Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಒಲಿಂಪಿಕ್ಸ್ ಸಿದ್ಧತೆಗೆ 10 ಕೋಟಿ ದೇಣಿಗೆ ನೀಡಲು ನಿರ್ಧರಿಸಿದ ಬಿಸಿಸಿಐ

BCCI decided to donate INR 10 crore to help athletes prepare for the Tokyo Olympics

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭಾನುವಾರ ವರ್ಚುವಲ್ ಸಭೆ ನಡೆಸಿ ಒಲಿಂಪಿಕ್ಸ್ ಸಿದ್ಧತೆಗಾಗಿ 10 ಕೋಟಿ ನೀಡಲು ನಿರ್ಧಾರವನ್ನು ಕೈಗೊಂಡಿದೆ. ಆಟಗಾರರ ಅಂತಿಮ ಹಂತದ ಸಿದ್ಧತೆ ಹಾಗೂ ಪ್ರಚಾರಕ್ಕಾಗಿ ಈ ಮೊತ್ತವನ್ನು ವಿನಿಯೋಗಿಸಲಾಗುತ್ತದೆ. ಭಾನುವಾರ ಈ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಶಾ ನೇತೃತ್ವದಲ್ಲಿ ತುರ್ತು ಸಭೆಯನ್ನು ಕರೆಯಲಾಗಿತ್ತು. ಈ ಮೀಟಿಂಗ್‌ನಲ್ಲಿ ಬಿಸಿಸಿಐ ಈ ನಿರ್ಧಾರವನ್ನು ಕೈಗೊಂಡಿದೆ.

ಈ ಬಗ್ಗೆ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ಪ್ರತಿಕ್ರಿಯೆ ನೀಡಿ ಸ್ಪಷ್ಟ ಪಡಿಸಿದ್ದಾರೆ. "ಹೌದು, ಬಿಸಿಸಿಐ ಒಲಿಂಪಿಕ್ಸ್‌ಗೆ ತೆರಳುವ ತಂಡಕ್ಕೆ ಸಹಾಯವನ್ನು ಮಾಡಲಿದೆ. ಭಾರತೀಯ ಕ್ರಿಕೆಟ್‌ನ ಉನ್ನತ ಸಂಸ್ಥೆ ಬಿಸಿಸಿಐ ಮುಂಬರುವ ಒಲಿಂಪಿಕ್ಸ್‌ಗಾಗಿ 10 ಕೋಟಿ ನೆರವು ನೀಡುವ ನಿರ್ಧಾರವನ್ನು ತೆಗೆದುಕೊಂಡಿದೆ" ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

"ಟೋಕಿಯೊ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ನಮ್ಮಭಾರತೀಯ ಕ್ರೀಡಾಪಟುಗಳ ತಯಾರಿ ಮತ್ತು ಇತರ ಆಕಸ್ಮಿಕ ಉದ್ದೇಶಗಳಿಗಾಗಿ ಈ ನಿಧಿಯನ್ನು ಬಳಸಲಾಗುತ್ತದೆ. ಕ್ರೀಡಾ ಸಚಿವಾಲಯ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನೊಂದಿಗೆ ಮಾತನಾಡಿದ ನಂತರ ಈ ದೇಣೀಗೆ ನೀಡುವ ವಿಧಾನದ ಬಗ್ಗೆ ಅಂತಿಮಗೊಳಿಸಲಾಗುತ್ತದೆ" ಎಂದು ಅವರು ತಿಳಿಸಿದ್ದಾರೆ.

ಮೂಲಗಳ ಮಾಹಿತಿಯ ಪ್ರಕಾರ ಬಿಸಿಸಿಐ ನೀಡಿದ 10 ಕೋಟಿ ಮೊತ್ತದಲ್ಲಿ 2.5 ಕೋಟಿ ರೂಪಾಯಿ ಆಟಗಾರರ ಸಿದ್ಧತೆಗೆ ಹಾಗೂ ಉಳಿದ 7.5 ಕೋಟಿ ರೂಪಾಯಿ ಕ್ರೀಡಾಕೂಡದ ಮಾರ್ಕೆಟಿಂಗ್ ಹಾಗೂ ಪ್ರಚಾರ ಕಾರ್ಯಕ್ಕೆ ಬಳಸಲಾಗುತ್ತದೆ ಎಂದು ತಿಳಿದುಬಂದಿದೆ. ಜುಲೈ 23ರಿಂದ ಟೋಕಿಯೋ ಒಲಿಂಪಿಕ್ಸ್ ಆರಂಭವಾಗಲಿದೆ.

Story first published: Sunday, June 20, 2021, 20:42 [IST]
Other articles published on Jun 20, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+