ವಿಶ್ವ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನ ಮಿನುಗುತ್ತಿರುವುದರ ಹಿಂದೆ ಬಿಸಿಸಿಐ, ಭಾರತದ 'ಗುಪ್ತ ಪಾತ್ರ'
ಇದೊಂದು ಕಾಲ್ಪನಿಕ ಕಥೆಯಲ್ಲ, ವಿಶ್ವ ಕ್ರಿಕೆಟ್‌ನಲ್ಲಿ ನಿಜವಾಗಲೂ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಏರಿಕೆಯು ವಾದಯೋಗ್ಯವಾಗಿ ಅಪ್ರತಿಮವಾಗಿದೆ. ಉದಯೋನ್ಮುಖ ಅಫ್ಘಾನಿಸ್ತಾನ ತಂಡವು ವಿಶ್ವದ ಬಲಾಢ್ಯ ತಂಡಗಳನ್ನೇ ಮಣ್ಣು ಮುಕ್ಕಿಸಿದೆ.
ಅಫ್ಘಾನಿಸ್ತಾನ ಕ್ರಿಕೆಟ್ ತಂಡ 2017ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ (ಐಸಿಸಿ) ಪೂರ್ಣ ಸದಸ್ಯತ್ವ ಪಡೆಯಿತು ಮತ್ತು 2024ರಲ್ಲಿ ಮೊದಲ ಬಾರಿಗೆ ವಿಶ್ವಕಪ್‌ನ (ಟಿ20) ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು.

ಪಂದ್ಯಾವಳಿಯ ಪ್ರಮುಖ ಘಟನೆಗಳಲ್ಲಿ ಸಾಮಾನ್ಯವಾಗಿ ಮಿನ್ನೋಸ್ ಅಥವಾ ಅಂಡರ್‌ಡಾಗ್ ಎಂದು ಕರೆಯಲ್ಪಡುವ ಅಫ್ಘಾನಿಸ್ತಾನ ತಂಡವು ಈ ಟಿ20 ವಿಶ್ವಕಪ್‌ನಲ್ಲಿ ವಿಶೇಷವಾಗಿ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಮತ್ತು ರೋಮಾಂಚನಕಾರಿ ಪ್ರದರ್ಶನ ನೀಡಿ ಸೆಮಿಫೈನಲ್‌ವರೆಗೆ ತಲುಪಿದೆ.
ಅಫ್ಘಾನಿಸ್ತಾನ ತಂಡ ತಮ್ಮ ಆಟವನ್ನು ಹೆಚ್ಚಿಸಿದ್ದಕ್ಕಾಗಿ ಮತ್ತು ಹೆಚ್ಚು ಪ್ರಾಮುಖ್ಯತೆ ನೀಡಿದ್ದಕ್ಕಾಗಿ ಆಟಗಾರರಿಗೆ ಹೆಚ್ಚಿನ ಕ್ರೆಡಿಟ್ ನೀಡಿದರೆ, ಭಾರತ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಹ ಅಫ್ಘಾನಿಸ್ತಾನ ತಂಡದ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರೆ ತಪ್ಪಾಗಲಾರದು.
ಭಾರತ ಮತ್ತು ಬಿಸಿಸಿಐ 'ಗುಪ್ತ ಪಾತ್ರ'ದ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನ ತಂಡದ ಹೊಸ ಎತ್ತರವನ್ನು ಏರಲು ಹೇಗೆ ಸಹಾಯ ಮಾಡಿದೆ ಎಂಬುದನ್ನು ತಿಳಿಯೋಣ.
ಭಾರತದಲ್ಲಿ ತವರಿನ ಮೈದಾನ
ಗ್ರೇಟರ್ ನೋಯ್ಡಾದಲ್ಲಿರುವ ಶಹೀದ್ ವಿಜಯ್ ಸಿಂಗ್ ಪಥಿಕ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ 2015ರಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ತಾತ್ಕಾಲಿಕ 'ಹೋಮ್ ಗ್ರೌಂಡ್' ಆಯಿತು. ಇದಕ್ಕೆ ಅವರು ಬಿಸಿಸಿಐಗೆ ಧನ್ಯವಾದ ಹೇಳುತ್ತಾರೆ.
ಅಫ್ಘಾನಿಸ್ತಾನ ತನ್ನ ನೆಲೆಯನ್ನು ಶಾರ್ಜಾದಿಂದ ನೋಯ್ಡಾಕ್ಕೆ ಬದಲಾಯಿಸಿತು ಮತ್ತು 2017ರಲ್ಲಿ ಗ್ರೇಟರ್ ನೋಯ್ಡಾದಲ್ಲಿ ಐರ್ಲೆಂಡ್ ವಿರುದ್ಧ ಅಂತಾರಾಷ್ಟ್ರೀಯ ಸರಣಿ ಆಡಿತು.
ಕೇವಲ ಗ್ರೇಟರ್ ನೋಯ್ಡಾ ಮಾತ್ರ ಅಫ್ಘಾನಿಸ್ತಾನ ತಂಡಕ್ಕೆ ತವರಿನ ಮೈದಾನವಲ್ಲ. ಡೆಹ್ರಾಡೂನ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಟಿ20 ಸರಣಿಗೆ ಆತಿಥ್ಯ ವಹಿಸಿದರು.
ಭಾರತೀಯ ಕೋಚ್‌ಗಳ ಮಾರ್ಗದರ್ಶನ
ಅಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೆ ಸೌಲಭ್ಯಗಳನ್ನು ಒದಗಿಸುವ ಮೂಲಕ ಉತ್ತಮ ತಯಾರಿಗೆ ಬಿಸಿಸಿಐ ವೇದಿಕೆ ಕಲ್ಪಿಸಿದೆ. ಆದರೆ, ಇದು ಅಲ್ಲಿಗೆ ನಿಲ್ಲಲಿಲ್ಲ.
ಭಾರತದ ಮಾಜಿ ಆಟಗಾರರಾದ ಲಾಲ್‌ಚಂದ್ ರಜಪೂತ್, ಮನೋಜ್ ಪ್ರಭಾಕರ್ ಮತ್ತು ಅಜಯ್ ಜಡೇಜಾ ಈ ಹಿಂದೆ ಅಫ್ಘಾನಿಸ್ತಾನ ತಂಡಕ್ಕೆ ತರಬೇತುದಾರರಾಗಿದ್ದರು. ವಾಸ್ತವವಾಗಿ, 2023ರ ಏಕದಿನ ವಿಶ್ವಕಪ್‌ನಲ್ಲಿ ಅಜಯ್ ಜಡೇಜಾ ಅಫ್ಘಾನಿಸ್ತಾನ ತಂಡದ ಮೆಂಟರ್ ಆಗಿದ್ದರು.
ವಿಶ್ವದ ಅತ್ಯಂತ ಶಕ್ತಿಶಾಲಿ ಕ್ರಿಕೆಟ್ ಮಂಡಳಿಯಾಗಿರುವ ಬಿಸಿಸಿಐ, ಬೆಂಗಳೂರಿನಲ್ಲಿ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಆಗಿನ ಆಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಅವರನ್ನು ಆಹ್ವಾನಿಸಿತ್ತು. ಎರಡು ರಾಷ್ಟ್ರಗಳು ಮತ್ತು ತಂಡಗಳ ನಡುವಿನ ಕ್ರಿಕೆಟ್ ಸಂಬಂಧವನ್ನು ಬಲಪಡಿಸಲು ಒಂದು ದೊಡ್ಡ ಹೆಜ್ಜೆ ಮುಂದಿಡಲಾಗಿತ್ತು.
ಐಪಿಎಲ್‌ನಲ್ಲಿ ಅದ್ಭುತ ಪಾತ್ರ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನ ತಂಡದ ಆಟಗಾರರ ಯಶಸ್ಸಿಗೆ ಅತಿದೊಡ್ಡ ಕೊಡುಗೆ ನೀಡಿದೆ ಎನ್ನಬಹುದು.
ಅನೇಕ ಅಫ್ಘಾನ್ ಆಟಗಾರರು ವಿಶ್ವ್ ಶ್ರೀಮಂತ ಟಿ20 ಲೀಗ್‌ನಲ್ಲಿ ಆಡುತ್ತಾರೆ. ತಮ್ಮ ಸ್ವಂತ ಆಟಕ್ಕೆ ಸಹಾಯ ಮಾಡಲು ಮಾತ್ರವಲ್ಲದೆ, ತಮ್ಮ ದೇಶದ ಇತರರಿಗೆ ಸ್ಫೂರ್ತಿ ನೀಡಲು ಉತ್ತಮ ಆದಾಯವನ್ನು ಗಳಿಸುತ್ತಾರೆ. ಕಳೆದ ಕೆಲವು ವರ್ಷಗಳಲ್ಲಿ, ಐಪಿಎಲ್‌ನಲ್ಲಿ ಅಫ್ಘಾನ್ ಆಟಗಾರರ ಭಾಗವಹಿಸುವಿಕೆ ತೀವ್ರವಾಗಿ ಹೆಚ್ಚಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications