Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬ್ರಿಸ್ಬೇನ್ ಹೀಟ್‌ನ 12 ಆಟಗಾರರಿಗೆ ಕೊರೊನಾ ಪಾಸಿಟಿವ್: ಸಿಡ್ನಿ ಸಿಕ್ಸರ್ ವಿರುದ್ಧದ ಪಂದ್ಯ ರದ್ದು

Brisbane heat

ಆಸ್ಟ್ರೇಲಿಯಾದ ಐಪಿಎಲ್ ಮಾದರಿಯ ಖ್ಯಾತ ಟಿ20 ಟೂರ್ನಮೆಂಟ್ ಬಿಗ್‌ಬ್ಯಾಷ್ ಲೀಗ್ 2021ರ ಸೀಸನ್‌ಗೆ ಬಿಟ್ಟುಬಿಡದೆ ಕೋವಿಡ್-19 ಸಾಂಕ್ರಾಮಿಕ ಕಾಡುತ್ತಿದೆ. ಈಗಾಗಲೇ ಹಲವು ತಂಡಗಳ ಅನೇಕ ಆಟಗಾರರು ಸೋಂಕಿಗೆ ತುತ್ತಾಗಿದ್ದಾರೆ. ಈ ಸಾಲಿಗೆ ಈಗ ಬ್ರಿಸ್ಬೇನ್ ಹೀಟ್ ಕೂಡ ಸೇರಿದೆ.

ಹೌದು ಬ್ರಿಸ್ಬೇನ್ ಹೀಟ್‌ನ 12 ಆಟಗಾರರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಇಂದು ಸಿಡ್ನಿ ಸಿಕ್ಸರ್‌ ಹಾಗೂ ಬ್ರಿಸ್ಬೇನ್ ಹೀಟ್ ನಡುವೆ ಕ್ವೀನ್ಸ್‌ಲ್ಯಾಂಡ್‌ನಲ್ಲಿ ನಡೆಯಬೇಕಿದ್ದ ಪಂದ್ಯವನ್ನ ಮುಂದೂಡಲಾಗಿದೆ.

"ಈ ಸಂದರ್ಭದಲ್ಲಿ, ಬ್ರಿಸ್ಬೇನ್‌ ಹೀಟ್‌ನ ಸ್ಕ್ವಾಡ್‌ನಲ್ಲಿನ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಮತ್ತು ಸೂಕ್ತವಾದ ಆಟಗಾರರನ್ನು ಮೈದಾನಕ್ಕೆ ಇಳಿಸಲು ವಿಫಲಗೊಂಡರುವ ಪರಿಣಾಮ ಇಂದು ರಾತ್ರಿ ನಡೆಯಬೇಕಿದ್ದ ಪಂದ್ಯವನ್ನು ಮುಂದೂಡುವುದು ಏಕೈಕ ಆಯ್ಕೆಯಾಗಿದೆ'' ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಜನರಲ್ ಮ್ಯಾನೇಜರ್ ಅಲಿಸ್ಟೈರ್ ಡಾಬ್ಸನ್ ಹೇಳಿದ್ದಾರೆ.

ಬ್ರಿಸ್ಬೇನ್ ಹೀಟ್‌ನ 12 ಆಟಗಾರರು ಬುಧವಾರ ಪಿಸಿಆರ್ ಪರೀಕ್ಷೆಯನ್ನು ತೆಗೆದುಕೊಂಡಾಗ ಕೋವಿಡ್-19 ಪಾಸಿಟಿವ್ ದೃಢಪಟ್ಟಿತು.

ಇಂದು ನಡೆಯಬೇಕಿದ್ದ ಪಂದ್ಯ ಮುಂದೂಡಲ್ಪಟ್ಟಿದ್ದರೂ ಸಹ, ನಾಳೆ (ಜನವರಿ 6) ನಿಗದಿಪಡಿಸಲಾದ ಮೆಲ್ಬೋರ್ನ್ ರೆನೆಗೇಡ್ಸ್ ವಿರುದ್ಧದ ಬ್ರಿಸ್ಬೇನ್ ಹೀಟ್ ಪಂದ್ಯವು ಮುಂದುವರಿಯಲು ಸಿದ್ಧವಾಗಿದೆ. ಆ ಪಂದ್ಯದಲ್ಲಿ ಭಾಗವಹಿಸಲು ಆಟಗಾರರಿಗೆ ಪರೀಕ್ಷೆಗಳನ್ನ ನಡೆಸಿ ಆಡಿಸಲಾಗುವುದು ಎಂದು ಬಿಗ್ ಬ್ಯಾಷ್ ಆಡಳಿತ ಮಂಡಳಿ ತಿಳಸಿದೆ.

ಮೆಲ್ಬರ್ನ್ ಸ್ಟಾರ್ಸ್ ನಾಯಕ ಮ್ಯಾಕ್ಸ್‌ವೆಲ್‌ಗೂ ಕೊರೊನಾ ಪಾಸಿಟಿವ್
ಬ್ರಿಸ್ಬೇನ್ ಹೀಟ್‌ನ 12 ಆಟಗಾರರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟ ವಿಷಯ ಹೊರಬೀಳುವುದಕ್ಕೂ ಮೊದಲು, ಇಂದು ಮೆಲ್ಬರ್ನ್ ಸ್ಟಾರ್ಸ್ ನಾಯಕ ಗ್ಲೆನ್ ಮ್ಯಾಕ್ಸ್‌ವೆಲ್ ಆರ್‌ಟಿಪಿಸಿಆರ್ ಟೆಸ್ಟ್‌ನಲ್ಲಿ ಕೋವಿಡ್ -19 ಪಾಸಿಟಿವ್ ಆಗಿರುವುದು ದೃಢಪಟ್ಟಿದೆ ಎಂದು ಮೆಲ್ಬರ್ನ್ ಸ್ಟಾರ್ಸ್‌ ದೃಢಪಡಿಸಿದೆ.

ಮೆಲ್ಬರ್ನ್ ಸ್ಟಾರ್ಸ್‌ನ ನಾಯಕನಾದ ಗ್ಲೆನ್ ಮ್ಯಾಕ್ಸ್‌ವೆಲ್ ತಂಡದಿಂದ ಹೊರಗುಳಿಯುವಂತಾಗಿರುವುದು ತಂಡಕ್ಕೆ ಭಾರೀ ಹಿನ್ನಡೆಯಾಗಿದೆ. ಸೋಮವಾರ ರಾತ್ರಿ ಮೆಲ್ಬೋರ್ನ್ ರೆನೆಗೇಡ್ಸ್ ವಿರುದ್ಧ ಅವರ ತಂಡದ ಸೋಲಿನ ನಂತರ, ಸ್ಟಾರ್ಸ್ ನಾಯಕನು ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಗಾದರು ಮತ್ತು ಕೊರೊನಾ ಪಾಸಿಟಿವ್ ಆಗಿ ಹಿಂದಿರುಗಿದರು. ಅವರು ಈಗ ಐಸೋಲೇಶನ್‌ನಲ್ಲಿದ್ದು, ಪಿಸಿಆರ್ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.

ಕೊರೊನಾ ಪಾಸಿಟಿವ್ ಆಗಿರುವ ಗ್ಲೆನ್ ಮ್ಯಾಕ್ಸ್‌ವೆಲ್, ಈಗಾಗಲೇ ಡಗೌಟ್‌ನಲ್ಲಿ 12 ಇತರೆ ಆಟಗಾರರು ಮತ್ತು 8 ಸಿಬ್ಬಂದಿಗಳ ಜೊತೆಗೆ ನೇರವಾದ ಸಂಪರ್ಕದಲ್ಲಿದ್ದರು. ಜೊತೆಗೆ ವೈರಸ್‌ನಿಂದಾಗಿ ಈ ಹಿಂದೆಯೇ ತಂಡದ ಪ್ರಮುಖ ಸದಸ್ಯರ ಅನುಪಸ್ಥಿತಿಯ ಕಾರಣ ಬಹುತೇಕ ತಂಡಗಳು ತೊಂದರೆ ಅನುಭವಿಸಿವೆ.

Story first published: Wednesday, January 5, 2022, 16:58 [IST]
Other articles published on Jan 5, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+