ವಿಂಡೀಸ್ ಮಂಡಳಿಗೆ ನಷ್ಟ ಕೇಳಿದ ಬಿಸಿಸಿಐ
ನವದೆಹಲಿ, ನ. 1: ಭಾರತ-ವೆಸ್ಟ್ ಇಂಡೀಸ್ ನಡುವಿನ ಕ್ರಿಕೆಟ್ ಸರಣಿ ಅರ್ಧಕ್ಕೆ ಮೊಟಕಾದ್ದರಿಂದ ಭಾರೀ ನಷ್ವಾಗಿದ್ದು 42 ಮಿಲಿಯನ್ ಡಾಲರ್ ಹಣ ಪಾವತಿಸುವಂತೆ ಬಿಸಿಸಿಐ ವಿಂಡೀಸ್ ಕ್ರಿಕೆಟ್ ಮಂಡಳಿಗೆ ಒತ್ತಡ ಹೇರಿದೆ.
ಕಳೆದ ತಿಂಗಳಲ್ಲಿ ಆರಂಭವಾಗಿದ್ದ ಭಾರತ-ವೆಸ್ಟ್ ಇಂಡೀಸ್ ಸರಣಿಯನ್ನು ಕಾರಣಾಂತರಗಳಿಂದ ಅರ್ಧಕ್ಕೆ ಮೊಟಕು ಮಾಡಿದ ವಿಂಡೀಸ್ ಆಟಗಾರರು ತವರಿಗೆ ತೆರಳಿದ್ದರು. ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ವೇತನ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ವಿಂಡೀಸ್ ಕ್ರಿಕೆಟಿಗರು ಹಿಂದಿರುಗಿದ್ದರು.[ಯುದ್ಧಕ್ಕೆ ಮೊದಲೇ ಶಸ್ತ್ರತ್ಯಾಗ, ವಿಂಡೀಸ್ ಮನೆಗೆ]

ನಿಗದಿಯಂತೆ ವಿಂಡೀಸ್ ಆಟಗಾರರು ಇನ್ನು 1 ಏಕದಿನ ಪಂದ್ಯ, 1 ಟಿ20 ಪಂದ್ಯ ಮತ್ತು 3 ಟೆಸ್ಟ್ ಆಡಬೇಕಿತ್ತು. ಆದರೆ ಅರ್ಧಕ್ಕೆ ಪಂದ್ಯಾವಳಿ ಬಂದ್ ಆಗಿರುವುದರಿಂದ ಜಾಹೀರಾತುದಾರರು ಮತ್ತು ಆಯೋಜಕರಿಗೆ ನಷ್ಟವಾಗಿದ್ದು ಇದನ್ನು ವಿಂಡೀಸ್ ಮಂಡಳಿಯೇ ಭರಿಸಿ ಕೊಡಬೇಕು ಎಂದು ಬಿಸಿಸಿಐ ಹೇಳಿದೆ.
ಈ ಬಗ್ಗೆ ಬಿಸಿಸಿಐ ಅಧಿಕೃತವಾಗಿ ಪತ್ರವೊಂದನ್ನು ವಿಂಡೀಸ್ ಕ್ರಿಕೆಟ್ ಮಂಡಳಿಗೆ ಬರೆದಿದ್ದು 15 ದಿನದೊಳಗೆ ಸಮರ್ಪಕ ಉತ್ತರ ನೀಡುವಂತೆ ತಿಳಿಸಿದೆ. ಇಲ್ಲವಾದಲ್ಲಿ ಕಾನೂನು ರೀತಿಯಲ್ಲೇ ಕ್ರಮ ತೆಗೆದುಕೊಳ್ಳಬೇಕಾಗುವುದು ಎಂದು ಎಚ್ಚರಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications