4 ತಿಂಗಳ ಐಪಿಎಲ್ ಪ್ರಾಯೋಜಕತ್ವಕ್ಕೆ ಬಿಡ್ ಆಹ್ವಾನಿಸಿದ ಬಿಸಿಸಿಐ

ನವದೆಹಲಿ, ಆಗಸ್ಟ್ 11: ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾಯೋಜಕತ್ವದಿಂದ ವಿವೋ ಹಿಂದೆ ಸರಿದಿರುವುದರಿಂದ ಆ ಜಾಗಕ್ಕೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಈ ವರ್ಷ ಆಗಸ್ಟ್ 18ರಿಂದ ಡಿಸೆಂಬರ್ 31ರ ವರೆಗೆ ಪ್ರಾಯೋಜಕತ್ವ ನೀಡಲು ಬಿಡ್‌ಗೆ ಆಹ್ವಾನ ನೀಡಲಾಗಿದೆ.
4 ತಿಂಗಳ ಕಾಲ ಐಪಿಎಲ್ ಪ್ರಾಯೋಜಕತ್ವದ ಹಕ್ಕಿನ ಬಿಡ್ ಗೆಲ್ಲಲು ಆಸಕ್ತರು ಆಗಸ್ಟ್ 14ರ ಒಳಗೆ ಆರ್ಜಿ ಸಲ್ಲಿಸಬೇಕಿದೆ. ಅದಾಗಿ 4 ದಿನಗಳ ಬಳಿಕ ಬಿಸಿಸಿಐ ಬಿಡ್ ವಿಜೇತರನ್ನು ಘೋಷಿಸಲಿದೆ. ಬಿಡ್ ವಿಜೇತರು ಅತ್ಯಧಿಕ ಬಿಡ್ ಮಾಡಿದವರು ಆಗಬೇಕಿಲ್ಲ, ಅದು ಬೇರೆ ಅಂಶಗಳನ್ನೂ ಅವಲಂಭಿಸಿ ನಿರ್ಧರಿಸಲಾಗುತ್ತದೆ ಎಂದು ಬಿಸಿಸಿಐ ಹೇಳಿದೆ.
ವಾರ್ಷಿಕವಾಗಿ 300 ಕೋ.ರೂ.ಗಿಂತಲೂ ಅಧಿಕ ವಹಿವಾಟು ಹೊಂದಿರುವ ಕಂಪನಿಗಳು ಮಾತ್ರ ಐಪಿಎಲ್ ಪ್ರಾಯೋಜಕತ್ವದ ಬಿಡ್‌ಗೆ ಅರ್ಹರು ಎಂದು ಬಿಸಿಸಿಐ ಸ್ಪಷ್ಟವಾಗಿ ಹೇಳಿದೆ. ಬಾಬಾ ರಾಮ್‌ದೇವ್ ಅವರ ಪತಂಜಲಿ ಕಂಪನಿ ಕೂಡ ಐಪಿಎಲ್ ಪ್ರಾಯೋಜಕತ್ವದ ಬಿಡ್‌ನತ್ತ ಆಸಕ್ತಿ ತೋರಿದೆ.
'ಅನುಮಾನವನ್ನು ತಪ್ಪಿಸಲು, ಚರ್ಚೆಗಳು/ಮಾತುಕತೆಗಳ ಸಂದರ್ಭದಲ್ಲಿ ಹೆಚ್ಚಿನ ಶುಲ್ಕವನ್ನು ಪಾವತಿಸುವ ಇಚ್ಛೆಯನ್ನು ಸೂಚಿಸುವ ಮೂರನೇ ವ್ಯಕ್ತಿಗೆ ಹಕ್ಕುಗಳನ್ನು ನೀಡಲು ಬಿಸಿಸಿಐ ನಿರ್ಬಂಧವನ್ನು ಹೊಂದಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ,' ಎಂದು ಬಿಸಿಸಿಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications