾಯಬೇಕಾಗಿ ಬಂದಿತ್ತು. 2013ರಲ್ಲಿ ರಾಯುಡು ಜಿಂಬಾಬ್ವೆ ವಿರುದ್ಧ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. ಆಗ ಅವರಿಗೆ 28ರ ಹರೆಯ!

ಇಂಗ್ಲೆಂಡ್ ಸರಣಿಗೂ ಹೊರಗೆ
ಬಹುಕಾಲ ಗಾಯದ ಸಮಸ್ಯೆಯಿಂದ ಬಳಲಿದ ರಾಯುಡು ಯೋಯೋ ಫಿಟ್ನೆಸ್ ಟೆಸ್ಟ್ ನಲ್ಲಿ ಫೇಲಾಗಿದ್ದರು. ಹೀಗಾಗಿ ಅವರನ್ನು ಈ ವರ್ಷಾರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಹೊರಗಿಡಲಾಗಿತ್ತು. ಆದರೆ ಕೊನೆಗೂ ರಾಯುಡು ಫಿಟ್ನೆಸ್ ಟೆಸ್ಟ್ ನಲ್ಲಿ ಪಾಸಾಗಿ ಈಗ ತಂಡ ಸೇರಿಸಿಕೊಂಡಿದ್ದಾರೆ.

ಬೇರೇನೂ ಯೋಚನೆಯಿಲ್ಲ
ಮುಂಬರಲಿರುವ ವಿಶ್ವಗಾಗಿ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವತ್ತ ಯೋಚನೆಯಿಲ್ಲವೆ ಎಂಬ ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿದ ರಾಯುಡು, 'ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಅಂಥದ್ದೇನೂ ಯೋಚನೆ ಮಾಡಿಲ್ಲ. ಸದ್ಯಕ್ಕೆ ಸರಣಿಯಲ್ಲಿ ಉತ್ತಮ ಆಟ ಆಡುವತ್ತ ಮಾತ್ರ ಚಿತ್ತ ಹರಿಸಿದ್ದೇನೆ' ಎಂದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications