ಆಘಾತಕಾರಿ! ಆಟೋಗ್ರಾಫ್ ಬ್ಯಾನ್ ಮಾಡಿದ ಬಿಸಿಸಿಐ
ಮುಂಬೈ, ಮಾ.9: ವಿಶ್ವಕಪ್ ಟೂರ್ನಿಯ ಎನಿಸಿರುವ ಗೆಲ್ಲುವ ಕುದುರೆ ಟೀಂ ಇಂಡಿಯಾದ ಜಾಕಿಗಳನ್ನು ಕಂಡು ಒಮ್ಮೆ ಮಾತನಾಡಿಸುವ ಬಯಕೆ ಹೊಂದಿದ್ದ ಅಭಿಮಾನಿಗಳಿಗೆ ಈಗಾಗಲೇ ನಿರಾಶೆಯಾಗಿದೆ. ಇದರ ಬೆನ್ನಲ್ಲೇ ಆಟಗಾರರಿಗೂ ಆಘಾತವಾಗುವಂಥ ಆದೇಶವನ್ನು ಬಿಸಿಸಿಐ ನೀಡಿದೆ. ಆಟಗಾರರು ಆಟೋಗ್ರಾಫ್ ನೀಡುವುದಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಕರ್ನಾಟಕ ಹಾಗೂ ತಮಿಳುನಾಡು ನಡುವಿನ ರಣಜಿ ಟ್ರೋಫಿ ಫೈನಲ್ ಪಂದ್ಯವನ್ನು ವೀಕ್ಷಿಸುತ್ತಾ ಚಹಾ ಹೀರುವಾಗ ಇಂಥದ್ದೊಂದು ನಿರ್ಣಯದ ಬಗ್ಗೆ ಬಿಸಿಸಿಐನ ಹಿರಿ ತಲೆಗಳಿಗೆ ಹೊಳೆದಿದೆ. ತಕ್ಷಣವೇ ಈ ಬಗ್ಗೆ ಹ್ಯಾಮಿಲ್ಟನ್ ನಲ್ಲಿರುವ ಟೀಂ ಇಂಡಿಯಾಕ್ಕೆ ತಿಳಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಸೋಮವಾರ ವರದಿ ಮಾಡಿದೆ. [ಸಮರಕ್ಕೂ ಮುನ್ನ ಇಂಡಿಯಾ ಫ್ಯಾನ್ಸ್ ಗರಂ]
ಕ್ರಿಕೆಟರ್ಸ್ ಹಾಗೂ ಅಭಿಮಾನಿಗಳ ನಡುವೆ ಬಿಸಿಸಿಐ ಗೋಡೆಯಾಗಿ ನಿಂತಿದೆ. ಈಗಾಗಲೇ ರಣಜಿ ಟ್ರೋಫಿಯಲ್ಲೂ ಕಠಿಣ ನಿಯಮಗಳನ್ನು ಬಿಸಿಸಿಐ ಹೇರಿದೆ.ಐಪಿಎಲ್ ಪಂದ್ಯಗಳಲ್ಲಿ ಆದ ಅನಾಹುತವನ್ನು ಸರಿಪಡಿಸಲು ಎಲ್ಲಾ ಮಾದರಿ ಕ್ರಿಕೆಟ್ ಪಂದ್ಯಕ್ಕೂ ಬಿಸಿಸಿಐ ಒಂದೇ ರೀತಿ ನಿಯಮ ಅನುಸರಿಸುತ್ತಿದೆ.

ಬಿಸಿಸಿಐ ಕಠಿಣ ಕ್ರಮ ಸಮರ್ಥನೆ
ವಿಶ್ವಕಪ್ ಟೂರ್ನಿಯಲ್ಲಿ ಪಂದ್ಯ ನಡೆಯುವಾಗ ಮಧ್ಯೆ ಫ್ಯಾನ್ಸ್ ಗಳಿಗೆ ಆಟೋಗ್ರಾಫ್ ನೀಡುವ ಆಟಗಾರರಿಗೆ ನಿರ್ಬಂಧ ವಿಧಿಸಲಾಗಿದೆ. ಎಲ್ಲಾ ಪಂದ್ಯಕ್ಕೂ ಈ ನಿಯಮ ಜಾರಿಗೊಳ್ಳಲಿದೆ. ಈ ನಿಯಮದಿಂದ ಬುಕ್ಕಿಗಳು ಕ್ರಿಕೆಟರ್ಸ್ ಸಂಪರ್ಕಿಸುವುದನ್ನು ತಡೆಗಟ್ಟಬಹುದು ಎಂದು ಬಿಸಿಸಿಐನ ಭ್ರಷ್ಟಾಚಾರ ನಿಯಂತ್ರಣ ಹಿರಿಯ ತನಿಖಾಧಿಕಾರಿ ಕೆಎಸ್ ಮಾಧವನ್ ಹೇಳಿದ್ದಾರೆ.

ಯಾವ ಯಾವ ಪಂದ್ಯಕ್ಕೆ ಇದು ಜಾರಿ
ಈ ಹೊಸ ನಿಯಮ ಬಿಸಿಸಿಐ ಆಯೋಜನೆಯ ಎಲ್ಲಾ ಪಂದ್ಯಕ್ಕೂ ಜಾರಿಯಾಗಲಿದೆ. ಚಾಂಪಿಯನ್ಸ್ ಲೀಗ್ ಟಿ 20, ಐಪಿಎಲ್ ಟೂರ್ನಿ, ರಣಜಿ ಪಂದ್ಯಕ್ಕೂ ಇದು ಅನ್ವಯವಾಗಲಿದೆ.

ಆಟೋಗ್ರಾಫ್ ನಲ್ಲಿ ಅಂಥದ್ದೇನಿರುತ್ತೆ? ಎಂಬ ಪ್ರಶ್ನೆ
ಆಟೋಗ್ರಾಫ್ ನಲ್ಲಿ ಅಂಥದ್ದೇನಿರುತ್ತೆ? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಅದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಮಾಧವನ್, ಆಟೋಗ್ರಾಫ್ ಬುಕ್ ಮೂಲಕ ಬುಕ್ಕಿಗಳು ಮಹತ್ವದ ಮಾಹಿತಿಗಳನ್ನು ಕಲೆ ಹಾಕಿ ಸ್ಪಾಟ್ ಫಿಕ್ಸಿಂಗ್ ಮಾಡಲು ಸಾಧ್ಯವಿದೆ. ಹೀಗಾಗಿ ಇದು ಆಟಗಾರರಿಗೆ ಮುಜುಗರವಾದರೂ ಈ ಕಠಿಣ ನಿರ್ಧಾರ ಅಗತ್ಯ ಎಂದಿದ್ದಾರೆ.

ಅಭಿಮಾನಿಗಳಿಗೆ ನಿರಾಶೆ, ವ್ಯಾಪಕ ನಿಷೇಧಕ್ಕೆ ಕರೆ
ಆಟಗಾರರ ಜೊತೆ ಫೋಟೋಗ್ರಾಫ್ ತೆಗೆಸಿಕೊಳ್ಳುವುದನ್ನು ಈಗಾಗಲೇ ಬಿಸಿಸಿಐ ನಿರ್ಬಂಧಿಸಿದೆ.ಈಗ ಆಟೋಗ್ರಾಫ್ ಗೆ ನಿಷೇಧ ಹೇರಿರುವುದು ಅಭಿಮಾನಿಗಳಿಗೆ ನಿರಾಶೆ ತಂದಿದೆ. ಅದರೆ, ಬಿಸಿಸಿಐ ತಾವು ಜಾರಿಗೆ ತಂದಿರುವ ನಿಯಮವನ್ನು ವಿಶ್ವದೆಲ್ಲೆಡೆ ಜಾರಿಗೊಳಿಸಲು ಮುಂದಾಗಿದೆ. ಈ ಬಗ್ಗೆ ಐಸಿಸಿಗೆ ಪತ್ರ ಬರೆಯುವುದಾಗಿ ಬಿಸಿಸಿಐ ಹೇಳಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications