For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾದ ತವರಿನ ವೇಳಾಪಟ್ಟಿ ಪ್ರಕಟ: ಭಾರತ ಪ್ರವಾಸ ಬೆಳೆಸಲಿರುವ ವಿಂಡೀಸ್‌, ದಕ್ಷಿಣ ಆಫ್ರಿಕಾ

ಸದ್ಯ ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯುತ್ತಿದೆ. ಈ ಲೀಗ್‌ ಮುಗಿದ ಬಳಿಕ ಟೀಮ್ ಇಂಡಿಯಾ ಇಂಗ್ಲೆಂಡ್‌ ಪ್ರವಾಸವನ್ನು ಬೆಳೆಸಲಿದೆ. ಈ ಪ್ರವಾಸದ ಬಳಿಕ ಭಾರತ ತವರಿನಲ್ಲಿ ಸರಣಿಯನ್ನು ಆಡಲಿದೆ. ಈ ಬಗ್ಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಏಪ್ರಿಲ್‌ 2 (ಬುಧವಾರ) ರಂದು ನಡೆದ ಸಭೆಯಲ್ಲಿ ತವರಿನ ವೇಳಾಪಟ್ಟಿಯನ್ನು ಘೋಷಣೆ ಮಾಡಿದೆ. ಭಾರತ ಈ ವರ್ಷದ ಆರಂಭದಲ್ಲಿ ತವರಿನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಕಾದಾಟ ನಡೆಸಲಿದೆ.

ಭಾರತ ತವರಿನಲ್ಲಿ ಬ್ಯಾಕ್‌ ಟು ಬ್ಯಾಕ್‌ ಟೆಸ್ಟ್‌ ಹಾಗೂ ಸೀಮಿತ ಓವರ್‌ಗಳ ಸರಣಿಯನ್ನು ಆಡಲಿದೆ. ಈ ವೇಳೆ ಅಕ್ಟೋಬರ್‌ 2 ರಂದು ವೆಸ್ಟ್‌ ಇಂಡೀಸ್‌ ವಿರುದ್ಧದ 2 ಪಂದ್ಯಗಳ ಟೆಸ್ಟ್‌ ಸರಣಿ ಆರಂಭವಾಗಲಿದೆ. ಈ ಸರಣಿಯ ಬಳಿಕ ಟೀಮ್ ಇಂಡಿಯಾ ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ ಹಾಗೂ ಸೀಮಿತ ಓವರ್‌ಗಳ ಪಂದ್ಯವನ್ನು ಆಡಲಿದೆ. ಈ ಎಲ್ಲ ಸರಣಿಗೆ ವೇಳಾ ಪಟ್ಟಿಯನ್ನು ಘೋಷಣೆ ಮಾಡಲಾಗಿದೆ.

BCCI Announces Team India s Home Schedule West Indies and South Africa Series Confirmed

ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲ ಟೆಸ್ಟ್‌ ಅಕ್ಟೋಬರ್‌ 2 ರಿಂದ 6ರ ವರೆಗೆ ಅಹಮದಾಬಾದ್‌ಲ್ಲಿ ನಡೆಯಲಿದೆ. ಈ ಸರಣಿಯ ಎರಡನೇ ಪಂದ್ಯ ಅಕ್ಟೋಬರ್‌ 10 ರಿಂದ ಆರಂಭವಾಗಲಿದ್ದು, ಈ ಮೈದಾನಕ್ಕೆ ಕೋಲ್ಕತ್ತಾದ ಈಡನ್ ಗಾರ್ಡನ್‌ ಆತಿಥ್ಯ ವಹಿಸಲಿದೆ.

ಭಾರತ ಪ್ರವಾಸ ಬೆಳೆಸಲಿರುವ ಆಫ್ರಿಕಾ

ವಿಂಡೀಸ್ ಪ್ರವಾಸದ ಬಳಿಕ ಭಾರತಕ್ಕೆ ದಕ್ಷಿಣ ಆಫ್ರಿಕಾ ಪ್ರವಾಸ ಬೆಳೆಸಲಿದೆ. ಈ ವೇಳೆ 2 ಟೆಸ್ಟ್‌ ಸರಣಿಯನ್ನು ಆಡಲಿದೆ. ಈ ಸರಣಿಯ ಮೊದಲ ಪಂದ್ಯ ನವೆಂಬರ್‌ 14 ರಿಂದ ನವದೆಹಲಿಯಲ್ಲಿ ಆರಂಭವಾಗಲಿದೆ. ಈ ಸರಣಿಯ ಎರಡನೇ ಪಂದ್ಯ ಗುವಾಹಟಿಯ ಬರ್ಸಪಾರ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನವೆಂಬರ್‌ 22 ರಿಂದ ಆರಂಭವಾಗಲಿದೆ. ಇದೇ ಮೊದಲ ಬಾರಿಗೆ ಗುವಾಹಟಿ ಟೆಸ್ಟ್‌ ಪಂದ್ಯಕ್ಕೆ ಆತಿಥ್ಯವನ್ನು ವಹಿಸಲಿದೆ. ಇನ್ನು ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಎರಡೂ ತಂಡಗಳ ನಡುವೆ ಐದು ಟಿ20 ಪಂದ್ಯಗಳು ನಡೆಯಲಿವೆ.

ಭಾರತ ದಕ್ಷಿಣ ಆಫ್ರಿಕಾ ನಡುವಣ ಸರಣಿಯ ವೇಳಾಪಟ್ಟಿ

ಮೊದಲ ಟೆಸ್ಟ್‌: ನ.14 ರಿಂದ ನ.18, ನವದೆಹಲಿ
ಎರಡನೇ ಟೆಸ್ಟ್‌: ನ.22 ರಿಂದ ನ.26, ಗುವಾಹಟಿ

ಏಕದಿನ ಸರಣಿ
ಮೊದಲ ಪಂದ್ಯ, ನ.30, ರಾಂಚಿ
ಎರಡನೇ ಪಂದ್ಯ, ಡಿ.3, ರಾಯಪೂರ್
ಮೂರನೇ ಪಂದ್ಯ, ಡಿ.6, ವಿಶಾಖಪಟ್ಟಣಂ

ಟಿ20 ಸರಣಿ

ಮೊದಲ ಟಿ20 ಪಂದ್ಯ, ಡಿ.9, ಕಟಕ್
ಎರಡನೇ ಟಿ20 ಪಂದ್ಯ, ಡಿ.11, ಚಂಡಿಗಡ್‌
ಮೂರನೇ ಟಿ20 ಪಂದ್ಯ, ಡಿ.14, ಧರ್ಮಶಾಲಾ
ನಾಲ್ಕನೇ ಟಿ20 ಪಂದ್ಯ, ಡಿ.17, ಲಕ್ನೋ
ಐದನೇ ಟಿ20 ಪಂದ್ಯ, ಡಿ.19, ಅಹಮದಾಬಾದ್

Story first published: Wednesday, April 2, 2025, 22:05 [IST]
Other articles published on Apr 2, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+