ಯುಎಇ ಸಮರಕ್ಕೂ ಮುನ್ನ ಇಂಡಿಯಾ ಫ್ಯಾನ್ಸ್ ಗರಂ
ಪರ್ತ್, ಫೆ.26: ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಅತಿ ಜನಪ್ರಿಯ ತಂಡಗಳ ಪೈಕಿ ಟೀಂ ಇಂಡಿಯಾ ಅಗ್ರಸ್ಥಾನದಲ್ಲಿದೆ ಎಂದರೆ ತಪ್ಪಾಗಲಾರದು. ಅನಿವಾಸಿ ಭಾರತೀಯರು ಸೇರಿದಂತೆ ಕ್ರಿಕೆಟ್ ಪ್ರೇಮಿಗಳು ಭಾರತದ ಪಂದ್ಯ ನಡೆಯುವ ಮೈದಾನಗಳಲ್ಲಿ ತಂಡವನ್ನು ಹುರಿದುಂಬಿಸುವುದು ಕಂಡು ಬಂದಿದೆ. ಆದರೆ, ಟೀಂ ಇಂಡಿಯಾ ಆಟಗಾರರ ಮೇಲೆ ಫ್ಯಾನ್ಸ್ ಯಾಕೋ ಮುನಿಸಿಕೊಂಡಿದ್ದಾರೆ.
ಫೆ.22ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ ಭರ್ಜರಿ ಜಯ ಸಿಕ್ಕಿದ್ದರಲ್ಲಿ ಪ್ರೇಕ್ಷಕರ ಪಾಲು ಇತ್ತು ಎನ್ನಬಹುದು. ಫೆ.15 ರಂದು ಅಡಿಲೇಡ್ ನಲ್ಲಿ ಬದ್ಧವೈರಿ ಪಾಕಿಸ್ತಾನ ವಿರುದ್ಧದ ಕಾದಾಟಕ್ಕೆ ನಿರೀಕ್ಷೆಗೂ ಮೀರಿ ಫ್ಯಾನ್ಸ್ ಬಂದಿದ್ದರು. ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಪಂದ್ಯಕ್ಕೂ ಇದೇ ರೀತಿ ಪ್ರೇಕ್ಷಕರ ಬೆಂಬಲ ವ್ಯಕ್ತವಾಗಿತ್ತು. [ಪಾಕ್ ಬಗ್ಗು ಬಡಿದ ಆ ಕ್ಷಣ... ರೋಮಾಂಚನ]
ಅದರೆ, ತಮ್ಮ ಕ್ರಿಕೆಟ್ ಹೀರೋಗಳ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಮುಂದಾಗುವ ಅಭಿಮಾನಿಗಳಿಗೆ ನಿರಾಶೆ ಕಾದಿತ್ತು. ಬಿಸಿಸಿಐ ವಿಧಿಸಿದ ಕಟ್ಟಳೆಯೋ ಏನೋ ಅಭಿಮಾನಿಗಳಿಂದ ಕ್ರಿಕೆಟರ್ಸ್ ದೂರ ಸರಿಯುತ್ತಿದ್ದಾರೆ. ಇದರಿಂದ ಅಭಿಮಾನಿಗಳಿಗೆ ಸಹಜವಾಗಿ ಬೇಸರವಾಗಿದೆ. ಕ್ರಿಕೆಟರ್ಸ್ ಗೆ ಕೊಬ್ಬು ಜಾಸ್ತಿ ಎಂದು ಪಕ್ಕಾ ಆಸ್ಟ್ರೇಲಿಯನ್ ಸ್ಟೈಲಿನಲ್ಲಿ ಗೊಣಗಾಡಿದ್ದಾರಂತೆ. [ಟೀಂ ಇಂಡಿಯಾ ಪಂದ್ಯಗಳ ವೇಳಾಪಟ್ಟಿ]

ಫೆ.28ರಂದು ಯುಎಇ ವಿರುದ್ಧ ಪರ್ತ್ ಮೈದಾನದಲ್ಲಿ ಟೀಂ ಇಂಡಿಯಾ ಆಡಲಿದೆ. ಮೆಲ್ಬೋರ್ನ್ ನಲ್ಲಿ 85,000ಕ್ಕೂ ಅಧಿಕ ಪ್ರೇಕ್ಷಕರಲ್ಲಿ ಬಹುಪಾಲು 'ಬ್ಲೀಡ್ ಬ್ಲೂ' ಎಂದು ಟೀಂ ಇಂಡಿಯಾ ಪರ ಜೈಕಾರ ಹಾಕಿದ್ದರು. ಧೋನಿ ಕೂಡಾ ಫ್ಯಾನ್ಸ್ ಜೈಕಾರಕ್ಕೆ ಧನ್ಯವಾದ ಅರ್ಪಿಸಿದ್ದರು.[ಗಡಿ ಮೀರಿದ ಭಾರತದ ವಿಶ್ವಕಪ್ ಕನಸು]
ಅದರೆ, ಸೀನ್ ಬದಲಾಯಿತು ಫೆ.25ರಂದು ಪರ್ತ್ ನಲ್ಲಿ ಸಮರಕ್ಕೆ ಸಜ್ಜಾಗುತ್ತಿರುವ ಧೋನಿ ಹುಡುಗರು ಫ್ಯಾನ್ಸ್ ನತ್ತ ತಿರುಗಿ ಕೂಡಾ ನೋಡಿಲ್ಲ. ಸೆಲ್ಫಿ ಕಥೆ ಹಾಗಿರಲಿ, ಪ್ರೇಕ್ಷಕರತ್ತ ಕೈ ಬೀಸಿ ವಿಶ್ ಕೂಡಾ ಮಾಡಿಲ್ಲ ಎಂದು ಟೈಮ್ಸ್ ನೌ ವರದಿ ಮಾಡಿದೆ. [ದಕ್ಷಿಣ ಆಫ್ರಿಕಾಕ್ಕೆ ವಿಶ್ವಕಪ್, ಭಾರತದ ಕನಸು ಭಗ್ನ]
10 ರಿಂದ 15 ಜನ ಅಭಿಮಾನಿಗಳು ಕ್ರಿಕೆಟ್ ತಾರೆಗಳನ್ನು ನೋಡಲು ದೂರದ ಊರುಗಳಿಂದ ಬಂದಿದ್ದರು. ಅಭ್ಯಾಸ ಮುಗಿದ ಮೇಲೆ ಒಂದೆರಡು ನಿಮಿಷ ಜೊತೆ ನಿಂತು ಫೋಟೊ ತೆಗೆಸಿಕೊಳ್ಳಲು ಕೂಡಾ ಟೀಂ ಇಂಡಿಯಾ ಆಟಗಾರರು ನಿರಾಕರಿಸಿದ್ದು ಅಚ್ಚರಿಯ ವಿಷಯವಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ. [ಮೆಲ್ಬೋರ್ನ್ ನಲ್ಲಿ ಇತಿಹಾಸ ನಿರ್ಮಿಸಿದ ಧೋನಿ ಪಡೆ]
ಯುಎಇ ವಿರುದ್ದ ಮತ್ತೊಮ್ಮೆ ಟೀಂ ಇಂಡಿಯಾಗೆ ಪ್ರೇಕ್ಷಕರ ಬೆಂಬಲ ಸಿಗುತ್ತದೆ. ಅದರೆ, ನಿರಾಶೆಗೊಂಡ ಅಭಿಮಾನಿಗಳಿಗೆ ಉತ್ತರ ಹೇಳಲು ಯಾರೂ ಇರುವುದಿಲ್ಲ. ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ನಿಯಮಗಳನ್ನು ರೂಪಿಸುವ ಮೂಲಕ ಬಿಸಿಸಿಐ ಏನಾದರೂ ತಪ್ಪು ಮಾಡುತ್ತಿದೆಯೇ? ಇದಕ್ಕೆ ಕಾಲವೇ ಉತ್ತರಿಸಬೇಕು.
ಒನ್ ಇಂಡಿಯಾ ಸುದ್ದಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications