Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ 'ಎ' ತಂಡ ಪ್ರಕಟ: ಪ್ರಿಯಾಂಕ್ ಪಾಂಚಾಲ್ ನಾಯಕತ್ವ

BCCI announced Team India A squad for South Africa Tour

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಟೀಮ್ ಇಂಡಿಯಾ 'ಎ' ತಂಡ ಪ್ರಕಟಗೊಂಡಿದ್ದು, ಪ್ರಿಯಾಂಕ್ ಪಂಚಲ್ ನೇತೃತ್ವದಲ್ಲಿ ತಂಡ ಮುನ್ನೆಡೆಯಲಿದೆ. 23 ನವೆಂಬರ್ 2021 ರಂದು ಬ್ಲೋಮ್‌ಫಾಂಟೈನ್‌ನಲ್ಲಿ ಪ್ರಾರಂಭಗೊಳ್ಳಲಿರುವ ಮೂರು ನಾಲ್ಕು ದಿನಗಳ ಪಂದ್ಯಗಳಿಗಾಗಿ ಭಾರತ 'ಎ' ತಂಡವು ಸಿದ್ಧವಾಗಿದೆ.

ತಂಡದಲ್ಲಿ ಐಪಿಎಲ್‌ನಲ್ಲಿ ಆಡುವ ಪ್ರಮುಖ ಆಟಗಾರರಾದ ದೆಹಲಿ ಕ್ಯಾಪಿಟಲ್ಸ್ (ಡಿಸಿ) ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಆರಂಭಿಕ ದೇವದತ್ ಪಡಿಕ್ಕಲ್, ಮುಂಬೈ ಇಂಡಿಯನ್ಸ್ (ಎಂಐ) ಸ್ಪಿನ್ನರ್ ರಾಹುಲ್ ಚಹಾರ್ , ಉದಯೋನ್ಮುಖ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ವೇಗಿ ಉಮ್ರಾನ್ ಮಲಿಕ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವೇಗಿ ನವದೀಪ್ ಸೈನಿ ತಂಡಕ್ಕೆ ಸ್ಥಾನ ಪಡೆದ ಪ್ರಮುಖ ಯುವ ಆಟಗಾರರಾಗಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ಎ ತಂಡವನ್ನು 31 ವರ್ಷದ ಪ್ರಿಯಾಂಕ್ ಪಾಂಚಾಲ್ ಮುನ್ನಡೆಸಲಿದ್ದು, ತಂಡದ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಉಪೇಂದ್ರ ಯಾದವ್ ವಹಿಸಿಕೊಳ್ಳಲಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ 'ಎ' ತಂಡ:

ಪ್ರಿಯಾಂಕ್ ಪಾಂಚಾಲ್ (ನಾಯಕ), ಪೃಥ್ವಿ ಶಾ, ಅಭಿಮನ್ಯು ಈಶ್ವರನ್, ದೇವದತ್ತ್ ಪಡಿಕ್ಕಲ್, ಸರ್ಫರಾಜ್ ಖಾನ್, ಬಾಬಾ ಅಪರಾಜಿತ್, ಉಪೇಂದ್ರ ಯಾದವ್ (ವಿಕೆಟ್-ಕೀಪರ್), ಕೆ ಗೌತಮ್, ರಾಹುಲ್ ಚಾಹರ್, ಸೌರಭ್ ಕುಮಾರ್, ನವದೀಪ್ ಸೈನಿ, ಉಮ್ರಾನ್ ಮಲಿಕ್, ಇಶಾನ್ ಪೊರೆಲ್, ಅರ್ಜಾನ್ ನಾಗ್ವಾಸ್ವಾಲ್ಲಾ

ಭಾರತ-ದಕ್ಷಿಣ ಆಫ್ರಿಕಾ ಎ ತಂಡಗಳ ವೇಳಾಪಟ್ಟಿ

1ನೇ ನಾಲ್ಕು-ದಿನದ ಪಂದ್ಯ: ಮಂಗಳವಾರ-ಶುಕ್ರವಾರ, 23ನೇ-26ನೇ ನವೆಂಬರ್ 2021, ಬ್ಲೋಮ್‌ಫಾಂಟೈನ್‌ನಲ್ಲಿ

2ನೇ ನಾಲ್ಕು ದಿನಗಳ ಪಂದ್ಯ: ಸೋಮವಾರ-ಗುರುವಾರ, 29ನೇ ನವೆಂಬರ್- 2ನೇ ಡಿಸೆಂಬರ್ 2021, ಬ್ಲೋಮ್‌ಫಾಂಟೈನ್‌ನಲ್ಲಿ

3ನೇ ನಾಲ್ಕು ದಿನಗಳ ಪಂದ್ಯ: ಸೋಮವಾರ-ಗುರುವಾರ, 6ನೇ-9ನೇ ಡಿಸೆಂಬರ್ 2021, ಬ್ಲೋಮ್‌ಫಾಂಟೈನ್‌ನಲ್ಲಿ

ಇದರ ಜೊತೆಗೆ, ಡಿಸೆಂಬರ್ 17 ರಿಂದ ಮುಖ್ಯ ಟೆಸ್ಟ್ ಪಂದ್ಯಗಳು ಪ್ರಾರಂಭವಾಗಲಿದ್ದು, ಈ ಪ್ರವಾಸದಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ 3 ಟೆಸ್ಟ್, 3 ಏಕದಿನ ಮತ್ತು 4 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ.

Team India ಹೊಸ ರೂಪ ಪಡೆದುಕೊಂಡಿದೆ | Oneindia Kannada

Story first published: Wednesday, November 10, 2021, 9:48 [IST]
Other articles published on Nov 10, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+