Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದೇಸಿ ಕ್ರಿಕೆಟ್ 2021-22ರ ವೇಳಾಪಟ್ಟಿ ಘೋಷಿಸಿದ ಬಿಸಿಸಿಐ

BCCI Domestic Schedule 2021-22: BCCI announces India’s domestic season for 2021-22

ನವದೆಹಲಿ: ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) 2021-22ರ ಸಾಲಿನ ದೇಸಿ ಕ್ರಿಕೆಟ್ ವೇಳಾಪಟ್ಟಿಗಳನ್ನು ಶನಿವಾರ (ಜುಲೈ 3) ಘೋಷಿಸಿದೆ. ಕೋವಿಡ್‌-19 ಕಾರಣದಿಂದ ಅಡಚಣೆಗೀಡಾಗಿದ್ದ ದೇಸಿ ಕ್ರಿಕೆಟ್ ಮತ್ತೆ ಮರಳಿದೆ. ಈ ಸೆಪ್ಟೆಂಬರ್‌ನಿಂದ ಮುಂದಿನ ವರ್ಷದ ಕೆಲ ತಿಂಗಳವರೆಗೆ ದೇಸಿ ಕ್ರಿಕೆಟ್ ಟೂರ್ನಿಗಳು ನಡೆಯಲಿವೆ. ಕೋವಿಡ್-19 ಪ್ರಕರಣಗಳ ಕಾರಣ ರದ್ದಾಗಿದ್ದ ರಣಜಿ ಕ್ರಿಕೆಟ್ ಟೂರ್ನಿ ನವೆಂಬರ್‌ನಿಂದ ಫೆಬ್ರವರಿ ವರೆಗೆ ನಡೆಯಲಿದೆ.

"ಸೆಪ್ಟೆಂಬರ್ 21ರಿಂದ ದೇಸಿ ಕ್ರಿಕೆಟ್ ಸೀಸನ್ ಆರಂಭಗೊಳ್ಳಲಿದೆ. ಸೀನಿಯರ್ ವಿಮೆನ್ಸ್ ಒನ್‌ಡೇ ಲೀಗ್‌ ಬಳಿಕ ಸೀನಿಯರ್ ವಿಮೆನ್ಸ್ ಒನ್‌ಡೇ ಚಾಲೆಂಜ್‌ ಟ್ರೋಫಿ ನಡೆಯಲಿದೆ. ಇದು ಅಕ್ಟೋಬರ್‌ 27ಕ್ಕೆ ಆರಂಭಗೊಳ್ಳಲಿದೆ," ಎಂದು ಬಿಸಿಸಿಐ ಅಧಿಕೃತ ವೆಬ್‌ಸೈಟ್ ತಿಳಿಸಿದೆ.

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ

"ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಅಕ್ಟೋಬರ್‌ 20ರಿಂದ ಆರಂಭಗೊಳ್ಳಲಿದೆ. ಇದರ ಫೈನಲ್ ಪಂದ್ಯ ನವೆಂಬರ್ 12ಕ್ಕೆ ನಡೆಯಲಿದೆ. ರಣಜಿ ಟ್ರೋಫಿ ನವೆಂಬರ್‌ 16ರಿಂದ ಶುರುವಾಗಲಿದೆ. 19 ಫೆಬ್ರವರಿ 2022ಕ್ಕೆ ಇದು ಮುಕ್ತಾಯಗೊಳ್ಳಲಿದೆ," ಎಂದು ಬಿಸಿಸಿಐ ಹೇಳಿದೆ.

ವಿಜಯ್ ಹಜಾರೆ ಟ್ರೋಫಿ

ವಿಜಯ್ ಹಜಾರೆ ಟ್ರೋಫಿ

"50 ಓವರ್‌ಗಳ ವಿಜಯ್ ಹಜಾರೆ ಟ್ರೋಫಿ ಟೂರ್ನಿ ರಣಜಿ ಟ್ರೋಫಿ ಮುಗಿದು ಮೂರು ದಿನಗಳ ಬಳಿಕ ಆರಂಭಗೊಳ್ಳಲಿದೆ. ಅಂದರೆ ಫೆಬ್ರವರಿ 23ರಂದು ಶುರುವಾಗುವ ಮುಷ್ತಾಕ್ ಅಲಿ ಮಾರ್ಚ್ 26ರಂದು ಫೈನಲ್‌ನೊಂದಿಗೆ ಕೊನೆಗೊಳ್ಳಲಿದೆ.

Ravi Shastri ಸ್ಥಾನ ತುಂಬಬಲ್ಲ ಈ ಮಾಜಿ ಆಟಗಾರರಲ್ಲಿ ಯಾರು ಬೆಸ್ಟ್? | Team Indian Coach | Oneindia Kannada

2127 ದೇಸಿ ಕ್ರಿಕೆಟ್‌ ಪಂದ್ಯಗಳು

"ಒಟ್ಟು 2127 ದೇಸಿ ಕ್ರಿಕೆಟ್‌ ಪಂದ್ಯಗಳು ಈ ಸೀಸನ್‌ನಲ್ಲಿ ವಿವಿಧ ವಯೋಮಾನ, ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಬೇರೆ ಬೇರೆ ತಾಣಗಳಲ್ಲಿ ನಡೆಯಲಿದೆ. ಆರೋಗ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ದೇಸಿ ಕ್ರಿಕೆಟ್ ಟೂರ್ನಿಯನ್ನು ಯಶಸ್ವಿಯಾಗಿ ನಡೆಸುವ ಬಗ್ಗೆ ಬಿಸಿಸಿಐ ಭರವಸೆ ಹೊಂದಿದೆ," ಎಂದು ಬಿಸಿಸಿಐ ತಿಳಿಸಿದೆ.

Story first published: Saturday, July 3, 2021, 18:04 [IST]
Other articles published on Jul 3, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+