Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಿಗ್ ಬ್ಯಾಷ್‌ ಲೀಗ್‌ನಲ್ಲಿ ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಲಕ್ನೋ ಸೂಪರ್ ಜೈಂಟ್ಸ್ ಆಲ್‌ರೌಂಡರ್

BBL 2023: Marcus Stoinis Stunning Knock In BBL, Scores 74 From 35 Deliveries

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್‌ ಬ್ಯಾಷ್‌ ಲೀಗ್‌ನ ಪಂದ್ಯದಲ್ಲಿ ಮಾರ್ಕಸ್ ಸ್ಟೋಯಿನಿಸ್ ಒಂದೇ ಓವರ್​ನಲ್ಲಿ 29 ರನ್ ಸಿಡಿಸಿ ಗಮನ ಸೆಳೆದಿದ್ದಾರೆ.

ಮೆಲ್ಬೋರ್ನ್ ಸ್ಟಾರ್ಸ್ ತಂಡದ ಪರವಾಗಿ ಆಡುವ ಸ್ಟೋಯಿನಿಸ್ ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಇನ್ನಿಂಗ್ಸ್ ಆಡಿದರು. ಕೇವಲ 35 ಎಸೆತಗಳಲ್ಲಿ 74 ರನ್ ಸಿಡಿಸಿ ತಂಡ ಉತ್ತಮ ಮೊತ್ತ ಕಲೆ ಹಾಕಲು ನೆರವಾದರು. ಈ ಪಂದ್ಯದಲ್ಲಿ ಮೆಲ್ಬೋರ್ನ್ ಸ್ಟಾರ್ಸ್‌ 8 ರನ್‌ಗಳ ರೋಚಕ ಜಯ ಸಾಧಿಸಿತು.

ಮಾರ್ಕಸ್ ಸ್ಟೋಯಿನಿಸ್‌ರನ್ನು 2023ರ ಮಿನಿ ಹರಾಜಿನಲ್ಲಿ 9.2 ಕೋಟಿ ರುಪಾಯಿ ನೀಡಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಖರೀದಿ ಮಾಡಿದೆ. ಸ್ಟೋಯಿನಿಸ್‌ರ ಈ ಇನ್ನಿಂಗ್ಸ್‌ ಎಲ್‌ಎಸ್‌ಜಿ ತಂಡದ ಅಭಿಮಾನಿಗಳಿಗೆ ಸಂತಸ ತಂದಿದೆ. ಕಳೆದ ಸೀಸನ್‌ನಲ್ಲಿ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಆಡಿದ್ದರು. ಉತ್ತಮ ಪ್ರದರ್ಶನ ನೀಡದ ಕಾರಣ ಡೆಲ್ಲಿ ಕ್ಯಾಪಿಟಲ್ಸ್ ಅವರನ್ನು ಮಿನಿ ಹರಾಜಿಗೆ ಮುನ್ನ ಬಿಡುಗಡೆ ಮಾಡಿತ್ತು.

ಮಾರ್ಕಸ್ ಸ್ಟೊಯಿನಿಸ್‌ ಕ್ರೀಸ್‌ಗೆ ತಡವಾಗಿ ಬಂದರೂ ಕೂಡ ಅಂಪೈರ್ ಗಳು ಅದನ್ನು ಗಮನಿಸದ ಕಾರಣ, ಔಟ್ ನೀಡಲಿಲ್ಲ. ಹೊಸ ನಿಯಮಗಳ ಪ್ರಕಾರ ಒಬ್ಬ ಬ್ಯಾಟರ್ ಔಟಾದ 75 ಸೆಕೆಂಡ್ ಒಳಗಾಗಿ ಇನ್ನೊಬ್ಬ ಬ್ಯಾಟರ್ ಕ್ರೀಸ್‌ನಲ್ಲಿ ಆಡಲು ಸಿದ್ಧವಾಗಿರಬೇಕು, ಆದರೆ ಸ್ಟೊಯಿನಿಸ್‌ ತಡವಾಗಿ ಕ್ರೀಸ್‌ಗೆ ಬಂದರು, ಅಂಪೈರ್ ಗಮನಿಸಿದ ಕಾರಣ ಔಟ್ ನೀಡಲಿಲ್ಲ.

BBL 2023: Marcus Stoinis Stunning Knock In BBL, Scores 74 From 35 Deliveries

5 ಎಸೆತಗಳಲ್ಲಿ 28 ರನ್ ಚಚ್ಚಿದ ಸ್ಟೋಯಿನಿಸ್

18ನೇ ಓವರ್​ನಲ್ಲಿ ಮಾರ್ಕಸ್ ಸ್ಟೊಯಿನಿಸ್ ಕೇವಲ 5 ಎಸೆತಗಳಲ್ಲಿ 28 ರನ್ ಸಿಡಿಸುವ ಮೂಲಕ ಮೆಲ್ಬೋರ್ನ್ ಸ್ಟಾರ್ಸ್ ತಂಡ 186 ರನ್ ಕಲೆಹಾಕಲು ಸಹಾಯ ಮಾಡಿದರು. ಸತತವಾಗಿ ಮೂರು ಸಿಕ್ಸರ್ ಸಿಡಿಸಿದ ಅವರು ನಾಲ್ಕನೇ ಎಸೆತದಲ್ಲಿ ಬೌಂಡರಿ ಗಳಿಸಿದರು, ಓವರ್ ಕೊನೆಯ ಎಸೆತದಲ್ಲಿ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ 5 ಎಸೆತಗಳಲ್ಲೇ 28 ರನ್ ಗಳಿಸಿದರು. ಜೊತೆಗೆ ಅರ್ಧಶತಕವನ್ನು ಕೂಡ ಪೂರೈಸಿದರು.

ಅಂತಿಮವಾಗಿ 35 ಎಸೆತಗಳಲ್ಲಿ 211.43 ಸ್ಟ್ರೈಕ್‌ರೇಟ್‌ನಲ್ಲಿ 74 ರನ್ ಕಲೆಹಾಕಿದರು. ಅವರ ಈ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ 6 ಭರ್ಜರಿ ಸಿಕ್ಸರ್ ಸೇರಿದ್ದವು. ಅಂತಿಮವಾಗಿ ಮೆಲ್ಬೋರ್ನ್ ಸ್ಟಾರ್ಸ್ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 186 ರನ್ ಕಲೆಹಾಕಿತು. ಈ ಮೊತ್ತವನ್ನು ಬೆನ್ನತ್ತಿದ ಅಡಿಲೇಡ್ ಸ್ಟ್ರೈಕರ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 178 ರನ್ ಗಳಿಸುವ ಮೂಲಕ 8 ರನ್‌ಗಳ ಸೋಲನುಭವಿಸಿತು. ಅತ್ಯುತ್ತಮ ಪ್ರದರ್ಶನ ನೀಡಿದ ಸ್ಟೋಯಿನಿಸ್ ಪಂದ್ಯದ ಆಟಗಾರ ಪ್ರಶಸ್ತಿ ಪಡೆದರು.

Story first published: Monday, January 2, 2023, 12:25 [IST]
Other articles published on Jan 2, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+