ಬಿಬಿಎಲ್: ಶತಕ ಸಿಡಿಸಿ ಅಬ್ಬರಿಸಿದ ಮ್ಯಾಕ್ಸ್‌ವೆಲ್; ಖುಷಿ ಹಂಚಿಕೊಂಡ ಆರ್‌ಸಿಬಿ

2021-22ನೇ ಸಾಲಿನ ಬಿಗ್ ಬ್ಯಾಶ್ ಲೀಗ್ ಟೂರ್ನಿಯ 13ನೇ ಪಂದ್ಯದಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡದ ಪರ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್‌ವೆಲ್ ಅಬ್ಬರದ ಶತಕ ಸಿಡಿಸಿ ಮಿಂಚಿದ್ದಾರೆ. ಹೌದು, ಈ ಬಾರಿಯ ಬಿಗ್ ಬ್ಯಾಶ್ ಲೀಗ್‌ನ 13ನೇ ಪಂದ್ಯ ಇಂದು ಮೆಲ್ಬೋರ್ನ್‌ನ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅಬ್ಬರದ ಶತಕ ಬಾರಿಸಿ ಮಿಂಚಿದರು. 2.2ನೇ ಓವರ್‌ನಲ್ಲಿ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್‌ವೆಲ್ 57 ಎಸೆತಗಳಲ್ಲಿ 103 ರನ್ ಬಾರಿಸಿ ಒತ್ತಡದ ನಡುವೆಯೇ ಮೆಲ್ಬೋರ್ನ್ ಸ್ಟಾರ್ಸ್ ತಂಡಕ್ಕೆ ಆಸರೆಯಾದರು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಡ್ನಿ ಸಿಕ್ಸರ್ಸ್ ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಮೂಲಕ ಮೆಲ್ಬೋರ್ನ್ ಸ್ಟಾರ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ನೀಡಿತು. ಹೀಗೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಮೆಲ್ಬೋರ್ನ್ ಸ್ಟಾರ್ಸ್ ತಂಡದ ಆರಂಭಿಕ ಆಟಗಾರರಾದ ಮಾರ್ಕಸ್ ಸ್ಟಾಯಿನಿಸ್ ಮತ್ತು ಜೋ ಕ್ಲಾರ್ಕ್ ಬೇಗನೇ ವಿಕೆಟ್ ಕಳೆದುಕೊಳ್ಳುವುದರ ಮೂಲಕ ಕಳಪೆ ಆರಂಭವನ್ನು ಮಾಡಿದರು. ಮಾರ್ಕಸ್ ಸ್ಟಾಯಿನಿಸ್ 3 ರನ್ ಗಳಿಸಿ ಔಟ್ ಆದರೆ, ಜೋ ಕ್ಲಾರ್ಕ್ ಶೂನ್ಯಕ್ಕೆ ಪೆವಿಲಿಯನ್ ಸೇರಿಕೊಂಡರು. ಹೀಗೆ 2.1 ಓವರ್‌ಗಳಲ್ಲಿ 6 ರನ್‌ಗೆ ತನ್ನ ಆರಂಭಿಕರ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಮೆಲ್ಬೋರ್ನ್ ಸ್ಟಾರ್ಸ್ ತಂಡಕ್ಕೆ ಆಪತ್ಬಾಂಧವನಾಗಿ ನಿಂತದ್ದು ಗ್ಲೆನ್ ಮ್ಯಾಕ್ಸ್‌ವೆಲ್.
ಗ್ಲೆನ್ ಮ್ಯಾಕ್ಸ್‌ವೆಲ್ 57 ಎಸೆತಗಳನ್ನು ಎದುರಿಸಿ 103 ರನ್ ಬಾರಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಈ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು 3 ಸಿಕ್ಸರ್ ಕೂಡ ಸೇರಿತ್ತು. ಹೀಗೆ ಸಿಡ್ನಿ ಸಿಕ್ಸರ್ಸ್ ತಂಡದ ಬೌಲರ್‌ಗಳ ಬೆವರಿಳಿಸಿದ ಮ್ಯಾಕ್ಸ್‌ವೆಲ್ ಆರಂಭದಲ್ಲಿಯೇ ವಿಕೆಟ್ ಕಳೆದುಕೊಂಡು ಕುಸಿದಿದ್ದ ಮೆಲ್ಬೋರ್ನ್ ಸ್ಟಾರ್ಸ್ ತಂಡ ಪೈಪೋಟಿಯುತ ರನ್ ಗಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಇನ್ನುಳಿದಂತೆ ತಂಡದ ಇತರ ಆಟಗಾರರಾದ ನಿಕ್ಕ್ ಲಾಕ್ರಿನ್ 23 ಮತ್ತು ಮತ್ತು ಹಿಲ್ಟನ್ ಕಾರ್ಟ್ ವ್ರೈಟ್ 23 ರನ್ ಗಳಿಸಿ ಔಟ್ ಆದರೆ, ಆ್ಯಂಡ್ರೆ ರಸೆಲ್ ಅಜೇಯ 12 ಮತ್ತು ಬ್ಯೂ ವೆಬ್ ಸ್ಟರ್ ಅಜೇಯ 4 ರನ್ ಕಲೆ ಹಾಕಿದರು. ಈ ಮೂಲಕ ಮೆಲ್ಬೋರ್ನ್ ಸ್ಟಾರ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿ ಎದುರಾಳಿ ಸಿಡ್ನಿ ಸಿಕ್ಸರ್ಸ್ ತಂಡಕ್ಕೆ ಗೆಲ್ಲಲು 178 ರನ್‌ಗಳ ಗುರಿಯನ್ನು ನೀಡಿತು.
ಇನ್ನು ಈ ಪಂದ್ಯದಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡದ ಪರ ಶತಕ ಸಿಡಿಸಿ ಅಬ್ಬರಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿಶೇಷವಾಗಿ ಫೋಟೋ ಹಂಚಿಕೊಳ್ಳುವುದರ ಮೂಲಕ ಬರೆದುಕೊಂಡಿದೆ. ಹೌದು, ಕಳೆದ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಉತ್ತಮ ಪ್ರದರ್ಶನ ನೀಡಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಈ ಬಾರಿಯ ರಿಟೆನ್ಷನ್ ಪ್ರಕ್ರಿಯೆಯಲ್ಲಿ ತಂಡದಲ್ಲಿಯೇ ರಿಟೇನ್ ಮಾಡಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಗ್ಲೆನ್ ಮ್ಯಾಕ್ಸ್‌ವೆಲ್ ಸಿಡ್ನಿ ಸಿಕ್ಸರ್ಸ್ ತಂಡದ ವಿರುದ್ಧ ಸಿಡಿಸಿದ ಶತಕದ ಕುರಿತು ಹೊಗಳಿ ಪೋಸ್ಟ್ ಮಾಡಿದೆ.
ಇನ್ನು ಗ್ಲೆನ್ ಮ್ಯಾಕ್ಸ್‌ವೆಲ್ ಸಿಡ್ನಿ ಸಿಕ್ಸರ್ಸ್ ತಂಡದ ವಿರುದ್ಧ ಬಾರಿಸಿದ ಈ ಶತಕ ವ್ಯರ್ಥವಾಗಿದ್ದು ಮೆಲ್ಬೋರ್ನ್ ಸ್ಟಾರ್ಸ್ ನೀಡಿದ 178 ರನ್‌ಗಳ ಗುರಿಯನ್ನು ಸಿಡ್ನಿ ಸಿಕ್ಸರ್ 19.4 ಓವರ್‌ಗಳಲ್ಲಿ 182 ರನ್ ಬಾರಿಸುವ ಮೂಲಕ ತಲುಪಿದೆ. ಮೆಲ್ಬೋರ್ನ್ ಸ್ಟಾರ್ಸ್ ಪರ ಗ್ಲೆನ್ ಮ್ಯಾಕ್ಸ್‌ವೆಲ್ ಅಬ್ಬರದ ಶತಕ ಸಿಡಿಸಿ ಆಪದ್ಬಾಂಧವನಾದರೆ ಸಿಡ್ನಿ ಸಿಕ್ಸರ್ಸ್ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಜೋಶ್ ಫಿಲಿಪ್ ಅಜೇಯ 99 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಅತಿ ದೊಡ್ಡ ಪಾತ್ರ ನಿರ್ವಹಿಸಿದರು. ಇನ್ನುಳಿದಂತೆ ಸಿಡ್ನಿ ಸಿಕ್ಸರ್ಸ್ ಪರ ಜೇಮ್ಸ್ ವಿನ್ಸ್ 9, ಮೊಯಿಸೆಸ್ ಹೆನ್ರಿಕ್ಸ್ 29, ಡೇನಿಯಲ್ ಹ್ಯೂಸ್ 11 ಮತ್ತು ಜೋರ್ಡಾನ್ ಸಿಲ್ಕ್ ಅಜೇಯ 25 ರನ್ ಬಾರಿಸಿದರು.
ಹಾಗೂ ಈ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ 2 ಓವರ್ ಬೌಲಿಂಗ್ ಕೂಡ ಮಾಡಿ 20 ರನ್ ನೀಡಿದರು, ಆದರೆ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications