Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹಿಳಾ IPL ಲೀಗ್ ಕುರಿತು ಸೌರವ್ ಗಂಗೂಲಿ ಸ್ಪಷ್ಟನೆ: ಸದ್ಯದಲ್ಲೇ ಟೂರ್ನಿ ಕುರಿತು ಘೋಷಣೆ

Sourav ganguly

ಮಹಿಳಾ ಐಪಿಎಲ್ ನಿರ್ವಹಣೆ ವಿಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟನೆ ನೀಡಿದ್ದಾರೆ. ಮುಂದಿನ ವರ್ಷದಿಂದ ಮಹಿಳಾ ಟಿ20 ಲೀಗ್ ಆಯೋಜಿಸಲಾಗುವುದು ಎಂದಿದ್ದಾರೆ.

ಈ ನಿಟ್ಟಿನಲ್ಲಿ ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳಿಗೆ ಗುರುವಾರ ಮಹತ್ವದ ಮಾಹಿತಿ ನೀಡಿದರು. ಪ್ರಪಂಚದಾದ್ಯಂತ ಐಪಿಎಲ್ ಎಷ್ಟು ಜನಪ್ರಿಯವಾಗಿದೆ ಎಂದು ಹೇಳಬೇಕಾಗಿಲ್ಲ. ಅದಕ್ಕಾಗಿಯೇ ಮಹಿಳೆಯರಿಗಾಗಿಯೇ ಐಪಿಎಲ್ ನಡೆಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಇತ್ತು. ಈ ಕ್ರಮದಲ್ಲಿ ಬಿಸಿಸಿಐ ಟಿ20 ಚಾಲೆಂಜ್ ಹೆಸರಿನಲ್ಲಿ ಕೆಲ ಪಂದ್ಯಗಳನ್ನು ಆಯೋಜಿಸುತ್ತಿದ್ದರೂ ಪೂರ್ಣ ಪ್ರಮಾಣದ ಟೂರ್ನಿ ಆಯೋಜಿಸಿಲ್ಲ.

ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ಐಪಿಎಲ್ ಆಯೋಜಿಸುವುದು ಸರಿ ಎಂದು ಭಾವಿಸಿದ ಬಿಸಿಸಿಐ ಆ ನಿಟ್ಟಿನಲ್ಲಿ ಕಸರತ್ತು ಆರಂಭಿಸಿದೆ. ಅದರ ಭಾಗವಾಗಿ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಹಿಳಾ ಐಪಿಎಲ್ ನಿರ್ವಹಣೆಯ ಕುರಿತು ಪ್ರಮುಖ ಅಪ್‌ಡೇಟ್‌ ನೀಡಿದರು. ಪುರುಷರ ಐಪಿಎಲ್ ಬಗ್ಗೆಯೂ ಅವರು ಪ್ರಮುಖ ಘೋಷಣೆ ಮಾಡಿದ್ದಾರೆ. ಮುಂದಿನ ಸೀಸನ್ ಅನ್ನು ಕೊರೊನಾಗಿಂತ ಮೊದಲು ನಡೆಸಿದಂತೆ 'ಹೋಮ್ ಗ್ರೌಂಡ್-ಅವೇ ಗ್ರೌಂಡ್' ಶೈಲಿಯಲ್ಲಿ ನಡೆಸಲಾಗುವುದು ಎಂದು ಗಂಗೂಲಿ ಹೇಳಿದ್ದಾರೆ. ಕಳೆದ ಋತುವಿನಲ್ಲಿ ಕೇವಲ ನಾಲ್ಕು ಮೈದಾನಗಳಿಗೆ ಮಾತ್ರ ಐಪಿಎಲ್ ಸೀಮಿತವಾಗಿತ್ತು.

ಸದ್ಯ ಬಿಸಿಸಿಐ ಮಹಿಳಾ ಐಪಿಎಲ್‌ ಕುರಿತಾಗಿ ಬಿಸಿಸಿಐ ಕೆಲಸ ಮಾಡುತ್ತಿದೆ. ಮುಂದಿನ ವರ್ಷ ಈ ಬಹುನಿರೀಕ್ಷಿತ ಪಂದ್ಯಾವಳಿಯನ್ನು ಆಯೋಜಿಸಲು ನಾವು ಸಿದ್ಧರಾಗಿದ್ದೇವೆ. ಅಲ್ಲದೆ, ಪುರುಷರ ಟಿ20 ಲೀಗ್‌ನಲ್ಲೂ ಈ ಹಿಂದೆ ತಂಡದ ಸ್ವಂತ ಮೈದಾನದಲ್ಲಿ ಆಡುವ ಅವಕಾಶವಿತ್ತು. ಆದರೆ, ಕೊರೊನಾದಿಂದಾಗಿ ಕಳೆದ ಸೀಸನ್ ಸಾಧ್ಯವಾಗಿರಲಿಲ್ಲ. ಅದಕ್ಕಾಗಿಯೇ ನಾವು ಮುಂದಿನ ಸೀಸನ್‌ಗೆ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಗಂಗೂಲಿ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ತಿಳಿಸಿದರು.

Story first published: Friday, September 23, 2022, 11:32 [IST]
Other articles published on Sep 23, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+