ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ಕೆಟ್ಟ ಬೌಲಿಂಗ್: 4 ಓವರ್‌ಗೆ 70 ರನ್!

ಬಿಗ್ ಬ್ಯಾಷ್ ಲೀಗ್ 2021ರಲ್ಲಿ ಬ್ರಿಸ್ಬೇನ್ ಹೀಟ್ ವೇಗಿ ಇಂದು ಸಂಜೆ ನಡೆದ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಹೆಚ್ಚು ರನ್ ಬಿಟ್ಟು ಕೊಟ್ಟ ಬೌಲರ್ ಎಂಬ ಕುಖ್ಯಾತಿ ಕಾರಣವಾಗಿದ್ದಾರೆ.
ಮೆಲ್ಬೋರ್ನ್ ಸ್ಟಾರ್ಸ್ ವಿರುದ್ದದ ಈ ಪಂದ್ಯದಲ್ಲಿ ಲಿಯಾಮ್ ಗುತ್ರೀ 24 ಎಸೆತಗಳಲ್ಲಿ 70 ರನ್ ನೀಡುವ ಮೂಲಕ ಬಿಗ್ ಬ್ಯಾಷ್ ಲೀಗ್ ಇತಿಹಾಸದ ಅತ್ಯಂತ ದುಬಾರಿ ಬೌಲರ್ ಎನಿಸಿಕೊಂಡರು. ಲಿಯಾಮ್ ಅವರ 24 ಎಸೆತಗಳಲ್ಲಿ ಮೆಲ್ಬೋರ್ನ್ ತಂಡದ ಬ್ಯಾಟರ್ಗಳು 7 ಸಿಕ್ಸರ್ ಮತ್ತು 2 ಬೌಂಡರಿಗಳನ್ನು ಬಾರಿಸಿದರು.
ಈ ಬೌಲರ್ ಬೌಂಡರಿಯಿಂದ ಮಾತ್ರ 50 ರನ್ ನೀಡಿದ್ದರು. ಇದಾಗ್ಯೂ ಲಿಯಾಮ್ ಎರಡು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಈ ದುಬಾರಿ ಸ್ಪೆಲ್ ಪರಿಣಾಮ ಮೊದಲು ಬ್ಯಾಟ್ ಮಾಡಿದ ಮೆಲ್ಬೋರ್ನ್ ಸ್ಟಾರ್ಸ್ 20 ಓವರ್‌ಗಳಲ್ಲಿ 207 ರನ್ ಗಳಿಸಿತು.
ಇದಕ್ಕೂ ಮುನ್ನ ಬಿಬಿಎಲ್‌ನ ನ ಅತ್ಯಂತ ದುಬಾರಿ ಬೌಲರ್ ದಾಖಲೆ ಬೆನ್ ದ್ವಾಸುಯಿಸ್ ಹೆಸರಿನಲ್ಲಿತ್ತು. ಕಳೆದ ವರ್ಷ ಮೆಲ್ಬೋರ್ನ್ ಸ್ಟಾರ್ಸ್ ವಿರುದ್ಧದ ಪಂದ್ಯದಲ್ಲಿ ದ್ವಾಸುಯಿಸ್ 4 ಓವರ್‌ಗಳಲ್ಲಿ 61 ರನ್ ನೀಡಿದ್ದರು. ಹಾಗೆಯೇ ಡೇನಿಯಲ್ ವೊರೆಲ್ 2014ರಲ್ಲಿ ಹೋಬರ್ಟ್ ಹರಿಕೇನ್ ವಿರುದ್ಧ 4 ಓವರ್‌ಗಳಲ್ಲಿ 60 ರನ್ ನೀಡಿದ್ದರು. ಇದೀಗ ಈ ದಾಖಲೆಯನ್ನು ಮುರಿದು ಲಿಯಾಮ್ ಗುತ್ರೀ 70 ರನ್ ನೀಡಿ ಕಳಪೆ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬ್ರಿಸ್ಬೇನ್ ಹೀಟ್ ಮತ್ತು ಮೆಲ್ಬೋರ್ನ್ ಸ್ಟಾರ್ಸ್ ನಡುವಿನ ಲೀಗ್‌ನ 11 ನೇ ಸೀಸನ್‌ನ 23 ನೇ ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್ ಅನ್ನು 20 ರನ್‌ಗಳಿಂದ ಸೋಲಿಸುವ ಮೂಲಕ ಸೀಸನ್‌ನ ತಮ್ಮ ಮೂರನೇ ಪಂದ್ಯವನ್ನು ಮೆಲ್ಬೋರ್ನ್ ಸ್ಟಾರ್ಸ್ ಗೆದ್ದುಕೊಂಡಿತು.
ಸ್ಟಾರ್ಸ್ ವಿಕೆಟ್ ಕೀಪರ್ ಬ್ಯಾಟರ್ ಜೋ ಕ್ಲಾರ್ಕ್ (85) ಮತ್ತು ಹಿಲ್ಟನ್ ಕಾರ್ಟ್‌ರೈಟ್ (79) ನಡುವೆ ನಾಲ್ಕನೇ ವಿಕೆಟ್‌ಗೆ 151 ರನ್ ಜೊತೆಯಾಟ ಕಂಡುಬಂದಿತು. ಒಂದು ಸಮಯದಲ್ಲಿ ಮೂರನೇ ಓವರ್‌ನಲ್ಲಿ 16/3 ರಿಂದ ಕಂಬ್ಯಾಕ್ ಮಾಡಿದ ಬ್ರಿಸ್ಬೇನ್ ಹೀಟ್ 207/9 ರನ್ ತಲುಪಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications