2028ರ ಒಲಿಂಪಿಕ್ಸ್‌ನಲ್ಲಿ ಪುರುಷ, ಮಹಿಳಾ ತಂಡ ಕಣಕ್ಕಿಳಿಸಲು ಬಿಸಿಸಿಐ ಒಪ್ಪಿಗೆ

ನವದೆಹಲಿ: ಯುನೈಟೆಡ್ ಸ್ಟೇಟ್ಸ್‌ನ ಕ್ಯಾಲಿಫೋರ್ನಿಯಾದಲ್ಲಿ 2028ರಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡಗಳನ್ನು ಕಣಕ್ಕಿಳಿಸಲು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಒಪ್ಪಿಗೆ ನೀಡಿದೆ.
2028ರ ಲಾಸ್ ಎಂಜಲ್ಸ್ ಒಲಿಂಪಿಕ್ಸ್ ಅಲ್ಲದೆ, ಮುಂದಿನ ವರ್ಷ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್‌ನಲ್ಲೂ ಭಾರತದ ಪುರುಷರು ಮತ್ತು ಮಹಿಳಾ ತಂಡಗಳನ್ನು ಮೈದಾನಕ್ಕಿಳಿಸಲು ಕೂಡ ಬಿಸಿಸಿಐ ಒಪ್ಪಿಗೆ ನೀಡಿದೆ.
ಬಿಸಿಸಿಐಯ ಒಪ್ಪಿಗೆಯಿಂದ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಅನ್ನು ಮತ್ತೆ ತರಲು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಗೆ ಅನುಕೂಲವಾಗಿದೆ. ಹೀಗಾಗಿ ಐಸಿಸಿಗೆ ಈ ವಿಚಾರ ಖುಷಿ ನೀಡಿದೆ. 1990ರ ಒಲಿಂಪಿಕ್‌ನಲ್ಲಿ ಕ್ರಿಕೆಟ್ ಕೂಡ ಕ್ರೀಡಾ ಸ್ಪರ್ಧೆಗಳ ಭಾಗವಾಗಿತ್ತು.
'ಪುರುಷರ ಮತ್ತು ಮಹಿಳಾ ಕ್ರಿಕೆಟ್ ತಂಡಗಳನ್ನು ಲಾಸ್ ಏಂಜಲ್ಸ್ ಒಲಿಂಪಿಕ್ಸ್‌ಗೆ ಕಳುಹಿಸಲು ಭಾರತೀಯ ಕ್ರಿಕೆಟ್ ಬೋರ್ಡ್ ಒಪ್ಪಿದೆ. ಇದು ಪುರುಷ ಮತ್ತು ಮಹಿಳಾ ಸೀನಿಯರ್ ತಂಡಗಳಿಗೆ ಹೆಚ್ಚು ಹುರುಪು ನೀಡಿದೆ,' ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications