Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs SL: ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ; ಟಿ20 ನಾಯಕ ಯಾರು ಗೊತ್ತಾ?

ಜುಲೈ 18 ಗುರುವಾರ, ಮುಂಬರುವ ಶ್ರೀಲಂಕಾ ಪ್ರವಾಸಕ್ಕೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟೀಮ್‌ ಇಂಡಿಯಾವನ್ನು ಪ್ರಕಟಿಸಿದೆ. ಜೊತೆಗೆ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ನೂತನ ನಾಯಕನನ್ನು ಘೋಷಣೆ ಮಾಡಿದೆ.

ಈ ಪ್ರವಾಸದಲ್ಲಿ ಭಾರತ ತಂಡವು ಶ್ರೀಲಂಕಾ ವಿರುದ್ಧ 3 ಟಿ20 ಮತ್ತು 3 ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ. ಬಲಗೈ ಸ್ಪೋಟಕ ಬ್ಯಾಟರ್‌ ಸೂರ್ಯಕುಮಾರ್ ಯಾದವ್ ಭಾರತದ ನೂತನ ಟಿ20 ನಾಯಕರಾಗಿದ್ದಾರೆ.

BCCI announced Team India squad for Sri Lanka tour

ಟಿ20 ವಿಶ್ವಕಪ್ ಗೆಲುವಿನ ಬಳಿಕ ಚುಟುಕು ಕ್ರಿಕೆಟ್‌ಗೆ ರೋಹಿತ್ ಶರ್ಮಾ ವಿದಾಯ ಹೇಳಿದ್ದರು. ಇದೀಗ ರೋಹಿತ್‌ ಶರ್ಮಾ ಅವರಿಂದ ತೆರವಾಗಿದ್ದ ನಾಯಕನ ಜವಬ್ದಾರಿಯನ್ನು ಸೂರ್ಯಕುಮಾರ್‌ಗೆ ಬಿಸಿಸಿಐ ನೀಡಿದೆ. ಇನ್ನೊಂದೆಡೆ ಟಿ 20 ಮತ್ತು ಏಕದಿನ ಸರಣಿಗಳಿಗೆ ಟೀಮ್ ಇಂಡಿಯಾದ ಉಪನಾಯಕನ ಪಾತ್ರದಲ್ಲಿ ಯುವ ಸ್ಟಾರ್‌ ಬ್ಯಾಟರ್‌ ಶುಭಮನ್ ಗಿಲ್ ಕಾಣಿಸಿಕೊಳ್ಳಲಿದ್ದಾರೆ.

ಶ್ರೀಲಂಕಾ ಪ್ರವಾಸಕ್ಕೆ ಟಿ20 ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಖಲೀಲ್ ಅಹ್ಮದ್, ಮೊಹಮ್ಮದ್ ಸಿರಾಜ್.

ಶ್ರೀಲಂಕಾ ಪ್ರವಾಸಕ್ಕೆ ಏಕದಿನ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.

ಶ್ರೀಲಂಕಾ ಪ್ರವಾಸದ ಟೀಮ್‌ ಇಂಡಿಯಾ ವೇಳಾಪಟ್ಟಿ

ಈ ಸರಣಿಯಲ್ಲಿ ಟೀಮ್ ಇಂಡಿಯಾ 3 ಟಿ20 ಮತ್ತು ಅಷ್ಟೇ ಸಂಖ್ಯೆ ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ. ಸರಣಿಯ ಎಲ್ಲಾ ಟಿ20 ಪಂದ್ಯಗಳು ಪಲ್ಲೆಕೆಲೆಯಲ್ಲಿ ನಡೆಯಲಿದ್ದು, ಟಿ20 ಸರಣಿಯು ಜುಲೈ 27 ರಿಂದ ಆರಂಭವಾಗಿ ಜುಲೈ 30 ರಂದು ಕೊನೆಗೊಳ್ಳಲಿದೆ. ಇದಾದ ಬಳಿಕ ಆಗಸ್ಟ್ 2 ರಿಂದ ಶುರುವಾಗುವ ಏಕದಿನ ಪಂದ್ಯಗಳಿಗೆ ಕೊಲಂಬೊ ಆತಿಥ್ಯ ವಹಿಸಲಿದೆ.

ಭಾರತ vs ಶ್ರೀಲಂಕಾ ಟಿ20 ಸರಣಿ

  • ಮೊದಲನೇ ಟಿ20- ಜುಲೈ 26- ಪಲ್ಲಕಲೆ
  • ಎರಡನೇ ಟಿ20- ಜುಲೈ 27- ಪಲ್ಲಕಲೆ
  • ಮೂರನೇ ಟಿ20- ಜುಲೈ 29- ಪಲ್ಲಕಲೆ

ಭಾರತ vs ಶ್ರೀಲಂಕಾ ಏಕದಿನ ಸರಣಿ

  • ಮೊದಲನೇ ಏಕದಿನ ಪಂದ್ಯ- ಆಗಸ್ಟ್‌ 1- ಕೊಲಂಬೊ
  • ಎರಡನೇ ಏಕದಿನ ಪಂದ್ಯ- ಆಗಸ್ಟ್ 4- ಕೊಲಂಬೊ
  • ಮೂರನೇ ಏಕದಿನ ಪಂದ್ಯ- ಆಗಸ್ಟ್‌ 7- ಕೊಲಂಬೊ

Story first published: Thursday, July 18, 2024, 21:18 [IST]
Other articles published on Jul 18, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+