ಟೀಂ ಇಂಡಿಯಾಕ್ಕೆ ಯಾರು 'ಬಾಸ್' ರವಿ/ ಫ್ಲೆಚರ್?
ನವದೆಹಲಿ, ಆ.25: ಟೀಂ ಇಂಡಿಯಾ ಕೋಚ್ ಡಂಕನ್ ಫ್ಲೆಚರ್ 2015ರ ವಿಶ್ವಕಪ್‌ನ ತನಕ ಮುಂದುವರಿಯಲಿದ್ದಾರೆ ಎಂದು ನಾಯಕ ಮಹೇಂದ್ರ ಸಿಂಗ್ ಧೋನಿ ನೀಡಿರುವ ಹೇಳಿಕೆ ಈಗ ವಿವಾದ ಎಬ್ಬಿಸಿದೆ. ಟೀಂ ಇಂಡಿಯಾಕ್ಕೆ ಯಾರು ನಿಜವಾದ ಬಾಸ್? ರವಿಶಾಸ್ತ್ರಿನಾ? ಅಥವಾ ಡಂಕನ್ ಫ್ಲೆಚರ್ ? ಎಂಬ ಪ್ರಶ್ನೆ ಎದ್ದಿದೆ. ಧೋನಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಈ ಬಗ್ಗೆ ಮುಂದಿನ ಕಾರ್ಯಕಾರ್ತಿ ಸಮಿತಿ ಸಭೆಯಲ್ಲಿ ತೀರ್ಮಾನವಾಗಲಿದೆ ಎಂದಿದೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ನಾಯಕ ಧೋನಿ "ರವಿ ಶಾಸ್ತ್ರಿ ಕ್ರಿಕೆಟ್‌ನ ಎಲ್ಲ ವ್ಯವಹಾರಗಳನ್ನು ನೋಡಿಕೊಳ್ಳಲಿದ್ದಾರೆ. ಆದರೆ ಫ್ಲೆಚರ್ ತಂಡದ ಬಾಸ್ ಆಗಿರುತ್ತಾರೆ. ಅವರ ಅಧಿಕಾರವನ್ನು ಮೊಟಕುಗೊಳಿಸಲಾಗಿಲ್ಲ" ಎಂದು ಹೇಳಿಕೆ ನೀಡಿದ್ದಾರೆ.[ಟೀಂ ಇಂಡಿಯಾಕ್ಕೆ ರವಿಶಾಸ್ತ್ರಿ ಹೊಸ ಬಾಸ್]
ಆದರೆ, ಧೋನಿ ಅವರ ಹೇಳಿಕೆಯಿಂದ ಬಿಸಿಸಿಐ ಸಹಜವಾಗಿ ಆಕ್ರೋಶಗೊಂಡಿದೆ. ಇದು ಅವರ ವೈಯಕ್ತಿಕ ನಿಲುವು ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ. "ಧೋನಿ ಜೊತೆ ನಾನು ಈ ವಿಚಾರದಲ್ಲಿ ಮಾತನಾಡುವುದಿಲ್ಲ ಮತ್ತು ಬಿಸಿಸಿಐ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಬೇಕಾದ ಅಗತ್ಯತೆ ಇಲ್ಲ. ಕೋಚ್ ಕಾಲಾವಧಿ ನಿರ್ಧರಿಸುವುದು ನಾಯಕನ ಕೆಲಸವಲ್ಲ " ಎಂದು ಸಂಜಯ್ ಪಟೇಲ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ 3-1 ಅಂತರದಲ್ಲಿ ಭಾರತ ಸೋಲು ಅನುಭವಿಸಿದ ಬಳಿಕ ಕೋಚ್ ಡಂಕನ್ ಫ್ಲೆಚರ್ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಬಿಸಿಸಿಐ ಪ್ಲೆಚರ್‌ರನ್ನು ಕೋಚ್ ಹುದ್ದೆಯಿಂದ ಕೆಳಗಿಳಿಸದಿದ್ದರೂ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಮಾಜಿ ನಾಯಕ ರವಿ ಶಾಸ್ತ್ರಿ ಅವರನ್ನು ತಂಡದ ನಿರ್ದೇಶಕರಾಗಿ ಬಿಸಿಸಿಐ ನೇಮಕಗೊಳಿಸಿದೆ. [ಹೆಣ್ಣಿನ ಮೋಹ, ಕ್ರಿಕೆಟರ್ಸಲ್ಲಿ ಕಾಣದ ರನ್ ದಾಹ!]
ಬೌಲಿಂಗ್ ಕೋಚ್ ಜೋ ಡಾವ್ಸ್ ಮತ್ತು ಫೀಲ್ಡಿಂಗ್ ಕೋಚ್ ಟ್ರೆವರ್ ಪೆನ್ನೆ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಭಾರತ ತಂಡದ ಮಾಜಿ ಆಲ್‌ರೌಂಡರ್ ಸಂಜಯ್ ಬಂಗಾರ್, ಮಾಜಿ ವೇಗಿ ಭರತ್ ಅರುಣ್ ತಂಡದ ಸಹಾಯಕ ಕೋಚ್ ಹಾಗೂ ಆರ್.ಶ್ರೀಧರ್‌ರನ್ನು ಫೀಲ್ಡಿಂಗ್ ಕೋಚ್ ಆಗಿ ನೇಮಕಗೊಳಿಸುವ ಮೂಲಕ ಬಿಸಿಸಿಐ ಡಂಕನ್ ಫ್ಲೆಚರ್‌ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications